More

    ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

    ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ದೇಶಗಳು ದೀರ್ಘಕಾಲೀನ ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಪತ್ತು ಮತ್ತು ಯುದ್ಧ ಸಂಕಷ್ಟವನ್ನು ಅನುಭವಿಸಿವೆ. ಆದರೆ ವಿಶ್ವಸಂಸ್ಥೆ ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳು ಜನರನ್ನು ಹೆಚ್ಚು ಸಂತೋಷಪಡಿಸಲು ಹಾಗೂ ಅವರ ಯೋಗಕ್ಷೇಮ ಸುಧಾರಿಸಲು ನೀತಿಗಳನ್ನು ರೂಪಿಸಲು ಶ್ರಮಿಸುತ್ತಿವೆ.

    ಇದನ್ನೂ ಓದಿ:ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯಲಿದ್ದಾರಾ ಡಾಲಿ ಧನಂಜಯ್? ಸಿಎಂ ಸಿದ್ದು ಲೆಕ್ಕಾಚಾರದ ಹಿಂದಿದ್ಯಾ ‘ಲೋಕ’ ತಂತ್ರಗಾರಿಕೆ!

    ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌’ನಲ್ಲಿ ಫಿನ್ಲೆಂಡ್ ಅನ್ನು ‘ವಿಶ್ವದ ಅತ್ಯಂತ ಸಂತೋಷದ ದೇಶ’ ಎಂದು ಪಟ್ಟಿ ಮಾಡಲಾಗಿದೆ. ಸತತ 6ನೇ ವರ್ಷವೂ ಈ ದೇಶ ಮೊದಲ ಸ್ಥಾನದಲ್ಲಿದೆ. ವರದಿಯು ಒಟ್ಟು ದೇಶೀಯ ಉತ್ಪನ್ನ ತಲಾದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಕಡಿಮೆ ಭ್ರಷ್ಟಾಚಾರವನ್ನು ಆಧರಿಸಿದೆ. 2023 ವರ್ಷದ ವರದಿಯನ್ನು ಮಾ.20ರಂದು ಬಿಡುಗಡೆ ಮಾಡಲಾಗಿದೆ. ಮಾ.20ರಂದು ‘ಅಂತಾರಾಷ್ಟ್ರೀಯ ಸಂತೋಷದ ದಿನ’ ಆಚರಿಸಲಾಗುತ್ತದೆ.

    ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

    ಇದು 150ಕ್ಕೂ ಹೆಚ್ಚು ದೇಶಗಳ ಜನರ ಜಾಗತಿಕ ಸಮೀಕ್ಷೆಯ ದತ್ತಾಂಶ ಆಧರಿಸಿದೆ ಎಂದು ಸಿಎನ್‌ಎನ್ ಹೇಳಿದೆ. ಈ ವರ್ಷದ ಪಟ್ಟಿಯು ಹಿಂದಿನ ಶ್ರೇಯಾಂಕಗಳನ್ನು ಹೋಲುತ್ತದೆ ಮತ್ತು ಅನೇಕ ನಾರ್ಡಿಕ್ ದೇಶಗಳು(ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲ್ಯಾಂಡ್ ಸೇರಿವೆ) ಉನ್ನತ ಸ್ಥಾನಗಳಲ್ಲಿವೆ. ಡೆನ್ಮಾರ್ಕ್ 2 ನೇ ಸ್ಥಾನದಲ್ಲಿದ್ದರೆ, ಐಸ್‌ಲ್ಯಾಂಡ್‌ 3 ನೇ ಸ್ಥಾನದಲ್ಲಿದೆ. ಇಸ್ರೇಲ್​ ನಾಲ್ಕನೇ ಸ್ಥಾನದಲ್ಲಿದೆ.

    ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಫಿನ್ ಲ್ಯಾಂಡ್ ಸಂತೋಷ ದೇಶ ಆಗಿ ಇರೋದರ ಹಿಂದೆ ಪ್ರಮುಖ ಕಾರಣಗಳಿವೆ. ಇದನ್ನು ಇಲ್ಲಿನ ಜನರು ದೈನಂದಿನ ಜೀವನದಲ್ಲಿ ಅನುಸರಿಸುತ್ತಾರೆ. ಯಾವುದೇ ದೇಶದ ಜನರು ಈ ನಿಯಮಗಳನ್ನು ಅನುಸರಿಸಲು ಪ್ರಾರಂಭಿಸಿದರೆ, ಸಂತೋಷವಾಗಿರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಒಗ್ಗಟ್ಟಿನಿಂದ ಈ ಪ್ರತಿಜ್ಞೆ ಮಾಡಿದ್ರೆ, ಇದು ಕೆಟ್ಟ ಪರಿಸ್ಥಿತಿಯ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

    ಫಿನ್ ಲ್ಯಾಂಡ್ ಜನರು ತಮ್ಮ ಸುತ್ತಲಿನ ಜನರ ಬಗ್ಗೆ ಕಾಳಜಿ ವಹಿಸುತ್ತಾರಂತೆ. ಇತರರ ಮುಖದಲ್ಲಿ ಸಂತೋಷ ನೋಡಲು ಇತರರ ಬಗ್ಗೆ ಕಾಳಜಿ ವಹಿಸೋದು, ಸಹಾಯ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೀವು ಯಾರಿಗಾದರೂ ಸಹಾಯ ಮಾಡಿದರೆ, ಅವರು ಯಾವಾಗಲೂ ನಿಮಗೆ ಋಣಿಯಾಗಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಸಂತೋಷವನ್ನುಂಟುಮಾಡುವ ವಿಷಯಗಳ ಪಟ್ಟಿ ಮಾಡುತ್ತಾರೆ. ನಂತರ ಅದೇ ಕೆಲಸವನ್ನು ಮಾಡುತ್ತಾರೆ. ಈ ಹಳೆಯ ಮಾದರಿ ಮುಂದುವರೆಯುತ್ತಲೇ ಇರುತ್ತದೆ.

    ಭಾರತದ ಶ್ರೇಯಾಂಕವೇನು?: ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತ ದೇಶವು ನೇಪಾಳ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕಿಂತ ಕೆಳಗೆ ಅಂದರೆ 126ನೇ ಸ್ಥಾನದಲ್ಲಿದೆ. ಕುತೂಹಲಕಾರಿಯಾಗಿ, ರಷ್ಯಾ-ಉಕ್ರೇನ್ ಯುದ್ಧವು ಎರಡೂ ದೇಶಗಳ ಶ್ರೇಯಾಂಕದಲ್ಲಿ ಕುಸಿತಕ್ಕೆ ಕಾರಣವಾಗಿದೆ. ರಷ್ಯಾ 72ನೇ ಸ್ಥಾನದಲ್ಲಿದ್ದರೆ, ಉಕ್ರೇನ್ 92ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನಕ್ಕೆ ಕೊನೆಯ ಸ್ಥಾನ ಲಭಿಸಿದೆ. ಜಗತ್ತಿನ ಹಲವು ದೇಶಗಳಿಗೆ ನಾನಾ ರೀತಿಯಲ್ಲಿ ಶ್ರೇಯಾಂಕಗಳನ್ನು ನೀಡಲಾಗುತ್ತದೆ. ನಾನಾ ಸೂಚ್ಯಂಕಗಳನ್ನು ಆಧರಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ವಿಶ್ವ ಸಂತೋಷದ ವರದಿಯನ್ನು 2012ರಲ್ಲಿ ಪ್ರಕಟಿಸಲಾಗಿತ್ತು.

    ಸಾಮಾಜಿಕ ಭದ್ರತೆ, ಜೀವನ ಗುಣಮಟ್ಟ, ಆದಾಯ ಸೇರಿದಂತೆ ಹಲವಾರು ಅಂಶಗಳ ಆಧಾರದ ಮೆಲೆ ವಿಶ್ವ ಸಂತೋಷ ದೇಶಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ. ಕಡಿಮೆ ಸಂತಸಕ್ಕೆ ಬದಲಾಗುತ್ತಿರುವ ಆಡಳಿತ, ಕ್ಷಿಪ್ರ ನಗರೀಕರಣ, ಬಡತನ, ನಗರ ದಟ್ಟಣೆ, ಹೆಚ್ಚುತ್ತಿರುವ ಮಾಲಿನ್ಯ, ವಯಸ್ಸಾದ ಜನಸಂಖ್ಯೆ, ಅಧಿಕ ಆರೋಗ್ಯ ವೆಚ್ಚ, ಅಪರಾಧಗಳ ಹೆಚ್ಚಳ, ವಿಶೇಷವಾಗಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಸೇರಿದಂತೆ ಹಲವಾರು ಅಂಶಗಳು ಕಾರಣ. ಕಡಿಮೆ ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ ಕೊರತೆ ಕೂಡ ರಾಷ್ಟ್ರದ ಅವನತಿಗೆ ಪ್ರಮುಖ ಕೊಡುಗೆಗಳಾಗಿವೆ.

    370 ಸೀಟ್‌ ಗೆದ್ದರೆ ಶ್ಯಾಮ್‌ ಪ್ರಸಾದ್‌ ಮುಖರ್ಜಿಗೆ ಸೂಕ್ತ ಶ್ರದ್ಧಾಂಜಲಿ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts