More

    61 ವರ್ಷಗಳ ನಂತರ ಹೋರಾಟದ ನೆಲಕ್ಕೆ ಕಾಲಿಟ್ಟ ನಿವೃತ್ತ ಸೈನಿಕರು

    ಕಾರವಾರ:ಇಲ್ಲಿನ ಕದಂಬ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಅಂಜುದೀವ್ ದ್ವೀಪವನ್ನು ಪೋರ್ಚುಗೀಸರಿಂದ ವಿಮುಕ್ತಿಗೊಳಿಸಿದ ಭಾರತೀಯ ನೌಕಾಸೇನೆಯ ಅಧಿಕಾರಿಗಳು 61 ವರ್ಷಗಳ ನಂತರ ಆ ದ್ವೀಪಕ್ಕೆ ಭೇಟಿ ನೀಡಿದರು.
    ವಾಸ್ಕೋದಲ್ಲಿ ವಾಸವಿರುವ ನಿವೃತ್ತ ನೌಕಾ ಅಧಿಕಾರಿ ಕಂಸರಾಜ್ ಶರ್ಮಾ ಹಾಗೂ ಇನ್ನೂ 75 ನಿವೃತ್ತ ಅಧಿಕಾರಿಗಳು ಬುಧವಾರ ದ್ವೀಪಕ್ಕೆ ಭೇಟಿ ನೀಡಿ ಹೋರಾಟದ ದಿನವನ್ನು ನೆನಪಿಸಿಕೊಂಡಿದ್ದರು.

    ನಂತರ ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ ಹಾಗೂ ಇತರ ಕಾರ್ಯನಿರತ ಅಧಿಕಾರಿಗಳ ಜತೆ ತಮ್ಮ ಹೋರಾಟದ ಅನುಭವವನ್ನು ನೆನಪಿಸಿಕೊಂಡರು.

    ಅಂಜುದೀವ್ ಇತಿಹಾಸ:

    ಭಾರತ 1947 ರಲ್ಲೇ ಸ್ವತಂತ್ರವಾಗಿದ್ದರೂ 1961 ರವರೆಗೂ ಕಾರವಾರ ಪಕ್ಕದ ಗೋವಾ ಹಾಗೂ ಕಾರವಾರದ ಕೂಗಳತೆ ದೂರದಲ್ಲಿರುವ ಅಂಜುದೀವ್ ಎಂಬ ಪುಟ್ಟ ದ್ವೀಪ ಪೋರ್ಚುಗೀಸರ ಆಡಳಿತದಲ್ಲೇ ಇತ್ತು. ಭಾರತೀಯ ನೌಕಾಸೇನೆ “ಆಪರೇಶನ್ ಚುಟನೆ” ಎಂಬ ಕಾರ್ಯಾಚರಣೆ ನಡೆಸಿ 1961 ರ ಡಿಸೆಂಬರ್ 18 ರಂದು ದ್ವೀಪವನ್ನು ಪೋರ್ಚುಗೀಸರಿಂದ ಬಿಡುಗಡೆ ಮಾಡಿತ್ತು.

    ಇದನ್ನೂ ಓದಿ ಏಕದಿನ​ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಟ್ಯಾಗ್​ಲೈನ್​ ಪ್ರಕಟಿಸಿದ ಐಸಿಸಿ
    ಈ ಕಾರ್ಯಾಚರಣೆಯಲ್ಲಿ 19 ನೌಕಾ ಸಿಬ್ಬಂದಿ ಗಾಯಗೊಂಡಿದ್ದರು. ಕಾರ್ಯಾಚರಣೆ ಮಾಡಿದ ಅಧಿಕಾರಿಗಳಿಗೆ 8 ಗ್ಯಾಲೆಂಟ್ರಿ, 3 ಕೀರ್ತಿ ಚಕ್ರ, 4 ಶೌರ್ಯ ಚಕ್ರ, 1 ನೌಸೇನಾ ಮೆಡಲ್ ಹಾಗೂ 4 ಮೆನ್ಶನ್ ಇನ್ ಡಿಸ್‌ಪ್ಯಾಚಸ್ ದೊರಕಿತ್ತು.
    ಕ್ರಿಶ 150 ರಿಂದ ಅಂಜುದೀವ್ ವ್ಯಾಪಾರಸ್ಥರ ಹಾಗೂ ಧಾರ್ಮಿಕ ಕೇಂದ್ರವಾಗಿತ್ತು. ಗ್ರೀಕರು, ಪೋರ್ಚುಗೀಸರು, ಬ್ರಿಟಿಷರು ಇಲ್ಲಿ ನೆಲೆಯೂರಿದ್ದರು. ಮಾತ್ರವಲ್ಲ ಕದಂಬರು, ಚಾಲುಕ್ಯರು, ಆದಿಶೈಲ ಮುಂತಾದವರು ಇಲ್ಲಿ ಆಡಳಿತ ನಡೆಸಿದ ಐತಿಹಾಸಿಕ ದಾಖಲೆಗಳಿವೆ. 1662 ರಿಂದ 65 ರ ಮೂರು ವರ್ಷಗಳನ್ನು ಹೊರತುಪಡಿಸಿ 1498 ರಿಂದ 1961 ರವರೆಗೆ ಈ ದ್ವೀಪ ಪೋರ್ಚುಗೀಸರ ಅಧೀನದಲ್ಲಿತ್ತು. ಅದರ ಕುರುಹಾಗಿ ಅಲ್ಲೊಂದು ಚರ್ಚ್ ಕೂಡ ಇದೆ. ಸದ್ಯ 2005 ರಿಂದ ದ್ವೀಪವನ್ನು ಭಾರತೀಯ ನೌಕಾಸೇನೆ ತನ್ನ ವಶಕ್ಕೆ ಪಡೆದಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts