More

    ನೇಚರ್‌ ಇನ್‌ ಫೋಕಸ್‌ 2021ರ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ ಫಲಿತಾಂಶ ಪ್ರಕಟ; ಇಲ್ಲಿದೆ ಫೋಟೋಸಹಿತ ವಿವರ..

    ಬೆಂಗಳೂರು: ‘ನೇಚರ್‌ ಇನ್‌ ಫೋಕಸ್‌’ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆ 2021ರ ಫಲಿತಾಂಶ ಹೊರಬಿದ್ದಿದೆ. ಮೊಹಮ್ಮದ್‌ ಮುರಾದ್‌, ಪ್ರಿಯಾಂಕಾ ರಾಹುತ್‌ ಮಿತ್ರ, ಪ್ರಥಮೇಶ್‌ ಗಡೇಕರ್‌, ಲಕ್ಷಿತಾ ಕರುಣಾರತ್ನ, ಮಹ್ಸಿನ್‌ ಖಾನ್, ಅನಘಾ ಮೋಹನ್‌ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ‘ನೇಚರ್‌ ಇನ್‌ ಫೋಕಸ್‌’ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಮತ್ತು ಫಿಲ್ಮ್‌ ಸ್ಪರ್ಧೆಯನ್ನು ನವೆಂಬರ್‌ 19ರಿಂದ 22ರವರೆಗೆ ಆಯೋಜಿಸಲಾಗಿದ್ದು, ಇದನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಕಾರ್ಪೋರೇಟ್‌ ಜಗತ್ತಿನಲ್ಲಿದ್ದುಕೊಂಡೇ ವನ್ಯಜೀವಿ ಮತ್ತು ಛಾಯಾಗ್ರಹಣದ ಬಗ್ಗೆ ವಿಶೇಷ ಒಲವು, ಪರಿಣತಿ ಹೊಂದಿರುವ ರೋಹಿತ್‌ ವರ್ಮಾ ಹಾಗೂ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಕಲ್ಯಾಣ್‌ ವರ್ಮಾ ಈ ಸ್ಪರ್ಧೆಯ ಆಯೋಜಕರು.

    ಈ ಸ್ಪರ್ಧೆಗೆ 40 ದೇಶಗಳ 2 ಸಾವಿರಕ್ಕೂ ಹೆಚ್ಚು ಛಾಯಾಗ್ರಾಹಕರಿಂದ ಸುಮಾರು 18 ಸಾವಿರ (ಚಿತ್ರ) ಅರ್ಜಿ ಸ್ವೀಕರಿಸಲಾಗಿತ್ತು. ಈ ಪೈಕಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಘೋಷಿಸಲಾಗಿದೆ.

    ಇದನ್ನೂ ಓದಿ: ಕಸಾಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ವಿರುದ್ಧವಾಗಿ ನಡ್ಕೊಂಡು ಭಾಜಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯತ್ವ ಕಳ್ಕೊಂಡ!

    ‘ನೇಚರ್ ಇನ್‌ ಫೋಕಸ್‌’ ಫಿಲ್ಮ್‌ ಸ್ಪರ್ಧೆಯ 3 ವಿಭಾಗಗಳು, ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿಯಲಾದ ವನ್ಯಜೀವಿ ದೃಶ್ಯಗಳಿಗೆ ಮಾತ್ರ ಮೀಸಲಾಗಿದ್ದವು ಎಂಬುದೇ ವಿಶೇಷ. ನೈಸರ್ಗಿಕ ಇತಿಹಾಸ ಮತ್ತು ಸಂರಕ್ಷಣೆ ಎಂಬ ಎರಡು ಉಪವರ್ಗಗಳಲ್ಲಿ ಸ್ಪರ್ಧಿಸಲು ವೃತ್ತಿಪರ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಅವಕಾಶ ನೀಡಲಾಗಿತ್ತು.

    ವಿವಿಧ ವಿಭಾಗವಾರು ಪ್ರಶಸ್ತಿ ಪುರಸ್ಕೃತರು

    • ಅನಿಮಲ್ ಪೋರ್ಟ್ರೇಟ್ಸ್​: ಮೊಹಮ್ಮದ್ ಮುರಾದ್
    • ಅನಿಮಲ್ ಬಿಹೇವಿಯರ್: ಪ್ರಿಯಾಂಕಾ ರಾಹುತ್ ಮಿತ್ರ
    • ಕ್ರಿಯೇಟಿವ್ ನೇಚರ್ ಛಾಯಾಗ್ರಹಣ: ಪ್ರಥಮೇಶ್ ಗಡೇಕರ್
    • ವೈಲ್ಡ್‌ಸ್ಕೇಪ್‌ ಆ್ಯಂಡ್​ ಅನಿಮಲ್ಸ್‌ ಇನ್​ಹ್ಯಾಬಿಟೆಂಟ್‌: ಲಕ್ಷಿತಾ ಕರುಣಾರತ್ನ
    • ಕನ್ಸರ್ವೇಷನ್ ಇಶ್ಯೂಸ್- ಮಹಿನ್ ಖಾನ್
    • ಯಂಗ್ ಫೋಟೋಗ್ರಾಫರ್: ಅನಘಾ ಮೋಹನ್ (15 ವರ್ಷ)

    ವೃತ್ತಿಪರರ ವಿಭಾಗ: ಸಂರಕ್ಷಣಾ ಚಲನಚಿತ್ರ ವರ್ಗದಲ್ಲಿ ನಿಖಿಲ್ ತಾಳೆಗಾಂವ್ಕರ್ ಮತ್ತು ಸಂದೀಪ್ ಧುಮಾಲ್ ಅವರು ತಮ್ಮ ‘ಖೀ (ನಾಯಿಗಳು)’ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ‘ಲಾಸ್ಟ್ ಕಿಂಗ್ಸ್ ಆಫ್ ಬಯೋಕೋ’ ಚಿತ್ರಕ್ಕಾಗಿ ಗುಲೋ ಫಿಲ್ಮ್ ಪ್ರೊಡಕ್ಷನ್ಸ್ ಮತ್ತು ಸ್ಟುಡಿಯೋ ಹ್ಯಾಂಬರ್ಗ್ ಡಾಕ್‌ಲೈಟ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ಆಲಿವರ್ ಗೊಯೆಟ್ಜ್ಲ್ ಅವರು ನ್ಯಾಚುರಲ್ ಹಿಸ್ಟರಿ ಚಿತ್ರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಉದಯೋನ್ಮುಖ ಪ್ರತಿಭೆ ವಿಭಾಗ: ತಿರುಪುರ್ ನೇಚರ್ ಸೊಸೈಟಿ, ಫ್ರಾನ್ಸೆಸ್ಕಾ ಬ್ರಿಟೊಲ್ ಮತ್ತು ಸವಿತಾ ಮತ್ತು ಶುಭಂ ಸಿಂಗ್ ಬಾಘೆಲ್ ನಿರ್ಮಿಸಿರುವ ‘ಕಲಿರು’ ಚಿತ್ರಕ್ಕಾಗಿ ಜೆಸ್ವಿನ್ ಕಿಂಗ್ಸ್ಲಿ ಮತ್ತು ಸಂತೋಷ್ ಕೃಷ್ಣನ್ ಸಂರಕ್ಷಣಾ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ನ್ಯಾಚುರಲ್ ಹಿಸ್ಟರಿ ಚಿತ್ರ ವಿಭಾಗದಲ್ಲಿ ಕುನಾಲ್ ಷಾ, ‘ಸವನ್ನಾ ವಾರಿಯರ್ಸ್’ ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು. ಸ್ವಯಂ ಥಕ್ಕರ್‌ ಅವರ ‘ಆನ್‌ ಅನ್‌ಯೂಶಿಯಲ್‌ ಸೈಟ್‌’ ಗೆ ‘ವೈಲ್ಡ್ ಮೊಮೆಂಟ್’ ಪ್ರಶಸ್ತಿ ಸಂದಿದೆ.

    ಜ್ಯೂರಿ ಕ್ಯುರೇಟರ್ ಹಾಗೂ ‘ನೇಚರ್ ಇನ್‌ ಫೋಕಸ್‌’ ಸಲಹಾ ಮಂಡಳಿ ಸದಸ್ಯರಾಗಿರುವ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಸಾರಾ ಈ ಕಾರ್ಯಕ್ರಮ ನಿರೂಪಿಸಿದರು. ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳು ಮತ್ತು ಆಯ್ಕೆ ಹಿಂದಿನ ಕಾರಣಗಳ ಬಗ್ಗೆ ತೀರ್ಪುಗಾರರ ಮಂಡಳಿಯ 7 ಸದಸ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ನೇಚರ್ ಇನ್‌ ಫೋಕಸ್‌ ಫೋಟೋಗ್ರಫಿ ಆ್ಯಂಡ್​ ಫಿಲ್ಮ್‌ ಸ್ಪರ್ಧೆಯನ್ನು, ಕೇವಲ ಸ್ಪರ್ಧೆಗೆ ಸೀಮಿತಗೊಳಿಸಲಾಗದು. ಕ್ಯಾಮರಾದಲ್ಲಿ ಬೆರಗು ಸೃಷ್ಟಿಸುವವರಿಗೆ ಇದು ಪ್ರೇರಣೆ ಆಗಲಿದೆ. ಚೌಕಟ್ಟಿನ ಆಚೆಗೆ ಚಿಂತಿಸುವ ಜನರು ತಮ್ಮ ಚಿತ್ರಗಳ ಮೂಲಕ ವಿಶಿಷ್ಟವಾಗಿ ಗುರತಿಸಿಕೊಳ್ಳುವುದಲ್ಲದೆ, ಬದಲಾವಣೆಗೆ ಕಾರಣರಾಗುತ್ತಾರೆ ಎಂಬುದು ಈ ಸ್ಪರ್ಧೆಯಿಂದ ಸ್ಪಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳ ಸಂಖ್ಯೆ ಏರುತ್ತಲೇ ಇದ್ದು, ಕೋವಿಡ್‌ ಸಂಕಷ್ಟ ಕಲಾವಿದರ ಉತ್ಸಾಹಕ್ಕೆ ಅಡ್ಡಿ ಆಗಿಲ್ಲ ಎಂಬುದೇ ಸಮಾಧಾನಕರ ವಿಷಯ. ಈ ಸ್ಪರ್ಧೆಗೆ ದೇಶದಿಂದ ಮಾತ್ರವಲ್ಲದೆ ವಿಶ್ವದ ನಾನಾ ಭಾಗಗಳಿಂದ ಅರ್ಜಿಗಳು ಬಂದಿದ್ದವು. ಹಾಗಾಗಿ ಇದು ನಿಜವಾದ ಅಂತಾರಾಷ್ಟ್ರೀಯ ಸ್ಪರ್ಧೆ ಎಂದು ನೇಚರ್‌ ಇನ್‌ ಫೋಕಸ್‌ ಮುಖ್ಯಸ್ಥ ರೋಹಿತ್‌ ವರ್ಮಾ ತಿಳಿಸಿದ್ದಾರೆ.

    ‘ನೇಚರ್ ಇನ್‌ ಫೋಕಸ್‌’ ಛಾಯಾಗ್ರಹಣ ಮತ್ತು ಚಲನಚಿತ್ರ ಸ್ಪರ್ಧೆಯ ವಿಜೇತರ ಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದು.

    https://drive.google.com/drive/u/0/folders/1mn0sBnnSUBhveGBn5MHDZbwqdOwQPKqe

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts