More

    ಏಷ್ಯನ್ ಗೇಮ್ಸ್​-2023: ಚಿನ್ನ ಗೆದ್ದ ನೀರಜ್ ಚೋಪ್ರಾ; 81ಕ್ಕೆ ಏರಿತು ಭಾರತದ ಪದಕಗಳ ಸಂಖ್ಯೆ

    ಚೀನಾ: ಏಷ್ಯನ್ ಗೇಮ್ಸ್​ 2023ರಲ್ಲಿ ನೀರಜ್​ ಚೋಪ್ರಾ ಇಂದು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಈ ಮೂಲಕ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರ 11ನೇ ದಿನದಲ್ಲಿ ಭಾರತದ ಪದಕಗಳ ಸಂಖ್ಯೆ 81ಕ್ಕೆ ಏರಿದೆ.

    ಭಾರತದ ಪ್ರಪ್ರಥಮ ಒಲಿಂಪಿಕ್ ಅಥ್ಲೆಟಿಕ್ಸ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಈ ಏಷ್ಯನ್ ಗೇಮ್ಸ್​ನಲ್ಲಿ 88.88 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಹಿಂದೆ ಬುಡಾಪೆಸ್ಟ್​ನಲ್ಲಿ ಎಸೆದಿದ್ದಕ್ಕಿಂತಲೂ 0.7 ಮೀಟರ್ ದೂರಕ್ಕೆ ಎಸೆದಿದ್ದಾರೆ.

    ಮತ್ತೊಂದೆಡೆ ಇಂದು ನಡೆದ ಕಾಂಪೌಂಡ್ ಆರ್ಚರಿ ಮಿಕ್ಸೆಡ್​​​ ಟೀಂ ಫೈನಲ್‌ನಲ್ಲಿ ಭಾರತದ ಆಟಗಾರರಾದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಸ್ ಡಿಯೋಟಾಲೆ ಅವರು ಚಿನ್ನ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್​ ಗೇಮ್ಸ್​ನಲ್ಲಿ 11ನೇ ದಿನಕ್ಕೆ ಭಾರತ ಗಳಿಸಿದ ಪದಕಗಳ ಸಂಖ್ಯೆ 81ಕ್ಕೆ ಏರಿದೆ.

    2023ರ ಈ ಏಷ್ಯನ್ ಗೇಮ್ಸ್​ನಲ್ಲಿ ಇದುವರೆಗೆ 18 ಚಿನ್ನ, 31 ಬೆಳ್ಳಿ ಹಾಗೂ 32 ಕಂಚುಗಳೊಂದಿಗೆ ಭಾರತ ಒಟ್ಟು 81 ಪದಕಗಳನ್ನು ಗಳಿಸಿದೆ. ಇದು 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಗಳಿಸಿದ್ದ ಪದಕಗಳಿಗಿಂತಲೂ ಅಧಿಕ. ಅಂದರೆ ಆ ಏಷ್ಯನ್ ಗೇಮ್ಸ್​ನಲ್ಲಿ ಭಾರತ 70 ಪದಕಗಳನ್ನು ಗಳಿಸಿತ್ತು.

    ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

    ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts