More

    ಚಳಿಗಾಲದಲ್ಲಿ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದೇ?​

    ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ನೀವು ವ್ಯಾಯಾಮ ಮಾಡದಿದ್ದರೂ ವಾಕಿಂಗ್ ಮಾಡಿದರೂ ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದ ವ್ಯಾಯಾಮ ಅಥವಾ ಯೋಗ ಮಾಡಲು ಸ್ವಲ್ಪ ತೊಂದರೆಯಾಗುತ್ತದೆ, ಹಾಗಾಗಿ ಹೆಚ್ಚಿನವರು ಮನೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಆದರೆ ನೀವು ಚಳಿಗಾಲದ ಬಟ್ಟೆಗಳನ್ನು ಧರಿಸಿ ಸರಿಯಾಗಿ ನಡೆದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ:ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

    ಚಳಿಗಾಲದಲ್ಲಿ ವಾಕಿಂಗ್ ಮಾಡುವುದು ಕಷ್ಟ. ತಂಪಾಗಿರುವ ವಾತಾವರಣದಲ್ಲಿ ವಾಕ್ ಮಾಡುವುದು ಒಳ್ಳೆಯದಾ? ಕೆಟ್ಟದ್ದಾ? ಎಂಬ ಗೊಂದಲ ನಿಮ್ಮಲ್ಲಿರಬಹುದು. ಅಧ್ಯಯನಗಳ ಪ್ರಕಾರ, ಚಳಿಗಾಲದ ವಾಕಿಂಗ್ ಮತ್ತು ವ್ಯಾಯಾಮದಿಂದ ಕೆಲವು ಉತ್ತಮ ಆರೋಗ್ಯ ಪ್ರಯೋಜನಗಳಿವೆ. ಅದನ್ನು ನೀವು ಪಡೆಯಬಹುದು.

    ಹಾರ್ವರ್ಡ್ ಹೆಲ್ತ್ ಪ್ರಕಾರ, ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಯಾವುದೇ ರೀತಿಯ ದೈಹಿಕ ಚಟುವಟಿಕೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ನಡೆಯುವುದು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ನ ಸಾಧ್ಯತೆಯನ್ನು ನಿಯಂತ್ರಿಸುತ್ತದೆ.

    ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಅಧ್ಯಯನದ ಪ್ರಕಾರ, ವಾರದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ನಡೆಯುವ ಮಹಿಳೆಯರು ವಾರಕ್ಕೆ 3 ಗಂಟೆ ಅಥವಾ ಕಡಿಮೆ ನಡೆದವರಿಗಿಂತ ಶೇ. 14ರಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೆ, ವಾಕಿಂಗ್ ನಿಮಗೆ ಬೊಜ್ಜು ಮತ್ತು ಅಧಿಕ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ವರದಿಯಾಗಿದೆ.

    ಇದು ಬಿಪಿಯನ್ನೂ ನಾರ್ಮಲ್‌ ಆಗಿರಿಸುತ್ತದೆ. ಇದರೊಂದಿಗೆ, ವಾಕಿಂಗ್ ಸಕ್ಕರೆ ಚಯಾಪಚಯ ಮತ್ತು ಮಧುಮೇಹವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇವು ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಮುಖವಾಗಿದೆ. ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ನಿಮ್ಮ ತ್ವಚೆಯು ಕಾಂತಿಯುತವಾಗುತ್ತದೆ.

    ಹೆಚ್ಚು ಆಮ್ಲಜನಕಯುಕ್ತ ತಾಜಾ ಗಾಳಿಯಲ್ಲಿ ಉಸಿರಾಡುವುದರಿಂದ ಪ್ರಯೋಜನ ಪಡೆಯಬಹುದು. ನಮ್ಮ ಮೆದುಳಿನಲ್ಲಿ ಸೂರ್ಯನ ಬೆಳಕು ಮತ್ತು ಹೆಚ್ಚಿದ ರಕ್ತದ ಹರಿವು ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಂತಹ ರಾಸಾಯನಿಕಗಳ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಯೋಗಕ್ಷೇಮ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.

    ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯಲಿದ್ದಾರಾ ಡಾಲಿ ಧನಂಜಯ್? ಸಿಎಂ ಸಿದ್ದು ಲೆಕ್ಕಾಚಾರದ ಹಿಂದಿದ್ಯಾ ‘ಲೋಕ’ ತಂತ್ರಗಾರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts