More

    ನವಲಿ ಗ್ರಾಮದ ಭೋಗಾಪುರೇಶ ಕೆರೆ ಹಸ್ತಾಂತರ

    ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಹಾಗೂ ನವಲಿ ಗ್ರಾಪಂ ಸಹಯೋಗದೊಂದಿಗೆ ಪುನಶ್ಚೇತನ ಕಂಡ ಕೆರೆಯ ನಾಮಫಲಕ ಅನಾವರಣ ಹಾಗೂ ಸಸಿ ನಾಟಿ ಕಾರ್ಯಕ್ರಮ ಬುಧವಾರ ನಡೆಯಿತು.

    ಇದನ್ನೂ ಓದಿ: ಕೆರೆ ತುಂಬಿಸುವ ಯೋಜನೆ ವಿಳಂಬಕ್ಕೆ ಬೇಸರ

    ಜ.6ರಿಂದ ಫೆ.9ರವರೆಗೆ ನಡೆದ ಕೆರೆ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 5.5 ಲಕ್ಷ ರೂ. ಅನುದಾನ ದೊರೆತಿತ್ತು. ಕೆರೆ ಹೂಳು ಸಾಗಣೆಗೆ ಗ್ರಾಮಸ್ಥರು ಟ್ರಾೃಕ್ಟರ್, ಟಿಪ್ಪರ್ ಒದಗಿಸಿದ್ದು ಹೂಳು ಸಾಗಣೆಗೆ 3 ಲಕ್ಷ ರೂ. ಸೇರಿ ಒಟ್ಟು 8.5 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ. ಕೆರೆಯ 2 ಎಕರೆ ವಿಸ್ತೀರ್ಣದಲ್ಲಿ ಒಟ್ಟು 18928 ಘ. ಮೀ ಹೂಳು ತೆಗೆಯಲಾಗಿದೆ.

    ಪುನಶ್ಚೇತನಗೊಂಡ ಕೆರೆ ನಿರ್ವಹಣೆ ಜವಾಬ್ದಾರಿಯನ್ನು ಪಿಡಿಒ ಹಾಗೂ ಕೆರೆ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು ಎಂದು ಯೋಜನೆಯ ಕೃಷಿ ಮೇಲ್ವಿಚಾರಕ ಸುರೇಶ ತಿಳಿಸಿದರು.

    ಕೊಪ್ಪಳ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಕಾಂತಪ್ಪ ಎಂ.ಕೆ., ನವಲಿ ಗ್ರಾಪಂ ಪಿಡಿಒ ಸುರೇಶ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿರುಪಣ್ಣ ಕಲ್ಲೂರು, ನಿಂಗಪ್ಪ ನಾಯಕ, ಭೀಮ ನಾಯಕ ಹರ್ಲಾಪುರ, ಕಾಡನಗೌಡ ಖ್ಯಾಡೆದ, ನೀಲಪ್ಪ, ಶಿವರೆಡ್ಡಿ ಕ್ಯಾಡೆದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts