More

    ಜಲಸೇನೆಯ ಸೇಲರ್​ನನ್ನು ಜೀವಂತ ಸುಟ್ಟ ಅಪಹರಣಕಾರರು

    ಮುಂಬೈ: ಭಾರತೀಯ ಜಲಸೇನೆಯಲ್ಲಿ ಸೇಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 26 ರ ಹರೆಯದ ಯುವಕನನ್ನು ಜೀವಂತವಾಗಿ ಸುಟ್ಟ ವಿಕೃತ ಘಟನೆ ಮುಂಬೈ ಸಮೀಪದ ಪಾಲಗರ್​ನಿಂದ ವರದಿಯಾಗಿದೆ. ವಿಪರೀತ ಸುಟ್ಟ ಗಾಯಗಳನ್ನು ಅನುಭವಿಸಿದ ಸೈನಿಕನು ವೈದ್ಯಕೀಯ ಆರೈಕೆ ಪಡೆಯುವ ಪ್ರಯತ್ನದಲ್ಲೇ ಸಾವಪ್ಪಿದ್ದಾನೆ.

    ಕೊಯಂಬತೂರ್​ನ ಐಎನ್​ಎಸ್​ ಅಗ್ರಾಣಿಯಲ್ಲಿರುವ ತರಬೇತಿ ಕೇಂದ್ರದಲ್ಲಿ ಪೋಸ್ಟಿಂಗ್ ಹೊಂದಿದ್ದ ಸೂರಜ್ ಕುಮಾರ್ ದುಬೆ ಎಂಬುವರು ದುರ್ಮರಣಕ್ಕೀಡಾದವರು. ಹಣಕ್ಕಾಗಿ ದುಬೆಯನ್ನು ಅಪಹರಿಸಿದ್ದ ಮೂವರು ದುಷ್ಕರ್ಮಿಗಳು, ಹಣ ಸಿಗುವುದಿಲ್ಲ ಎಂದು ಆತನ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: 5 ರೂಪಾಯಿ ತಿಂಡಿ ಕೇಳಿದ ಮಗುವನ್ನು ಕೊಂದೇ ಬಿಟ್ಟ ಈ ಕ್ರೂರಿ ತಂದೆ !

    ಜಾರ್ಖಂಡ್ ರಾಜ್ಯದ ರಾಂಚಿ ಮೂಲದ ದುಬೆ ರಜೆಯ ಮೇಲೆ ಮನೆಗೆ ತೆರಳಿದ್ದು, ಮತ್ತೆ ಕೆಲಸಕ್ಕೆ ಹಿಂತಿರುಗುವಾಗ ಜನವರಿ 30 ರ ಬೆಳಿಗ್ಗೆ ವಿಮಾನದಲ್ಲಿ ಚೆನ್ನೈ ತಲುಪಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಟ ದುಬೆಯನ್ನು ಮೂರು ಜನರು ಬಂದೂಕು ತೋರಿಸಿ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಿಸಿದ್ದಾರೆ. ದುಬೆಯ ಮೊಬೈಲ್ ಫೋನನ್ನು ತಮ್ಮ ವಶಕ್ಕೆ ತೆಗೆದುಕೊಂಡ ಅಪಹರಣಕಾರರು ಆತನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಮೂರು ದಿನ ಚೆನ್ನೈನಲ್ಲೇ ಬಂಧಿಯಾಗಿರಿಸಿದ್ದು, ನಂತರ ಹಣ ಸಿಗುವುದಿಲ್ಲ ಎಂದು ತಿಳಿದಾಗ ಅಲ್ಲಿಂದ 1400 ಕಿಲೊಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಪಾಲಗರ್ ಜಿಲ್ಲೆಯ ಘೋಲ್ವಾಡ್ ಪ್ರದೇಶದಲ್ಲಿರುವ ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ದುಬೆಯ ಕೈಕಾಲುಗಳನ್ನು ಕಟ್ಟಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಓಡಿ ಹೋಗಿದ್ದಾರೆ.

    ಹೇಗೋ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದ ದುಬೆಯನ್ನು ಸ್ಥಳೀಯರು ದಹನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಬಿಗಡಾಯಿಸಿದಾಗ ಫೆಬ್ರವರಿ 5 ರ ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಅಸ್ವಿನಿ ನೇವಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ದುಬೆ ಕೊನೆ ಉಸಿರೆಳೆದಿದ್ದಾರೆ.

    ಇದನ್ನೂ ಓದಿ: ಬಾಲಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೈಕ್​ ಸವಾರರ ಪತ್ತೆಗೆ ನೆರವಾಯ್ತು ಫೇಸ್​ಬುಕ್​ ಪೋಸ್ಟ್​!

    ಸಾಯುವ ಮುನ್ನ ಪೊಲೀಸರಿಗೆ ನಡೆದ ಘಟನಾವಳಿಯನ್ನು ದುಬೆ ವಿವರಿಸಿದ್ದು, ಆ ಮಾಹಿತಿಯನ್ನಾಧರಿಸಿ ಮೂವರು ಅಜ್ಞಾತ ವ್ಯಕ್ತಿಗಳ ವಿರುದ್ಧ ಅಪಹರಣ ಮತ್ತು ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪಾಲಗರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)

    ಲೈವ್​ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣ ಬೆನ್ನತ್ತಿದ ಪೊಲೀಸರು, ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

    ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts