ಎಸ್​​ಎಸ್​ಎಲ್​ಸಿ ಪರೀಕ್ಷಾರ್ಥಿಗಳಿಗಾಗಿ ರೇಡಿಯೋ ‘ಬಾನ್‌ದನಿ’ ಪ್ರಸಾರ; ಎಂದಿನಿಂದ ಎಲ್ಲಿಯವರೆಗೆ?

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ (2022-23) ವ್ಯಾಸಂಗ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ‘ಬಾನ್‌ದನಿ’ ಎಂಬ ರೇಡಿಯೋ ಪಾಠ ಪ್ರಸಾರವಾಗಲಿದೆ. ಫೆ.27ರಿಂದ ಮಾ.23ರ ವರೆಗೆ ಆಕಾಶವಾಣಿಯಿಂದ ‘ಬಾನ್‌ದನಿ’ ಪ್ರಸಾರ ಮಾಡಲಾಗುವುದು. ಗುಣಾತ್ಮಕ ಶಿಕ್ಷಣ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ರೇಡಿಯೊ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ. ಕಳೆದ ಡಿಸೆಂಬರ್‌ನಿಂದ 1ರಿಂದ 9ನೇ ತರಗತಿ ಮಕ್ಕಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, … Continue reading ಎಸ್​​ಎಸ್​ಎಲ್​ಸಿ ಪರೀಕ್ಷಾರ್ಥಿಗಳಿಗಾಗಿ ರೇಡಿಯೋ ‘ಬಾನ್‌ದನಿ’ ಪ್ರಸಾರ; ಎಂದಿನಿಂದ ಎಲ್ಲಿಯವರೆಗೆ?