More

    ಕಾರ್ಲೆ ಗ್ರಾಮಕ್ಕೆ ಮೂಲ ಸೌಲಭ್ಯ

    ಕಳಸ: ಕಾರ್ಲೆ ಗ್ರಾಮದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ನಕ್ಸಲ್ ನಿಗ್ರಹ ಪಡೆ ವರಿಷ್ಠಾಧಿಕಾರಿ ಚೇತನ್ ಭರವಸೆ ನೀಡಿದರು.

    ಕಾರ್ಲೆ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಮೂಲ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಯಾವುದೇ ಇಲಾಖೆ ಸೌಲಭ್ಯಗಳು ಗ್ರಾಮಕ್ಕೆ ತಲುಪುತ್ತಿಲ್ಲ. ಇದ್ದ ಒಂದು ಸೇತುವೆ ಕೂಡ ಈ ಬಾರಿ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಗಿರಿಜನ ಪಂಗಡಕ್ಕೆ ಅಡುಗೆ ಅನಿಲ ಸೌಲಭ್ಯ ಸಿಗುತ್ತದೆ. ಆದರೆ ಅದು ಕಾರ್ಲೆಯಲ್ಲಿರುವ ಗಿರಿಜನರಿಗೆ ಸಿಗುತ್ತಿಲ್ಲ. ನಮ್ಮ ಪಂಗಡಕ್ಕೆ ಬರುವ ಅನುದಾನಗಳು ಬೇರೆಯವರ ಪಾಲಾಗುತ್ತಿವೆ. ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದರಿಂದ ಮನೆ ಕಟ್ಟಿದ್ದೇವೆ. ಆದರೆ ಅದರ ಸಹಾಯಧನ ಸಿಗಲಿಲ್ಲ ಎಂದು ಗ್ರಾಮಸ್ಥರು ಅಹವಾಲು ಹೇಳಿದರು.

    ವರಿಷ್ಠಾಧಿಕಾರಿ ಚೇತನ್ ಮಾತನಾಡಿ, ನಾನು ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿದ್ದಾಗ ಈ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಆಗ ಇಲ್ಲಿ ವಿದ್ಯುತ್ ಸೌಲಭ್ಯವೂ ಇರಲಿಲ್ಲ. ನಿಮ್ಮ ಸಮಸ್ಯೆಗಳ ಬಗ್ಗೆ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ಪರಿಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಜಯಪುರ ಕ್ಯಾಂಪ್ ಇನ್ಸ್​ಪೆಕ್ಟರ್ ಗುರುಪ್ರಸಾದ್, ಸಬ್​ಇನ್ಸ್​ಪೆಕ್ಟರ್ ಅಹಮ್ಮದ್ ಸಂಗಾಪುರ, ಎಎನ್​ಎಫ್ ಸಿಬ್ಬಂದಿ ಗಿರೀಶ್, ಸುಂದರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts