More

    ಎಂಬಿಬಿಎಸ್​ ನಂತರದ ಡಿಪ್ಲೊಮಾ ಕೋರ್ಸ್ ಆರಂಭಿಸಿದ ಎನ್​ಬಿಇ; ನೀಟ್ ಪಿಜಿ ಮೂಲಕ ಪ್ರವೇಶ

    ನವದೆಹಲಿ: ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಎಂಬಿಬಿಎಸ್ ನಂತರದ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.
    ಈ ಕೋರ್ಸ್‌ಗಳು ಅರಿವಳಿಕೆಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್, ಕುಟುಂಬ ಆರೋಗ್ಯ, ನೇತ್ರವಿಜ್ಞಾನ, ರೇಡಿಯೊ ಡಯಾಗ್ನೋಸಿಸ್, ಇಎನ್‌ಟಿ ಮತ್ತು ಕ್ಷಯ, ಎದೆ ಕಾಯಿಲೆ ಸೇರಿದಂತೆ ಎಂಟು ವಿಶೇಷತೆಗಳನ್ನು ಕೇಂದ್ರೀಕರಿಸುತ್ತದೆ.
    ನೀಟ್ ಪಿಜಿ ಪರೀಕ್ಷೆಗಳು ಮುಗಿಸಿದ ನಂತರ ಈ ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಇದನ್ನು ಓದಿ:  ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿವಿ ಕಟ್ಟಡ ಉದ್ಘಾಟಿಸಿದ ಪಿಎಂ ನರೇಂದ್ರ ಮೋದಿ

    ಈ ಡಿಪ್ಲೊಮಾ ಕೋರ್ಸ್​​ಗಳನ್ನು ಪದವಿ ಕೋರ್ಸ್​ಗಳಾಗಿ ಪರಿವರ್ತಿಸುವ ಮೂಲಕ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) 2019ರಲ್ಲಿ ಈ ಡಿಪ್ಲೊಮಾ ಕೋರ್ಸ್​​ಗಳನ್ನು ನಿಲ್ಲಿಸಿತು. ಈಗ ದೇಶದಲ್ಲಿ ವೈದ್ಯರ ಕೊರತೆ ನಿವಾರಿಸಲು ಎನ್​ಬಿಇ ಕೋರ್ಸ್​​ಗಳನ್ನು ಆರಂಭಿಸಿದೆ.
    ಎಂಸಿಐ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವುದರಿಂದ ಉಂಟಾಗುವ ನಷ್ಟವನ್ನು ಭರಿಸಲು, ತನ್ನ ಆಶ್ರಯದಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು ಕೇಳಿದೆ ಎಂದು ಎನ್‌ಬಿಇ ಅಧಿಕಾರಿ ಮಾಹಿತಿ ನೀಡಿದರು.

    ಇದನ್ನೂ ಓದಿ: ಸಿಬ್ಬಂದಿಗೆ ಸಂಬಳ ನೀಡಲು ಬಡ್ಡಿ ದುಡ್ಡಿಗೆ ಮೊರೆಹೋದ ತಿರುಪತಿ ದೇಗುಲ; ಎಷ್ಟಿದೆ ಗೊತ್ತೆ ಠೇವಣಿ?

    ಎಂಸಿಐ ಸೂಚಿತ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಾವಳಿಗಳ ಅಡಿ ನೀಟ್ ಪಿಜಿ ಪರೀಕ್ಷೆ ಮೂಲಕ ಈ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು, ರಾಜ್ಯಗಳ ಅಗತ್ಯಕ್ಕೆ ಅನುಗುಣವಾಗಿ, ಪ್ರತಿ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಶೇ .50 ರಷ್ಟು ಎನ್‌ಬಿಇ ಡಿಪ್ಲೊಮಾ ಸೀಟುಗಳನ್ನು ಅಲ್ಲಿನ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಆರೋಗ್ಯ ಸೇವೆ ಒದಗಿಸಲು ಶ್ರೇಣಿ -1 ನಗರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತಿದೆ.

    ಒಂದು ಕ್ಷಣ ಈ ವಿಡಿಯೋ ನೋಡಿ… ಆಗುವ ಖುಷಿ ಅಷ್ಟಿಷ್ಟಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts