More

    ಸತ್ಯ ಘಟನೆಯ 19.20.21; ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತನಾಗಿದ್ದ ವಿಠಲ್ ಕುರಿತ ಚಿತ್ರ

    ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಆಕ್ಷನ್ ಕಟ್ ಹೇಳಿರುವ ಚಿತ್ರ 19.20.21. ಇದು ನೈಜ ಘಟನೆಯಾಧಾರಿತ ಚಿತ್ರ ಎಂಬುದು ಗೊತ್ತಿತ್ತಾದರೂ, ಯಾವ ಘಟನೆ, ಯಾವ ವ್ಯಕ್ತಿಯ ಕುರಿತ ಸಿನಿಮಾ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಶುಕ್ರವಾರ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್, ಚಿತ್ರದ ಬಗ್ಗೆ ಮಾಹಿತಿ ರಿವೀಲ್ ಮಾಡಿದೆ. 19.20.21, 2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧನಕ್ಕೊಳಗಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕುರಿತ ಚಿತ್ರ.

    ಇದನ್ನೂ ಓದಿ: ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?

    ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ, ಮಗನನ್ನು ಬಂಧಿಸಲಾಗಿತ್ತು. ಆಗ ವಿಠಲ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಅವರ ಕೈಗೆ ಹಾಕಿದ್ದ ಕೋಳ ತೆಗೆದಿರಲಿಲ್ಲ. ಇದು ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು ವಿಠಲ್. ಬಳಿಕ ಸುಮಾರು ಹತ್ತು ವರ್ಷಗಳ ಕಾನೂನು ಹೋರಾಟ ನಡೆಸಿದ್ದರು. ಕೊನೆಗೆ 2021ರ ಅಕ್ಟೋಬರ್​ನಲ್ಲಿ ಅವರು ನಿದೋಷಿ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.

    ಇದನ್ನೂ ಓದಿ: 140 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸದ ಸರ್ಕಾರ; ಬೇಸತ್ತು ವಿಷ ಕುಡಿದಿದ್ದ ಶಿಕ್ಷಕ ಸಾವು, ಇನ್ನೊಬ್ಬರು ತೀವ್ರ ಅಸ್ವಸ್ಥ

    ಮನ್ಸೋರೆ, ಇದೀಗ 19.20.21 ಚಿತ್ರದ ಮೂಲಕ ಆಡಳಿತ ವ್ಯವಸ್ಥೆಯ ಅವ್ಯವಸ್ಥೆ, ವಿಠಲ್ ಹೋರಾಟದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ವಿಠಲ್ ಪಾತ್ರದಲ್ಲಿ ಶೃಂಗಾ ನಟಿಸಿದ್ದು, ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಕೃಷ್ಣ ಹೆಬ್ಬಾಳೆ ತಾರಾಗಣದಲ್ಲಿದ್ದಾರೆ. ವಿಠಲ್ ಬಂಧನವಾಗಿದ್ದು 2021ರ ಮಾರ್ಚ್ 3ರಂದು. ಇದೀಗ 11 ವರ್ಷಗಳ ನಂತರ ಅದೇ ದಿನ 19.20.21 ತೆರೆಗೆ ಬರಲಿದೆ.

    ಎಸ್​​ಎಸ್​ಎಲ್​ಸಿ ಪರೀಕ್ಷಾರ್ಥಿಗಳಿಗಾಗಿ ರೇಡಿಯೋ ‘ಬಾನ್‌ದನಿ’ ಪ್ರಸಾರ; ಎಂದಿನಿಂದ ಎಲ್ಲಿಯವರೆಗೆ?

    ರಾಜಧಾನಿಯಲ್ಲಿ ಬಿಬಿಎಂಪಿ ಖಾತಾ ಆಂದೋಲನ, ಆಸ್ತಿವಂತರಿಗೆ ಸದವಕಾಶ: ಎಂದಿನಿಂದ, ಎಲ್ಲೆಲ್ಲಿ?; ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts