More

    ಹೋಟೆಲ್ ಮ್ಯಾನೇಜ್​​ಮೆಂಟ್​ ಪ್ರವೇಶ ಪರೀಕ್ಷೆ ಮುಂದಕ್ಕೆ; ಮೇ 31 ರವರೆಗೆ ಎನ್​ಸಿಹೆಚ್​ಎಂ ಜೆಇಇ ನೋಂದಣಿಗೆ ಅವಕಾಶ

    ನವದೆಹಲಿ : ಕರೊನಾ ಹಿನ್ನೆಲೆಯಲ್ಲಿ ಒಂದೊಂದಾಗಿ ಶಾಲೆಗಳಿಂದ ಹಿಡಿದು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳವರೆಗೆ ಎಲ್ಲವೂ ರದ್ದು ಇಲ್ಲ ಮುಂಡೂಡಲ್ಪಡುತ್ತಿವೆ. ಇದೀಗ, ಹೊಟೆಲ್​​ ಮ್ಯಾನೇಜ್​​ಮೆಂಟ್​ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಎನ್​ಟಿಎ ನಡೆಸುವ ಎನ್​ಸಿಹೆಚ್​ಎಂ ಜೆಇಇ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ.

    ಎನ್​ಸಿಹೆಚ್​ಎಂ ಜೆಇಇ 2021 ಪರೀಕ್ಷೆಯು ಜೂನ್​ 12 ರಂದು ನಡೆಯಬೇಕೆಂದು ನಿಗದಿಯಾಗಿತ್ತು. ಆದರೆ ಕರೊನಾದಿಂದಾಗಿ ಆಗಿರುವ ಅನಾನುಕೂಲದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ನಂತರದಲ್ಲಿ ಎನ್​ಟಿಎನ ಅಧಿಕೃತ ವೆಬ್​ಸೈಟ್​ nta.ac.inನಲ್ಲಿ ಪ್ರಕಟಿಸಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

    ಈ ಪರೀಕ್ಷೆ ತೆಗೆದುಕೊಳ್ಳಲು ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ನೋಂದಣಿ ದಿನಾಂಕ ಮತ್ತು ಇತರ ಸಂಬಂಧಿತ ದಿನಾಂಕಗಳನ್ನು ಕೂಡ ಬದಲಿಸಲಾಗಿದೆ. ಇದೀಗ ಮೇ 31 ರವರೆಗೆ ನ್ಯಾಷನಲ್ ಕೌನ್ಸಿಲ್​ ಫಾರ್ ಹೋಟೆಲ್ ಮ್ಯಾನೇಜ್​​ಮೆಂಟ್ ಜಾಯಿಂಟ್ ಎನ್​ಟ್ರೆನ್ಸ್ ಎಕ್ಷಾಮಿನೇಷನ್​ಗೆ ಕೂರಲು ಬಯಸುವವರು ಆನ್​ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. (ಏಜೆನ್ಸೀಸ್)

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಅಮ್ಮನನ್ನು ಉಳಿಸಲು ಬಾಯಿಂದ ಉಸಿರು ತುಂಬಿದಳು ! ಮನ ಕಲಕುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts