More

    ದೇಶದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ.ಸಂಪತ್​ಕುಮಾರ್ ಇನ್ನಿಲ್ಲ

    ಬೆಂಗಳೂರು: ದೇಶದ ಏಕಮಾತ್ರ ಸಂಸ್ಕೃತ ಪತ್ರಿಕೆ ಎನ್ನಲಾದ ‘ಸುಧರ್ಮಾ’ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್​ಕುಮಾರ್​ (64) ಅವರು ಇಂದು ನಿಧನರಾದರು. ಮೈಸೂರಿನಲ್ಲಿರುವ ಕಚೇರಿಯಲ್ಲಿ ಇಂದು ಇವರು ಬರೆಯುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು.

    ಸುಧರ್ಮಾ ಪತ್ರಿಕೆ ಮೂಲಕ ದೇಶ-ವಿದೇಶಗಳಲ್ಲಿ ಸಂಸ್ಕೃತವನ್ನು ಪಸರಿಸಿ, ಜನಪ್ರಿಯಗೊಳಿಸುವಲ್ಲಿ ಇವರು ಶ್ರಮಿಸಿದ್ದರು. ಇವರು ತಮ್ಮ ಪತ್ನಿ ಕೆ.ಎಸ್​. ಜಯಲಕ್ಷ್ಮೀ ಅವರ ಸಹಕಾರದಿಂದ ಪತ್ರಿಕೆಯನ್ನು ರೂಪಿಸಿ ಹೊರತರುತ್ತಿದ್ದರು. ಸಂಪತ್​ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1970ರಲ್ಲಿ ಸುಧರ್ಮಾ ಸಂಸ್ಕೃತ ಪತ್ರಿಕೆಯನ್ನು ಆರಂಭಿಸಿದ್ದರು. ಅವರು ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಯನ್ನೂ ಓದುತ್ತಿದ್ದರು.

    ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಏಕೈಕ ಸಂಸ್ಕೃತ ಪತ್ರಿಕೆಯ ಮೂಲಕ ಸಂಸ್ಕೃತಕ್ಕೆ ಪೂರಕವಾದ ಹಲವಾರು ಕೆಲಸಗಳನ್ನು ಮಾಡುತ್ತಿರುವ ಜತೆಗೆ ಐದು ದಶಕಗಳ ಹಿಂದಿನ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಂಪತ್​ಕುಮಾರ್ ಹಾಗೂ ಜಯಲಕ್ಷ್ಮೀ ದಂಪತಿಯನ್ನು ಕೇಂದ್ರ ಸರ್ಕಾರ 2 ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಆದರೆ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಸಂಪತ್​ಕುಮಾರ್ ಇಹಲೋಕ ತ್ಯಜಿಸಿದ್ದಾರೆ.

    ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

    ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts