More

    10 ವರ್ಷಗಳ ಕಾಲ ವಿಜ್ಞಾನಿಗಳಿಂದ ಅಧ್ಯಯನ: ಗೂಗಲ್​ ಮ್ಯಾಪ್​ ನಲ್ಲಿ ಆಗಾಗ್ಗೆ ಕಂಡು ಮರೆಯಾಗುವ ರಹಸ್ಯ ದ್ವೀಪ ಕೊನೆಗೂ ಪತ್ತೆ!

    ಸಿಡ್ನಿ: ಹಲವು ವರ್ಷಗಳಿಂದ ಗೂಗಲ್​ ಮ್ಯಾಪ್​​ ವೀಕ್ಷಿಸಿದ ವಿಜ್ಞಾನಿಗಳೇ ಗಾಬರಿಯಾಗಿದ್ದು, ಅದೇನೆಂದರೆ ಗೂಗಲ್​ ಮ್ಯಾಪ್​ನಲ್ಲಿ ಒಮ್ಮೆ ಕಾಣುವ ಭೂ ಭಾಗ ಮತ್ತೊಮ್ಮೆ ಕಾಣುತ್ತಿಲ್ಲ. ಇದನ್ನು ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿರುವ ವಿಜ್ಞಾನಿಗಳೇ ಈಗ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಹತ್ತು ವರ್ಷಗಳಿಂದ ವಿಜ್ಞಾನಿಗಳ ಕುತೂಹಲ ಮೂಡಿಸಿದ್ದ ಭೂ ಭಾಗದ ರಹಸ್ಯವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ. 2012ರಿಂದ ಈ ಪ್ರದೇಶದ ಬಗ್ಗೆ ಅಧ್ಯಯಯನ ನಡೆಯುತ್ತಿದೆ. ದಶಕಗಳ ಬಳಿಕ ಇದಕ್ಕೆ ಪರಿಹಾರ ದೊರೆತಿದೆ.

    ದಕ್ಷಿಣ ಫೆಸಿಫಿಕ್​ ಸಾಗರದ ಆಸ್ಟ್ರೇಲಿಯಾ ಹಾಗೂ ನ್ಯೂ ಕೈಲೊಡೊನಿಯಾ ನಡುವೆ ಸಿಗುವ ಈ ರಹಸ್ಯವಾದ ಭೂ ಭಾಗವನ್ನು ಕೊನೆಗೂ ಕಂಡುಹಿಡಿದಿದ್ದಾರೆ. ಇದನ್ನು ಮೊದಲು ತಾಂತ್ರಿಕ ದೋಷದಿಂದ ಕಾಣುತ್ತಿರಬಹುದೆಂದು ಭಾವಿಸಲಾಗಿತ್ತು. ಆದರೆ ಪದೇ ಪದೇ ಅದೇ ಜಾಗ ಕಾಣುತ್ತಿರುವುದು ಭಾರೀ ಕುತೂಹಲ ಮೂಡಿಸಿತ್ತು. ಕೊನೆಗೂ ಇದು ಏನಿರಬಹುದೆಂಬ ವಿಜ್ಞಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಹೌದು… ಇದುವರೆಗೂ ಯಾರ ಕಣ್ಣಿಗೂ ಬೀಳದಂತಹ ಭೂ ಭಾಗವನ್ನು ಗೂಗಲ್​ ಮ್ಯಾಪ್​ ಮೂಲಕ ಪತ್ತೆ ಹಚ್ಚಲಾಗಿದೆ. ಒಂದು ಅಧ್ಯಯನದ ಪ್ರಕಾರ ಬ್ರಿಟಿಷ್​ ಅಧಿಕಾರಿ ಜೇಮ್ಸ್​ ಕೂಕ್ಸ್​ ಎಂಬುವವರು 1776ರಲ್ಲೇ ಈ ಭೂ ಭಾಗವನ್ನು ಕಂಡುಹಿಡಿದಿದ್ದರು ಎಂದು ಉಲ್ಲೇಖಿಸಲಾಗಿದೆ. ನಂತರ ಈ ಬಗ್ಗೆ ಅಷ್ಟಾಗಿ ಯಾರೂ ಗಮನಹರಿಸಿಲ್ಲ. ಇದಾದ ಬಳಿಕ 1895ರಲ್ಲಿ ಮತ್ತೆ ಐಲ್ಯಾಂಡ್​​ ಬಗ್ಗೆ ಹೇಳಲಾಗಿದೆ. ಆನಂತರ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಸದ್ಯ ವಿಜ್ಞಾನಿಗಳಲ್ಲಿ ಆತಂಕ ಹೆಚ್ಚಿಸಿದ ಈ ಭಾಗವನ್ನು ಕೊನೆಗೂ ಪತ್ತೆ ಹಚ್ಚಿದ್ದು, ಇದೊಂದು ಐಲ್ಯಾಂಡ್​ ಎಂದು ಹೇಳಿದ್ದಾರೆ. ಈ ಭೂ ಭಾಗ 24 ಕಿ.ಮೀ.ಉದ್ದ ಹಾಗೂ 5 ಕಿ.ಮೀ. ಅಗಲ ವಿಸ್ತೀರ್ಣ ಹೊಂದಿದೆ.

    ಇನ್ನು ಈ ಜಾಗದಲ್ಲಿ ಇದುವರೆಗೂ ಯಾರೂ ಭೇಟಿ ನೀಡಿಲ್ಲ. ಅಲ್ಲಿನ ವಾತಾವರಣ ಹಾಗೂ ಅಲ್ಲಿ ಯಾವ ರೀತಿ ಎಂಬುದರ ಬಗ್ಗೆ ವಿಜ್ಞಾನಿಗಳ ತಂಡ ಶೀಘ್ರದಲ್ಲೇ ಭೇಟಿ ನೀಡಿ ಅಧ್ಯಯನವನ್ನು ಮುಂದುವರಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್​ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts