More

    ಮಂತ್ರಾಕ್ಷತೆ ಮಹತ್ವ ತಿಳಿಸಿ

    ಬಸವನಬಾಗೇವಾಡಿ: ಅಯೋಧ್ಯದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಣೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಟ್ಟಣ ಸೇರಿ ತಾಲೂಕಿನಾದ್ಯಂತ ಬರುವ ವಿವಿಧ ದೇವಸ್ಥಾನಗಳನ್ನು ಜ. 11ರಿಂದ 22ರವರೆಗೆ ಸ್ವಚ್ಛಗೊಳಿಸಿ ವಿಶೇಷ ಪೂಜೆ ನೆರವೇರಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ಆರ್‌ಎಸ್‌ಎಸ್ ಜಿಲ್ಲಾ ಘಟಕದ ಸೇವಾ ಪ್ರಮುಖ ಡಾ. ಬಸವರಾಜ ಚವ್ಹಾಣ ಹೇಳಿದರು.

    ಪಟ್ಟಣದಲ್ಲಿ ತಾಲೂಕಾ ವಿಶ್ವ ಹಿಂದು ಪರಿಷತ್, ಬಜರಂಗದಳ, ಆರ್‌ಎಸ್‌ಎಸ್ ಕಾರ್ಯಕರ್ತರು ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ರಾಮಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಬಸವಜನ್ಮ ಸ್ಮಾರಕದ ಮುಂಭಾಗದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ಸ್ವಯಂ ಸೇವಕ ಕಾರ್ಯಕರ್ತರು ಮನೆಮನೆಗೆ ತೆರಳಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ರಾಮ ಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಗೆ ತೆರಳುವಾಗ ಮಡಿಯಿಂದ ಶುಭ್ರ ವಸ್ತ್ರ ಧರಿಸಬೇಕು. ಮನೆಯ ಹೊರಗಡೆ ನಿಂತು ನೀಡಬಾರದು. ಮನೆ ಒಳಗಡೆ ಹೋಗಿ ಮಂತ್ರಾಕ್ಷತೆಯ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದರು.

    ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಬಸವರಾಜ ಬಿಜಾಪುರ, ವಿಠ್ಠಲ ಕುಲಕರ್ಣಿ, ಚನ್ನಯ್ಯ ಸಾರಂಗಮಠ, ಎ.ಎಸ್. ದೇಗಿನಾಳ, ರಾಜು ಮುಳವಾಡ, ಪ್ರಭು ಪಟ್ಟಣಶೆಟ್ಟಿ, ಶ್ರೀಶೈಲ ಶಿರಗುಂಪಿ, ಈಶ್ವರ ಪರಮಗೊಂಡ, ಸ್ವರೂರಾಣಿ ಬಿಂಜಲಬಾವಿ, ಮಹಾದೇವಿ ಬಿರಾದಾರ, ಜಯಶ್ರೀ ಪಟ್ಟಣಶೆಟ್ಟಿ, ಮಹೇಶ ಸಾಲವಾಡಗಿ, ವಿಶ್ವನಾಥ ನೇಗಿನಾಳ, ನಾಗೇಶ ನಾಗೂರ, ರಾಜು ಮೋದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts