More

    ಚುನಾವಣೆ ಸಮೀಸುತ್ತಿದ್ದಂತೆ ಕಾಂಗ್ರೆಸ್​ಗೆ ಶಾಕ್! ​ಸಿಧು ಜೊತೆ 3 ‘ಕೈ’ ಶಾಸಕರು ಬಿಜೆಪಿ ಸೇರ್ಪಡೆ? 

    ನವದೆಹಲಿ: 2022ರ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಪಂಜಾಬ್​ ಕಾಂಗ್ರೆಸ್​ನಲ್ಲಿ ಮತ್ತೆ ಒಳಬೇಗುಡಿ ಆರಂಭವಾಗಿದೆ. ಮತ್ತೊಮ್ಮೆ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರು ರಾಜ್ಯ ನಾಯಕತ್ವದ ಮಧ್ಯೆ ಅಸಮಾಧಾನವಿದ್ದು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ:ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

    ಫೆಬ್ರವರಿ 22ರ ನಂತರ ಸಿಧು ಜೊತೆಗೆ 3 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಸಿಧು ಅವರಿಗೆ ಯಾವುದೇ ಮಹತ್ವದ ಜವಾಬ್ದಾರಿಗಳನ್ನು ವಹಿಸದ ಕಾರಣ ಪಕ್ಷದ ಹೈಕಮಾಂಡ್‌ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಮರುಪ್ರವೇಶಕ್ಕಾಗಿ ನಾಯಕರನ್ನು ಸಮಾಧಾನಪಡಿಸಲು ಅವರು ಬಿಜೆಪಿಯ ಹಿರಿಯ ನಾಯಕತ್ವದಿಂದ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ. ಅವರು ಬಿಜೆಪಿ ಕೇಂದ್ರ ನಾಯಕರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಸಿಧು ಅವರು ಪಕ್ಷಕ್ಕೆ ಪ್ರವೇಶಿಸಿದಾಗಿನಿಂದಲೂ ಸ್ಥಳೀಯ ಕಾಂಗ್ರೆಸ್ ಘಟಕದೊಂದಿಗೆ ಗೊಂದಲದ ಸಂಬಂಧವನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯವೂ ಅತಂತ್ರವಾಗಿದೆ.

    ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಪಕ್ಷದ ಹೈಕಮಾಂಡ್​ ಜೊತೆ ತಿಕ್ಕಾಟ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಬಿರುಕು ಮೂಡಿದೆ.

    2017 ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಮೊದಲು ನವಜೋತ್ ಸಿಂಗ್ ಸಿಧು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಆಗ ಅವರು ಮೂಲಕ್ಕೆ ಮರಳಿದ ‘ಹುಟ್ಟು ಕಾಂಗ್ರೆಸ್ಸಿಗ’ ಎಂದು ಹೇಳಿದ್ದರು. ಕ್ರಿಕೆಟಿಗ ಕಮ್ ರಾಜಕಾರಣಿ ಸಿಧು ಅವರು ಹೈಕಮಾಂಡ್‌ನಿಂದ ಯಾರನ್ನು ನೇಮಿಸಿದರೂ ಕೆಲಸ ಮಾಡಲು ಸಿದ್ಧ. ಪಕ್ಷವು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.

     

    ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts