More

    ಒಂದು ಕ್ಷಣ ಈ ವಿಡಿಯೋ ನೋಡಿ… ಆಗುವ ಖುಷಿ ಅಷ್ಟಿಷ್ಟಲ್ಲ..

    ವಾಷಿಂಗ್ಟನ್: ಬೆಲುಗಾ ತಿಮಿಂಗಿಲ ಗಂಡು ಮರಿಗೆ ಜನ್ಮ ನೀಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
    ಬೆಲ್ಲಾ ಹೆಸರಿನ ಬೆಲುಗಾ ತಿಮಿಂಗಿಲ ಅಮೆರಿಕದ ಶೆಡ್ ಅಕ್ವೇರಿಯಂನಲ್ಲಿದೆ. ಆಗಸ್ಟ್ 21 ರಂದು ತಿಮಿಂಗಿಲ ಮರಿಗೆ ಜನ್ಮ ನೀಡಿದೆ ಎಂದು ಶೆಡ್ ಅಕ್ವೇರಿಯಂ ಟ್ವಿಟ್ಟರ್​​​ನಲ್ಲಿ ತಿಳಿಸಿದೆ.
    ಈ ಮರಿ ತಲೆಮೊದಲಾಗಿ ಜನಿಸಿರುವುದರಿಂದ ಗಮನಾರ್ಹವಾಗಿದೆ. ನವಜಾತ ತಿಮಿಂಗಲ ಮರಿ 139 ಪೌಂಡ್‌ ತೂಕ ಮತ್ತು 5’3″ ಉದ್ದವಿದೆ.

    ಇದನ್ನೂ ಓದಿ : ಮನೆಯ ಹೊರಗೆ ಮಲಗಿದ್ದ ಬಾಲಕನ ಮೇಲೆ ಕರಡಿ ದಾಳಿ

    ಮರಿ ನೀರಿನ ಮೇಲ್ಮೈಯಲ್ಲಿ ತೇಲಿ ಬಂದು ಮೊದಲ ಉಸಿರು ತೆಗೆದುಕೊಳ್ಳುತ್ತಿದ್ದಂತೆ, ಅದು ಹೊಸ ಜೀವನ ಆರಂಭದ ಸ್ಪಷ್ಟ ಭರವಸೆಯನ್ನು ತಂದಿದ್ದು ನಮ್ಮೆಲ್ಲರ ಅನುಭವಕ್ಕೆ ಬಂದಿತು ಎಂದು ಶೆಡ್ ಅಕ್ವೇರಿಯಂನ ಅಧ್ಯಕ್ಷ ಮತ್ತು ಸಿಇಒ ಡಾ. ಬ್ರಿಡ್ಜೆಟ್ ಕೊಹ್ಲಿನ್ ಹೇಳಿದರು.
    14 ವರ್ಷದ ಬೆಲ್ಲಾ ಮೊದಲ ಬಾರಿಗೆ ತಾಯಿಯಾಗಿದೆ. 1.29 ನಿಮಿಷದ ವೀಡಿಯೊದಲ್ಲಿ, ತಿಮಿಂಗಿಲ ಮರಿಗೆ ಯಶಸ್ವಿಯಾಗಿ ಜನ್ಮ ನೀಡಿದ ಕ್ಷಣ ಅಲ್ಲಿದ್ದವರು ಸಂತೋಷದಿಂದ ಕಿರುಚುತ್ತಿರುವುದನ್ನು ಕಾಣಬಹುದು.

    ಇದನ್ನೂ ಓದಿ:  ಪ್ಲಾಸ್ಮಾ ದಾನಿಗಳ ಕುಟುಂಬಗಳಿಗೆ ವಿಶೇಷ ಆರೋಗ್ಯ ಪ್ರೋತ್ಸಾಹ ಧನ ಘೋಷಿಸಿದ ಗೋವಾ ಸರ್ಕಾರ

    ಮರಿ ಮತ್ತು ತಾಯಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಪ್ರಾಣಿ ಸಂರಕ್ಷಣಾ ತಂಡವು ಅವುಗಳನ್ನು ನೋಡಿಕೊಳ್ಳುತ್ತಿದೆ.
    ಶೆಡ್ ಅಕ್ವೇರಿಯಂ ಹಂಚಿಕೊಂಡ ತಿಮಿಂಗಲ ಮರಿ ಜನನದ ಕ್ಷಣಗಳನ್ನು ನೋಡಿದ ನೆಟ್ಟಿಗರು ತೀವ್ರ ಸಂತಸಗೊಂಡಿದ್ದಾರೆ. ಈ ಪೋಸ್ಟ್ ಗೆ ಬಂದ ಪ್ರತಿಕ್ರಿಯೆಗಳೇ ಅದಕ್ಕೆ ಸಾಕ್ಷಿಯಾಗಿವೆ.

    ಶಾಲಾ ಮ್ಯಾನೇಜರ್​ ಕರೆದರೆಂದು ಮನೆಗೆ ಹೋದ ವಿದ್ಯಾರ್ಥಿನಿಗೆ ಕಾದಿತ್ತು ಗಂಡಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts