More

    PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

    ಈ ಫೋಟೋದಲ್ಲಿರುವ ಬಿಳಿ ಬಣ್ಣದ ಸಣ್ಣ ಮನೆ ವಿಶ್ವದ ಒಂಟಿ ಮನೆ ಎಂಬ ಖ್ಯಾತಿ ಪಡೆದಿದ್ದು, ಇದು ರಿಮೋಟ್​ ದ್ವೀಪವೊಂದರಲ್ಲಿರುವ ಏಕೈಕ ಮನೆಯಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕ ನಿಗೂಢ ಕತೆಗಳು ಸಹ ಮನೆಯ ಜತೆ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಶ್ವದ ಒಂಟಿ ಮನೆ ಎಂದೇ ಕರೆಯಲಾಗುತ್ತಿದೆ. ಅಲ್ಲದೆ, ಅಂತರ್ಮುಖಿಯ ಕನಸಿನ ನಿವಾಸ ಎಂದೂ ಹೇಳಲಾಗುತ್ತಿದೆ. ಕಳೆದ ವಾರ h0rdur ಹೆಸರಿನ ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿದಾಗಿನಿಂದ ಜಾಲತಾಣದಲ್ಲಿ ಫೋಟೋ ಸಿಕ್ಕಾಪಟ್ಟೆ ಸಂಚಾರ ಮಾಡುತ್ತಿದೆ. ಸುತ್ತಲೂ ನೀಲಿ ಸಮುದ್ರ. ನಡುವೆ ಒಂದು ದೊಡ್ಡ ಬೆಟ್ಟ. ಬೆಟ್ಟದ ಮೇಲೆ ಹಸಿರಿನ ಹೊದಿಕೆ. ಅದರ ಮಧ್ಯೆ ಬಿಳಿಯ ಬಣ್ಣದ ಒಂದು ಸಣ್ಣ ಮನೆಯನ್ನು ಫೋಟೋದಲ್ಲಿ ನೋಡಬಹುದಾಗಿದೆ.

    ಇದನ್ನೂ ಓದಿ: ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!

    ದಿ ಮಿರರ್​ ವೆಬ್​ಸೈಟ್​ ಪ್ರಕಾರ ವೈರಲ್​ ಮನೆಯು ದಕ್ಷಿಣ ಐಸ್​ಲ್ಯಾಂಡ್​ನ ರಿಮೋಟ್​ ದ್ವೀಪ ಎಲಿಡೆಯಲ್ಲಿದೆ.​ ಎಲಿಡೆಯು ಐಸ್​ಲ್ಯಾಂಡ್​ನ 15 ರಿಂದ 18 ದ್ವೀಪಗಳನ್ನು ಹೊಂದಿರುವ ದ್ವೀಪಸಮೂಹ ವೆಸ್ಟ್ಮನ್ನೈಜರ್​ನ ಒಂದು ಸಣ್ಣ ಭಾಗವಾಗಿದೆ. ಆದರೆ, ಇಂದು ಎಲಿಡೆ ಬಂಜರು ಭೂಮಿಯಂತಾಗಿದೆ. ಆದರೆ, ಒಂದು ಕಾಲದಲ್ಲಿ ಐದು ಕುಟುಂಬ ಇಲ್ಲಿ ವಾಸವಿತ್ತು ಎನ್ನಲಾಗಿದೆ. 1930ರ ಸಮಯದಲ್ಲಿ ಈ ಕುಟುಂಬಗಳು ಜಾಗವನ್ನು ಖಾಲಿ ಮಾಡಿದವು ಎಂಬ ಮಾತಿದೆ.

    ಇನ್ನು ಈ ದ್ವೀಪದಲ್ಲಿರುವ ಒಂಟಿ ಮನೆಯ ಬಗ್ಗೆ ಅಂದಿನಿಂದ ಇಂದಿನವರೆಗೂ ವಂದತಿ, ಪ್ರಶ್ನೆಗಳು ಮತ್ತು ಕೆಲ ಸಿದ್ಧಾಂತಗಳು ಹರಿದಾಡುತ್ತಿವೆ. ಒಂದು ವದಂತಿಯ ಪ್ರಕಾರ ಬಿಲಿಯನೇರ್​ ಒಬ್ಬರು ಜೋಂಬಿಯಾ ಅಪೋಕ್ಯಾಲಿಪ್ಸ್ ಸಮಯದಲ್ಲಿ ಬಳಸಲು ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಇತರರು ಹೇಳುವ ಪ್ರಕಾರ ಈ ಮನೆ ಐಸ್​ಲ್ಯಾಂಡ್​ನ ಪ್ರಖ್ಯಾತ ಗಾಯಕ ಜೋರ್ಕ್​ಗೆ ಸೇರಿದ್ದಾಗಿತ್ತು ಎಂದಿದ್ದಾರೆ.

    ಇದನ್ನೂ ಓದಿ: ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವೈಪ್​ ಮಾಡಿ ಎಂದ ರೆಜಿನಾ: ಫ್ಯಾನ್ಸ್​ಗೆ ಸೂರ್ಯಕಾಂತಿ ಬೆಡಗಿಯ ಶಾಕ್​!

    ಇನ್ನು ಕೆಲ ನೆಟ್ಟಿಗರು ಹೇಳುವ ಹಾಗೆ ಅಲ್ಲಿ ಮನೆಯೇ ಇಲ್ಲ. ಫೋಟೋಗಳನ್ನೆಲ್ಲ ಫೋಟೋಶಾಪ್​ ಮೂಲಕ ಎಡಿಟ್​ ಮಾಡಲಾಗಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಮನೆಯು ಎಲಿಡೆ ದ್ವೀಪದಲ್ಲಿ ನೆಲೆನಿಂತಿದ್ದು, ಇದು ಎಲಿಡೆ ಹಂಟಿಂಗ್​ ಅಸೋಸಿಯೇಸನ್​ಗೆ ಸೇರಿದ್ದಾಗಿದೆ. 1950ರಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಹಂಟಿಂಗ್​ ಕ್ಯಾಬಿನ್​ ಮತ್ತು ಅಸೋಸಿಯೇಸನ್​ ಸದಸ್ಯರಿಗೆ ಆವಿಸ್ನಾನ ಸೇರಿ ಮುಂತಾದವುಗಳಿಗೆ ಬಳಸಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts