More

    ಸುಶಾಂತ್​ಸಿಂಗ್​ ರಾಜಪೂತ್​​ ಅವರನ್ನು ಪ್ರೀತಿಸಿದ್ದೇ ಅಪರಾಧವಾಯ್ತಾ?: ರಿಯಾ ಚಕ್ರವರ್ತಿ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಾಜಪೂತ್ ಅವರ ನಿಗೂಢ ಸಾವು ಪ್ರಕರಣದ ತನಿಖೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್​ ಚಕ್ರವರ್ತಿ ವಿರುದ್ಧ ಎನ್​ಸಿಬಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ.

    ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಿಯಾ, ಸುಶಾಂತ್ ಸಿಂಗ್​ ಅವರನ್ನು ಪ್ರೀತಿಸಿದ್ದೇ ಅಪರಾಧವಾಯಿತು ಎಂಬಂತೆ ನನ್ನನ್ನು ಬಿಂಬಿಸಲಾಯಿತು, ಪ್ರೀತಿಸುವುದು ಅಪರಾಧನಾ ಎಂದು ಪ್ರಶ್ನಿಸಿದ್ದಾರೆ.

    ನನ್ನನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ನಾವಿಬ್ಬರು ಪ್ರೀತಿಸಿದ್ದು ನಿಜಸಂಗತಿಯಾದರೂ, ಇದಕ್ಕಾಗಿಯೇ ಜನರು ನನ್ನನ್ನು ನಿಂದಿಸಿದರು, ಆದರೆ ಅವರನ್ನು ಪ್ರೀತಿಸಿರುವುದಕ್ಕೆ ನನಗೆ ವಿಷಾದವಿಲ್ಲ.ಯಾರನ್ನಾದರೂ ಪ್ರೀತಿಸುವುದು ಅತ್ಯಂತ ಅಪರಾಧವಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇತ್ತ ಬುಧವಾರ ಎನ್​ಸಿಬಿ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಇದರಲ್ಲಿ ಸುಶಾಂತ್​ಸಿಂಗ್​​ಗೆ ಮಾದಕ ಪದಾರ್ಥ ನೀಡಿದ ಆರೋಪ ಕುರಿತು ಉಲ್ಲೇಖಿಸಲಾಗಿದ್ದು, ಕೆಲವರು ಆರೋಪ ಮುಕ್ತರಾಗಿದ್ದು, ಅವರನ್ನು ಮುಕ್ತಗೊಳಿಸುವಂತೆ ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ. ಆದರೆ ಆ ಹೆಸರನ್ನು ಎನ್​ಸಿಬಿ ಬಹಿರಂಗಪಡಿಸಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts