More

    ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಫರ್ಧಿಸಲು ಕಾಂಗ್ರೆಸ್​ನ ಈ ನಾಯಕನೇ ಕಾರಣ: ಡೆರೆಕ್ ಒ’ಬ್ರಿಯಾನ್

    ಕಲ್ಕತ್ತ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿರುವ ವಿಪಕ್ಷಗಳು ಇಂಡಿಯಾ ಎಂಬ ಹೆಸರಿನಲ್ಲಿ ಮೈತ್ರಿಕೂಟಡವನ್ನು ರಚಿಸಿಕೊಂಡಿದ್ದು, ಚುನಾವಣೆಯ ಹೊಸ್ತಿಲಲ್ಲೇ ಒಂದಿಲ್ಲೊಂಡು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಬುಧವಾರ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದರು.

    ಇನ್ನೂ ಕಾಂಗ್ರೆಸ್​ ಜೊತೆಗಿನ ಮೈತ್ರಿಯನ್ನು ತಳ್ಳಿ ಹಾಕಿರುವ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್​ ಸಂಸದ ಡೆರೆಕ್ ಒ’ಬ್ರಿಯಾನ್ ಲೋಕಸಭೆ ವಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ ಎಂದು ಆರೋಪಿಸಿದ್ದಾರೆ.

    ಈ ಕುರಿತು ಮಾತನಾಡಿದ ಡೆರೆಕ್​ ಒ’ಬ್ರಿಯಾನ್, ಪಶ್ಚಿಮ ಬಂಗಾಳದಲ್ಲಿ ನಾವು ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಲು ಅಧೀರ್​ ರಂಜನ್​ ಚೌಧರಿ ಅವರೇ ಮುಖ್ಯ ಕಾರಣ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ಗೆ ಗುಂಡಿ ತೋಡಲು ಅಧೀರ್​ ಹೊರತುಪಡಿಸಿದರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ.

    ಇದನ್ನೂ ಓದಿ: ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಯಾಗಿ ಪ್ರಸನ್ನ ಬಿ ವರಾಳೆ ಪ್ರಮಾಣ ಸ್ವೀಕಾರ

    ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 2 ಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಸೋತಿದೆ. ಅವರು ವಾಸ್ತವಾಂಶವನ್ನು ಅರಿತು ನಮಗೆ ಬೆಂಬಲಿಸುವುದು ಸೂಕ್ತ. ಇಂಡಿಯಾ ಮೈತ್ರಿಕೂಟದ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ. ಆದರೆ, ಕಾಂಗ್ರೆಸ್​ ನಾಯಕರಾದ ಅಧೀರ್​ ರಂಜನ್​ ಚೌಧರಿ ಬಿಜೆಪಿ ಜೊತೆ ಸೇರಿಕೊಂಡು ಮೈತ್ರಿಕೂಟದ ಬಗ್ಗೆ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

    ಕಾಂಗ್ರೆಸ್​ ಹೈಕಮಾಂಡ್​ ತೃಣಮೂಲದೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದ್ದು, ಅಧೀರ್​ ರಂಜನ್​ ಚೌಧರಿ ಮಾತ್ರ ಮಮತಾ ಬ್ಯಾನರ್ಜಿ ಅವರನ್ನು ನಿರಂತರವಾಗಿ ಟೀಕಿಸುತ್ತ ಬರುತ್ತಿದ್ದಾರೆ. ಚೌಧರಿ ಕಳೆದ ಎರಡು ವರ್ಷಗಳಿಂದ ಬಿಜೆಪಿಯವರು ಮಾತನಾಡುವ ಭಾಷೆ ಬಳಸುತ್ತಿದ್ದು, ಸಂಸತ್ತಿನಲ್ಲಿ ಬಂಗಾಳದ ಪರ ಒಮ್ಮೆಯೂ ಧ್ಬನಿ ಎತ್ತಿಲ್ಲ ಇದರಿಂದ ನಾವು ಏಕಾಂಗಿಯಾಗಿ ಸ್ಫರ್ಧಿಸುತ್ತಿದ್ದೇವೆ ಎಂದು ತೃಣಮೂಲ ಕಾಂಗ್ರೆಸ್​ನ ಸಂಸದ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts