More

    ಸಮರಕ್ಕೆ ಸಿದ್ಧ – ನೌಕಾಪಡೆಯಿಂದ ಶಕ್ತಿಪ್ರದರ್ಶನದ ಕ್ಷಿಪಣಿ ಪ್ರಯೋಗ

    ನವದೆಹಲಿ: ಗಡಿಭಾಗದಲ್ಲಿ ಚೀನಾ, ಪಾಕಿಸ್ತಾನಗಳು ಕಾಲ್ಕೆರೆದು ಯುದ್ಧಾಹ್ವಾನ ನೀಡುತ್ತಿರಬೇಕಾದರೆ, ಭಾರತೀಯ ನೌಕಾಪಡೆ ಸಮರಕ್ಕೆ ಸಿದ್ಧವಾಗಿರುವುದಾಗಿ ಪರೋಕ್ಷ ಸಂದೇಶ ರವಾನಿಸಿದೆ. ಇಂದು ಬೆಳಗ್ಗೆ ಕ್ಷಿಪಣಿ ಪರೀಕ್ಷೆಯ 18 ಸೆಕೆಂಡ್​ಗಳ ವಿಡಿಯೋವನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.

    ಅರೆಬ್ಬಿ ಸಮುದ್ರದ ಯಾವುದೋ ಒಂದು ಪ್ರದೇಶದಲ್ಲಿ ಐಎನ್​ಎಸ್​ ಪ್ರಬಾಲ್​ ಸಮರ ನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ದೂರದಲ್ಲಿ ಗುರಿಯಂತಿದ್ದ ಇನ್ನೊಂದು ನಿಷ್ಪ್ರಯೋಕ ನೌಕೆಯನ್ನು ಉಡಾಯಿಸಿದೆ. ಈ ಕವಾಯತಿನ ವಿಡಿಯೋ ಇದಾಗಿದೆ ಎಂದು ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಕುತ್ತಿಗೆಯಲ್ಲಾದ ಬದಲಾವಣೆ ನಿರ್ಲಕ್ಷಿಸಿದ ಯುವತಿ: ಕೊನೆಗೆ ವೈದ್ಯರ ಬಳಿ ಹೋದವಳಿಗೆ ಕಾದಿತ್ತು ಶಾಕ್​!

    ಸಮುದ್ರದಲ್ಲಿ ಐಎನ್​ಎಸ್​ ವಿಕ್ರಮಾದಿತ್ಯ ಮತ್ತು ಕೆಲವು ಸಮರ ನೌಕೆಗಳು, ದಾಳಿ ಹೆಲಿಕಾಪ್ಟರ್​ಗಳು, ಯುದ್ಧ ವಿಮಾನಗಳು ಕವಾಯತು ನಡೆಸಿದ್ದು, ಅದರ ಭಾಗವಾಗಿ ಈ ಕ್ಷಿಪಣಿ ಕವಾಯತು ಕೂಡ ನಡೆದಿತ್ತು. ಇದಕ್ಕೂ ಮುನ್ನ, ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್​ ಕರಮ್​ಬೀರ್​ ಸಿಂಗ್ ಗುರುವಾರವಷ್ಟೇ ನೌಕಾಪಡೆಯ ಸಮರ ಸಿದ್ಧತೆಯನ್ನು ಖುದ್ದುಪರಿಶೀಲಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts