More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15 ಕೇಂದ್ರಗಳು ಸಿದ್ಧ

    ಕಡೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.25ರಂದು ಪ್ರಾರಂಭವಾಗಲಿದ್ದು, ಕಡೂರು-ಬೀರೂರು ಶೈಕ್ಷಣಿಕ ವಲಯಗಳ 15 ಕೇಂದ್ರಗಳಲ್ಲಿ 3908 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

    ಕಡೂರು ಶೈಕ್ಷಣಿಕ ವಲಯದಲ್ಲಿ ಒಟ್ಟು 63 ಶಾಲೆಗಳ 1326 ಬಾಲಕರು, 1155 ಬಾಲಕಿಯರು, ಖಾಸಗಿ ಹಾಗೂ ಪುನರಾವರ್ತಿತ 137 ವಿದ್ಯಾರ್ಥಿಗಳು ಸೇರಿ ಒಟ್ಟು 2618 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹತ್ತು ಪರೀಕ್ಷಾ ಅಧೀಕ್ಷಕರು, ಕಸ್ಟೋಡಿಯನ್ಸ್, ಮೊಬೈಲ್ ಸ್ವಾಧೀನಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿರುತ್ತಾರೆ.
    ಕಡೂರು ಶೈಕ್ಷಣಿಕ ವಲಯದಲ್ಲಿ ಕಡೂರು, ಪಂಚನಹಳ್ಳಿ ಮತ್ತು ಯಗಟಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿಂಗಟಗೆರೆ ಕಲ್ಲೇಶ್ವರ ಪದವಿ ಪೂರ್ವ ಕಾಲೇಜು, ಚೌಳಹಿರಿಯೂರು ಕೆಪಿಎಸ್, ಕಡೂರಿನ ವೇದಾವತಿ ಬಾಲಿಕಾ ಮತ್ತು ಬಿಜಿಎಸ್ ಪ್ರೌಢಶಾಲೆಗಳು, ಹೇಮಗಿರಿ ಮಲ್ಲಿಕಾರ್ಜುನ ಗ್ರಾಮಾಂತರ ಪ್ರೌಢಶಾಲೆ, ಹೋಚಿಹಳ್ಳಿ ಬೀರಲಿಂಗೇಶ್ವರ ಪ್ರೌಢಶಾಲೆ ಮತ್ತು ಗಿರಿಯಾಪುರದ ಗುರುಕೃಪಾ ಪ್ರೌಢಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ.
    ಬೀರೂರು ಶೈಕ್ಷಣಿಕ ವಲಯ ವ್ಯಾಪ್ತಿಯ ಬೀರೂರು, ಲಿಂಗದಹಳ್ಳಿ, ದೇವನೂರು, ಸಖರಾಯಪಟ್ಟಣ, ಜೋಡಿಹೋಚಿಹಳ್ಳಿ ಪರೀಕ್ಷಾ ಕೇಂದ್ರಗಳಲ್ಲಿ 623 ಬಾಲಕರು, 609 ಬಾಲಕಿಯರು, ಖಾಸಗಿ ಮತ್ತು ಪುನರಾರ್ವತಿತ 58 ಸೇರಿದಂತೆ ಒಟ್ಟು 1290 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
    ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಸ್ಥಾನಿಕ ಜಾಗೃತ ದಳದ ಅಧಿಕಾರಿ ಕಾರ್ಯನಿರ್ವಹಿಸಲಿದ್ದು, ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಪ್ರದರ್ಶಿಸಲಾಗುತ್ತದೆ. ಸಿಸಿ ಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿರ್ಭೀತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts