More

    ಎನ್​​ಸಿಬಿ ಉಪನಿರ್ದೇಶಕ ಮಲ್ಹೋತ್ರಾರಿಂದ ವಿಚಾರಣೆಗೆ ಒಳಪಟ್ಟಿದ್ದ ದೀಪಿಕಾಗೆ ಮತ್ತೊಂದು ಆತಂಕ

    ನವದೆಹಲಿ: ಡ್ರಗ್ಸ್​ ಲಿಂಕ್​ಗೆ ಸಂಬಂಧಪಟ್ಟಂತೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ)ದ ಉಪನಿರ್ದೇಶಕ ಕೆಪಿಎಸ್​ ಮಲ್ಹೋತ್ರಾ ನೇತೃತ್ವದ ತಂಡ ವಿಚಾರಣೆ

    ಮಾಡುತ್ತಿದೆ. ಆದರೆ ಈಗ ಕೆಪಿಎಸ್​ ಮಲ್ಹೋತ್ರಾ ಅವರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ದೀಪಿಕಾ ಸೇರಿ ಹಲವು ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.

    ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಮಾದಕ ದ್ರವ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಈಗಾಗಲೇ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​, ಸಾರಾ ಅಲಿ ಖಾನ್​, ರಾಕುಲ್ ಪ್ರೀತ್​ ಸಿಂಗ್​ ಅವರನ್ನು ಎನ್​ಸಿಬಿ ವಿಚಾರಣೆ ಮಾಡಿದ್ದು, ಶೀಘ್ರದಲ್ಲೇ ಇನ್ನಷ್ಟು ಮಂದಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
    ಸದ್ಯ ಮಲ್ಹೋತ್ರಾ ಅವರು ಮುಂಬೈನಿಂದ ದೆಹಲಿಗೆ ತೆರಳಿದ್ದಾರೆ. ಅವರ ಪ್ರಾಥಮಿಕ ಸಂಪರ್ಕದಲ್ಲಿ ಬಂದ ದೀಪಿಕಾ ಪಡುಕೋಣೆ ಸೇರಿ ಉಳಿದ ಅಧಿಕಾರಿಗಳೂ ಟೆಸ್ಟ್​ಗೆ ಒಳಪಡುವುದು ಅನಿವಾರ್ಯವಾಗಿದೆ. (ಏಜೆನ್ಸೀಸ್​)

    ಡೊನಾಲ್ಡ್​ ಟ್ರಂಪ್​ ದಾಖಲಾಗಿರುವ ಆಸ್ಪತ್ರೆ ಬಳಿ ಅನುಮಾನಾಸ್ಪದ ಬ್ಯಾಗ್​ ಪತ್ತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts