More

    ಪ್ಯಾರಿಸ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ದಿಶಾ

    ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆಯ ತುಕಡಿ ಮುನ್ನಡೆಸಿ ಕರುನಾಡಿಗೆ ಹಿರಿಮೆ ತಂದ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್, ಈ ಬಾರಿ ಪ್ಯಾರಿಸ್‌ನ ಬಾಸ್ಟಿಲ್ ಡೇ (ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ) ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

    ಪ್ಯಾರಿಸ್‌ನಲ್ಲಿ ಜುಲೈ14ರಂದು ಬಾಸ್ಟಿಲ್ ಡೇ ಪರೇಡ್ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ನೌಕಾದಳ, ಭೂ ದಳ, ವಾಯು ದಳ ಸಹಿತ ಮೂರು ತುಕಡಿಗಳು ಭಾಗವಹಿಸುತ್ತಿವೆ. ಮಂಗಳೂರಿನ ದಿಶಾ ಅಮೃತ್ ಸಹಿತ ನಾಲ್ವರು ಅಧಿಕಾರಿಗಳು ಹಾಗೂ 64 ಮಂದಿಯ ಸೇನಾ ತುಕಡಿ ಜುಲೈ 5ರಂದೇ ಫ್ರಾನ್ಸ್ ತಲುಪಿ ಪರೇಡ್‌ಗೆ ಸಂಬಂಧಿಸಿದ ಕವಾಯತು ನಡೆಸುತ್ತಿದೆ. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬೇಲ್ ಮುನ್ನಡೆಸಲಿದ್ದರೆ, ಲೆ.ಕಮಾಂಡರ್ ದಿಶಾ, ಲೆ.ಕಮಾಂಡರ್ ರಜತ್ ತ್ರಿಪಾಠಿ, ಲೆ.ಕಮಾಂಡರ್ ಜಿತಿನ್ ಲಲಿತಾ ಧರ್ಮರಾಜ್ ಪ್ರತಿನಿಧಿಸಲಿದ್ದಾರೆ.

    ದಿಶಾ ಅವರು ಮಂಗಳೂರಿನ ಬೋಳೂರು ತಿಲಕ್ ನಗರದ ಅಮೃತ್ ಕುಮಾರ್-ಲೀಲಾ ದಂಪತಿ ಪುತ್ರಿ.ಬಾಲ್ಯದಲ್ಲೇ ನೌಕಾಪಡೆ ಅಧಿಕಾರಿಯಾಗಬೇಕೆಂದು ಕನಸು ಕಂಡವರು. ದಿಶಾ ಅವರು ಮಂಗಳೂರಿನ ಕೆನರಾ, ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತು ಬಳಿಕ ತನ್ನ ಅಭಿಲಾಷೆಯಂತೆ ನೌಕಾಪಡೆ ಸೇರಿದ್ದರು. 2016ರಲ್ಲಿ ನೌಕಾಪಡೆ ಸೇರಿದ ಅವರು ಪ್ರಸ್ತುತ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದು, ಪತಿ ರಾಹುಲ್ ಸೇನೆಯಲ್ಲಿ ಜನರಲ್ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts