More

    ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ; ಪ್ರಚಾರದಲ್ಲಿ ಹುಲಿ-ಸಿಂಹಗಳದ್ದೇ ಕಾರುಬಾರು

    ನವದೆಹಲಿ: ಚುನಾವಣೆ ಸಂದರ್ಭದಲ್ಲಿ ನಾವು ಅಭ್ಯರ್ಥಿಗಳ ಪರ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತಬೇಟೆಗೆ ಇಳಿಯುವುದನ್ನು ನೋಡಿದ್ದೇವೆ. ಆದರೆ, ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಒಂದು ಹಂತ ಮೇಲಕ್ಕೆ ಹೋಗಿದ್ದು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಹುಲಿ-ಸಿಂಹಗಳನ್ನು ಕರೆತರಲಾಗಿದೆ.

    ಮಂಗಳವಾರ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರ ಪಿಎಂಎಲ್‌-ಎನ್ ಪಕ್ಷವು ಲಾಹೋರ್​ನಲ್ಲಿ ಭರ್ಜರಿ ರೋಡ್​ ಶೋ ಹಾಗೂ ರ‍್ಯಾಲಿ ನಡೆಸಿದೆ. ರ‍್ಯಾಲಿಯಲ್ಲಿ ನವಾಜ್ ಷರೀಫ್ ಪಕ್ಷದ ಬೆಂಬಲಿಗರು ಜವಾದ ಹುಲಿ ಹಾಗೂ ಸಿಂಹವನ್ನು ಬೋನ್‌ಗಳಲ್ಲಿ ತರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ನವಾಜ್ ಷರೀಫ್ ಅವರ ಸಾರಥ್ಯದ ಪಿಎಂಎಲ್‌ – ಎನ್ ಪಕ್ಷದ ಚಿಹ್ನೆಯಲ್ಲಿ ವನ್ಯ ಜೀವಿಗಳಿವೆ. ಈ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ನಿಜವಾದ ಹುಲಿ ಹಾಗೂ ಸಿಂಹವನ್ನು ಕಬ್ಬಿಣದ ಬೋನ್‌ಗಳಲ್ಲಿ ಇರಿಸಿಕೊಂಡು ವಾಹನಗಳಲ್ಲಿ ಇರಿಸಿ ಲಾಹೋರ್​ ನಗರದ ಪ್ರತಿಯೊಂದು ಗಲ್ಲಿಗಳಲ್ಲೂ ಇದನ್ನು ಸುತ್ತಾಡಿಸಲಾಗಿದೆ. ಇತ್ತ ಬೋನಿನಲ್ಲಿ ಇರಿಸಲಾಗಿರುವ ಹುಲಿ ಹಾಗೂ ಸಿಂಹವನ್ನು ನೋಡಲು ಮುಗಿಬಿದ್ದ ಜನರು ಅದರ ಜೊತೆ ಪೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.

    ಇದನ್ನೂ ಓದಿ: ಗೋವಾ ಬದಲು ಅಯೋಧ್ಯೆ, ವಾರಣಾಸಿಗೆ ಹನಿಮೂನ್ ಟ್ರಿಪ್; ಕೋರ್ಟ್​ ಮೆಟ್ಟಿಲೇರಿದ ಪತ್ನಿ

    ಇತ್ತ ನಿಜವಾದ ಹುಲಿ ಹಾಗೂ ಸಿಂಹವನ್ನು ಬೋನಿನಲ್ಲಿ ಇರಿಸಿ ರ‍್ಯಾಲಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ನವಾಜ್​ ಷರೀಫ್​ ಈ ರೀತಿ ಮಾಡದಂತೆ ಸೂಚಿಸಿದ್ದಾರೆ ಮತ್ತು ಕರೆತಂದಿರುವ ಹುಲಿ ಹಾಗೂ ಸಿಂಹವನ್ನು ವಾಪಸ್​ ಕಳಿಸುವಂತೆ ಸೂಚಿಸಿದ್ದಾರೆ. ಇನ್ನು ಮುಂದೆ ಪಕ್ಷದ ರ‍್ಯಾಲಿಗಳಿಗೆ ಕರೆ ತರದಂತೆ ಪಕ್ಷದ ನಾಯಕರಿಗೆ ಆದೇಶಿಸಿದ್ದಾರೆ.

    ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ನನ್ನನ್ನು ಒತ್ತಡ ಹಾಕಿ ಹೊರಗೆ ಹಾಕಲಾಗಿದೆ. ಪಾಕಿಸ್ತಾನವನ್ನು ಪರಮಾಣು ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನನ್ನನ್ನು ಜೈಲಿಗೆ ಹಾಕಲಾಗಿತ್ತು ಈ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲಲಿದಗ್ದು, ಮತ್ತೊಮ್ಮೆ ನಾವು ಅಧಿಕಾರಕ್ಕೇರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಾರ್ವತ್ರಿಕ ಚುನಾವಣೆಯ ಭರಾಟೆಯಲ್ಲಿ ಇರುವ ಪಾಕಿಸ್ತಾನದಲ್ಲಿ ಪ್ರಚಾರ ಕಣ ಹಲವು ಅಚ್ಚರಿ, ವಿವಾದ ಹಾಗೂ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಉಗ್ರರ ದಾಳಿ ಭೀತಿ ನಡುವಲ್ಲೇ ದೇಶಾದ್ಯಂತ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಮಾವೇಶಗಳನ್ನು ನಡೆಸುತ್ತಿದ್ದು, ಫೆಬ್ರವರಿ 08ರಂದು ಮತದಾನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts