More

    ‘ನವತಾರ್’ ರಂಗಿನಲ್ಲಿ ಚಂದನವನದ ಸುಂದರಿಯರು; ಭಾರ್ಗವಿ ವಿಖ್ಯಾತಿ ಕಲರ್ಫುಲ್ ಪ್ರಯತ್ನ

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಿನಿಮಾ ಕ್ಷೇತ್ರದ ಜತೆಗೆ ಫ್ಯಾಷನ್‍ ಲೋಕಕ್ಕೂ ಅಷ್ಟೇ ಪ್ರಮಾಣದ ಸಮಸ್ಯೆ ಎದುರಾಗಿತ್ತು. ಇದೀಗ ಮತ್ತೆ ಎಲ್ಲವೂ ಹಳೇ ಲಯಕ್ಕೆ ಮರಳುತ್ತಿದೆ. ನಿಂತಿದ್ದ ಕೆಲಸಗಳು ನಿಧಾನಗತಿಯಲ್ಲಿ ಆರಂಭವಾಗಿವೆ. ಅದೇ ರೀತಿಯಲ್ಲಿ ಸೆಲೆಬ್ರಿಟಿ ಡಿಸೈನರ್ ಆಗಿರುವ ಭಾರ್ಗವಿ ವಿಖ್ಯಾತಿ ಸಹ ಕಾರ್ಯ ಪ್ರವೃತರಾಗಿದ್ದಾರೆ. ದಸರಾ ಪ್ರಯುಕ್ತ ನವತಾರ್ ಹೆಸರಿನ ಕಲರ್ಫುಲ್ ಕಾನ್ಸೆಪ್ಟ್ ಜತೆಗೆ ಆಗಮಿಸಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ಚಿತ್ರದ ಹಾಡಿಗೆ ಧ್ವನಿಯಾದ ತಮಿಳು ನಟ ಧನುಷ್​

    ಏನಿದು ನವತಾರ್ ಕಾನ್ಸೆಪ್ಟ್?: ದಸರಾ ಹಬ್ಬವನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಒಂಭತ್ತು ದೇವಿಯರ ಪೂಜಾಚರಣೆಯೂ ನೆರವೇರುತ್ತದೆ. ಇದೀಗ ಆ ಪರಿಕಲ್ಪನೆಯಡಿಯಲ್ಲಿ ನವತಾರ್ ಅನ್ನೋ ಫೋಟೋಶೂಟ್‍ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ ಭಾರ್ಗವಿ ವಿಖ್ಯಾತಿ. 9 ಸಿನಿಮಾ ಸೆಲೆಬ್ರಿಟಿಗಳನ್ನು ಆಯ್ದುಕೊಂಡು ಅವರಿಗೆ ಬಗೆಬಗೆ ರೀತಿಯ ಕಾಸ್ಟೂಮ್‍ ವಿನ್ಯಾಸ ಮಾಡಿ, ಫೋಟೋಶೂಟ್‍ ಮಾಡಿಸಿದ್ದಾರೆ ‘ಇಲ್ಲಿ ದೇವಿಯರ ಅವತಾರವನ್ನು ಸೃಷ್ಟಿಸಲಾಗಿಲ್ಲ. ಬದಲಿಗೆ ಅವರನ್ನೇ ಹೋಲುವ ಮತ್ತು ಅದಕ್ಕೆ ಒಂದಿಷ್ಟು ಮಾರ್ಡನ್ ಟಚ್‍ ಕೊಟ್ಟು ಫೋಟೋಶೂಟ್‍ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಭಾರ್ಗವಿ ವಿಖ್ಯಾತಿ.

    ಬಗೆಬಗೆ ಪರಿಕಲ್ಪನೆಯಲ್ಲಿ ತಾರೆಯರ ಮಿಂಚಿಂಗ್‍: ಸೆಲೆಬ್ರಿಟಿ ಸ್ಟೈಲಿಸ್ಟ್ ಆಗಿರುವ ಭಾರ್ಗವಿ ವಿಖ್ಯಾತಿ ಸ್ಯಾಂಡಲ್ವುಡ್‍ನ 9 ಜನ ಸೆಲೆಬ್ರಿಟಿಗಳನ್ನು ಆಯ್ದುಕೊಂಡಿದ್ದಾರೆ. ಆ ಒಂಭತ್ತು ತಾರೆಯರಿಗೆ ವರ್ಣಮಯ ಕಾಸ್ಟೂಮ್‍ ಡಿಸೈನ್‍ ಮಾಡಿದ್ದಾರೆ. ಆ ನಟಿಯರ ವಿವರ ಇಲ್ಲಿದೆ. ನಟಿ ಶ‍್ರೀಲೀಲಾ ಅಪ್ಪಟ ಮರಾಠಿ ಯುವರಾಣಿಯಾಗಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು, ಕುದುರೆ ಏರಿ ಹಣೆ ಮೇಲೆ ಅರ್ಧ ಚಂದ್ರನನ್ನು ಧರಿಸಿ ಪೋಸ್‍ ನೀಡಿದ್ದಾರೆ. ಅದೇ ರೀತಿ ದೀಪಿಕಾ ದಾಸ್ ಕೈಯಲ್ಲಿ ಕತ್ತಿ ಹಿಡಿದು, ಲೆಹೆಂಗಾ ತೊಟ್ಟು ಗಂಭೀರವಾದ ಮುಖಭಾವ ನೀಡಿ ಉತ್ತರ ಭಾರತದ ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    'ನವತಾರ್' ರಂಗಿನಲ್ಲಿ ಚಂದನವನದ ಸುಂದರಿಯರು; ಭಾರ್ಗವಿ ವಿಖ್ಯಾತಿ ಕಲರ್ಫುಲ್ ಪ್ರಯತ್ನ

    ದಾಂಡಿಯಾ ನೃತ್ಯ ಮಾದರಿಯಲ್ಲಿ ಡಾನ್ಸ್ ಶೈಲಿಯ ಘರ್ಬಾ ಥರಹದ ಕಾಸ್ಟೂಮ್‍ನಲ್ಲಿ ಕಂಗೊಳಿಸಿದ್ದಾರೆ ನಿಶ್ವಿಕಾ ನಾಯ್ಡು. ಹರ್ಷಿಕಾ ಪೂಣಚ್ಚ ಪಕ್ಕಾ ದಕ್ಷಿಣ ಭಾರತದ ಮಹಾರಾಣಿ ಅವತಾರ ಎತ್ತಿದ್ದಾರೆ. ಕೃಷಿ ತಾಪಂಡ ಹಳದಿ ಮತ್ತು ಕೇಸರಿ ರಂಗಿನಲ್ಲಿ ಮುಳುಗಿದ್ದಾರೆ. ಬಿಂದಿಗೆ ಹಿಡಿದು, ನೀರಿನ ಕೊಳದ ಪಕ್ಕ ಕುಳಿತಿದ್ದಾರೆ.
    ನಟಿ ಕಾವ್ಯಾ ಶೆಟ್ಟಿ ವೀಣೆ ಹಿಡಿದು ಸರಸ್ವತಿಯಂತೆ ಗೋಚರವಾಗಿದ್ದಾರೆ. ಕಾವ್ಯಾ ಶಾಸ್ತ್ರಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿ ಕಂಡರೆ, ಮಲೆನಾಡ ಹುಡುಗಿಯ ಸೊಗಡಿನಲ್ಲಿ ಸಂಪದ ಮಿಂಚಿದ್ದಾರೆ. ಇಂಡೋ ವೆಸ್ಟರ್ನ್ ಶೈಲಿ ಉಡುಗೆಯಲ್ಲಿ ಶಾಲಿನಿ ಗೌಡ ಕಾಣಿಸಿಕೊಂಡಿದ್ದಾರೆ. ಈ ಒಂಭತ್ತು ನಟಿಯರ ವಿನ್ಯಾಸಗಳ ಜತೆಗೆ ಇಡೀ ಡಿಸೈನಿಂಗ್‍ ತಂಡವೂ ತಮ್ಮದೇ ಆದ ವಿನ್ಯಾಸವೊಂದರಲ್ಲಿ ಮಿಂಚಿದೆ. ಬೆಂಗಳೂರು ಮೂವಿಸ್‍ ಮತ್ತು ಪಿಕಾಕ್ ಗ್ರೋ ರೆಸಾರ್ಟ್‍ನಲ್ಲಿ ಇವರೆಲ್ಲರ ಫೋಟೋಶೂಟ್‍ ಮಾಡಿಸಲಾಗಿದೆ.

    ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬಿಡಿ, ಟಿವಿಯಲ್ಲೂ ಫ್ಲಾಪ್​ ಆಯ್ತು ಪ್ರಭಾಸ್​ ಅಭಿನಯದ ‘ಸಾಹೋ’ …

    ತಾಂತ್ರಿಕ ವರ್ಗದ ಹಿನ್ನೆಲೆ: ಎಲ್ಲ ಒಂಭತ್ತು ಸೆಲೆಬ್ರಿಟಿಗಳ ಕಾಸ್ಟೂಮ್‍ ವಿನ್ಯಾಸದ ಜವಾಬ್ದಾರಿಯನ್ನು ಭಾರ್ಗವಿ ವಿಖ್ಯಾತಿ ವಹಿಸಿಕೊಂಡರೆ, ಮೇಕಪ್‍ ಆರ್ಟಿಸ್ಟ್ ಆಗಿ ನಿಖಿತಾ ಆನಂದ್‍ ಚೆಂದದ ಮೇಕಪ್‍ ಮಾಡಿದ್ದಾರೆ. ಎಲ್ಲರನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದವರು ರೇನ್‍ಬೋ ಫೋಟೋಗ್ರಾಫಿಯ ಕಿರಣ್‍ ಮತ್ತು ಹೂವೇಶ್‍. ಶ‍್ವೇತಾ ಇಂಚರ್ ಇಡೀ ಕಾನ್ಸೆಪ್ಟ್ನಲ್ಲಿ ಭಾರ್ಗವಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಭೂಷಣ್ ಮತ್ತು ಆಮ್ರಪಾಲಿ ಜುವೆಲ್ಸ್ ಆಭರಣ ಡಿಸೈನ್ ಉಸ್ತುವಾರಿವಹಿಸಿಕೊಂಡಿದೆ.

    ದಸರಾ ದೇವಿಯರ ಹಬ್ಬ. ಈ ಒಂಭತ್ತು ದಿನದ ಸಂಭ್ರಮವನ್ನು ನವತಾರ್ ಮೂಲಕ ಆಚರಣೆ ಮಾಡಿದ್ದೇವೆ. ಸಿನಿಮಾ ತಾರೆಯರನ್ನು ಅವರವರ ಅಭಿಮಾನಿಗಳು ವಿವಿಧ ಫೋಟೋಶೂಟ್‍ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇದೀಗ ಅದೆಲ್ಲದಕ್ಕೂ ವಿಭಿನ್ನವಾದ ಪ್ರಯೋಗ ನಾವು ಮಾಡಿದ್ದೇವೆ. ಕಲರ್ಫುಲ್ ಥೀಮ್‍ ಮತ್ತು ಪರಿಕಲ್ಪನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಶೈಲಿಯ ಉಡುಪುಗಳನ್ನು ವಿನ್ಯಾಸ ಮಾಡಿದ್ದೇನೆ.
    | ಭಾರ್ಗವಿ ವಿಖ್ಯಾತಿ, ಫ್ಯಾಷನ್ ಡಿಸೈನರ್‍, ಸೆಲೆಬ್ರಿಟಿ ಸ್ಟೈಲಿಸ್ಟ್

    ನಾಪತ್ತೆಯಾದ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts