More

    ಡ್ರಗ್ಸ್​ ಲಿಸ್ಟ್​ನಲ್ಲಿ ಬಾಲಿವುಡ್​ ಕಲಾವಿದರು ಇಲ್ಲ … ಎನ್​.ಸಿ.ಬಿ ಸ್ಪಷ್ಟನೆ

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಡ್ರಗ್ಸ್​ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಟಿ ರಿಯಾ ಚಕ್ರವರ್ತಿ ಅವರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​.ಸಿ.ಬಿ) ಬಂಧಿಸಿದೆ. ಈ ಸಂದರ್ಭದಲ್ಲಿ ರಿಯಾ ಚಕ್ರವರ್ತಿ 25 ಬಾಲಿವುಡ್​ ಕಲಾವಿದರ ಹೆಸರನ್ನು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಎನ್​.ಸಿ.ಬಿ ಹೇಳಿದೆ.

    ರಿಯಾ ಚಕ್ರವರ್ತಿ ತನಿಖೆ ಸಂದರ್ಭದಲ್ಲಿ ಡ್ರಗ್ಸ್​ ದಂಧೆಯಲ್ಲಿ ಬಾಲಿವುಡ್​ನ 25 ಜನಪ್ರಿಯ ಕಲಾವಿದರ ಹೆಸರುಗಳನ್ನು ರಿಯಾ ಹೇಳಿದ್ದರಂತೆ, ಈ ಪೈಕಿ ರಾಕುಲ್​ ಪ್ರೀತ್​ ಸಿಂಗ್​, ಸಾರಾ ಅಲಿ ಖಾನ್​ ಸೇರಿದಂತೆ ಹಲವರು ಹೆಸರುಗಳು ಇವೆಯಂತೆ ಎಂಬಂತಹ ಸುದ್ದಿಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲ, ಆ ನಟ-ನಟಿಯರನ್ನು ಎನ್​.ಸಿ.ಬಿಯವರು ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ‘ನನ್ನ ಹೆಸರಲ್ಲಿ ನವ ನಟಿಯರಿಗೆ ಧೋಖಾ!’; ರೊಚ್ಚಿಗೆದ್ದ ನಟ ವಿಜಯ್​ ದೇವರಕೊಂಡ

    ಆದರೆ, ಎನ್​.ಸಿ.ಬಿಯ ಡೆಪ್ಯುಟಿ ಡೈರೆಕ್ಟರ್​ ಕೆ.ಪಿ.ಎಸ್​. ಮಲ್ಹೋತ್ರ ಅವರು ಹೇಳಿರುವಂತೆ, ಎನ್​.ಸಿ.ಬಿಯವರು ಅಂಥದ್ದೊಂದು ಪಟ್ಟಿಯನ್ನೇ ಸಿದ್ಧ ಮಾಡಿಲ್ಲವಂತೆ. ಹಾಗೆಯೇ, ಸದ್ಯಕ್ಕೆ ಯಾರಲ್ಲೂ ಬಂಧಿಸುವ ಯೋಚನೆ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಡ್ರಗ್ಸ್​ ದಂಧೆಯಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್​ ನಟ-ನಟಿಯರ ಯಾವುದೇ ಪಟ್ಟಿಯನ್ನು ನಾವು ಮಾಡಿಲ್ಲ. ನಾವು ಮಾಡಿರುವ ಪಟ್ಟಿ ಬರಿ ಪೆಡ್ಲರ್​​ಗಳದ್ದು. ಅದನ್ನೇ ಬಾಲಿವುಡ್​ನವರ ಪಟ್ಟಿ ಎಂದು ಯಾರೋ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಮಲ್ಹೋತ್ರ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕೆಲಸದ ವಿಷಯದಲ್ಲಿ ಪತ್ನಿ ದೀಪಿಕಾಳನ್ನೇ ಹಿಂಬಾಲಿಸಿದ ರಣವೀರ್​ ಸಿಂಗ್​!

    ಯಾವಾಗ ಡ್ರಗ್ಸ್​ ಕೇಸ್​ನಲ್ಲಿ ರಾಕುಲ್​ ಪ್ರೀತ್​ ಸಿಂಗ್​, ಸಾರಾ ಅಲಿ ಖಾನ್​ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದವೋ, ಆಗ ಹಲವು ಬಾಲಿವುಡ್​ ನಟ-ನಟಿಯರಿಗೆ ಟೆನ್ಶನ್​ ಶುರುವಾಗಿದೆ ಎಂದು ಹೇಳಲಾಗಿತ್ತು. ಏಕೆಂದರೆ, ಬಾಲಿವುಡ್​ನಲ್ಲಿ ಡ್ರಗ್ಸ್​ ತೆಗೆದುಕೊಳ್ಳುವವರ ಸಂಖ್ಯೆ ದೊಡ್ಡದಿದ್ದು, ರಾಕುಲ್​ ಮತ್ತು ಸಾರಾ ಅವರ ಹೆಸರು ಕೇಳಿ ಬಂದಿರುವುದರಿಂದ, ಇನ್ನಷ್ಟು ಜನ ಸಹ ಬಂಧನಕ್ಕೊಳಗಾಗಬಹುದೆಂಬ ಗುಸುಗುಸು ಇತ್ತು.

    ಆದರೆ, ಇದೀಗ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋನವರೇ ತಮ್ಮ ಬಳಿ ಯಾವುದೇ ಪಟ್ಟಿಯಿಲ್ಲ ಎಂದು ಹೇಳಿರುವುದರಿಂದ, ಬಾಲಿವುಡ್​ ಕಲಾವಿದರು ಸ್ವಲ್ಪ ನಿಟ್ಟುಸಿರು ಬಿಡಬಹುದೇನೋ?

    Photos: ನಟಿ ರೋಜಾ ಮಗಳು ಈಗ ಹೇಗಾಗಿದ್ದಾಳೆ?; ಬರ್ತ್​ಡೇ ಫೋಟೋಗಳು ಇಲ್ಲಿವೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts