More

    ರಾಷ್ಟ್ರೀಯ ರೋಲರ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ , ಕಂಚು ಗೆದ್ದ ಉತ್ತರ ಕನ್ನಡದ ಪ್ರತಿಭೆಗಳು

    ಕಾರವಾರ: ಚಂಡೀಗಢದಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಜಿಲ್ಲೆಯ ಕೆಡೆಟ್‌ಗಳು, ಕೋಚ್‌ಗಳಿದ್ದ ಕರ್ನಾಟಕ ತಂಡ ಗಮನಾರ್ಹ ಸಾಧನೆ ಮಾಡಿದೆ.

    ಕರ್ನಾಟಲ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಶನ್‌ ಪರವಾಗಿ ಕೈಗಾದ ದಿಲೀಪ ಹಣಪರ್‌ ರಾಜ್ಯದ ತಂಡಗಳಿಗೆ ಕೋಚ್‌ ಆಗಿದ್ದರು. ಒಟ್ಟಾರೆ ವಿಭಾಗದಲ್ಲಿ ಕರ್ನಾಟಕದ ಹಾಕಿ ಪಟುಗಳು ಪಾಲ್ಗೊಂಡಿದ್ದವು. ಅದರಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಕರ್ನಾಟಕದ ತಂಡಗಳು ಗೆದ್ದು ವಾಪಸಾಗಿವೆ.

    ಬೆಳ್ಳಿಗೆ ಮುತ್ತಿಟ್ಟ ಆದ್ಯಾ ನಾಯ್ಕ ತಂಡ

    Silver-medal.

    ಕೈಗಾದ ಆದ್ಯಾ ನಾಯ್ಕ ನೇತೃತ್ವದ 11ವರ್ಷದೊಳಗಿನ ಕೆಡೆಟ್ ಬಾಲಕಿಯರ ವಿಭಾಗದ ತಂಡವು ಹರಿಯಾಣ ಎದುರು 6-0, ಆಂಧ್ರ ಪ್ರದೇಶದ ಎದುರು 3-0, ಕೇರಳ ಎದುರು 2-0,  ತಮಿಳುನಾಡಿನ ಎದುರು 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜೊತೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 3-1 ನಂತರದಲ್ಲಿ ಗೆದ್ದು ಫೈನಲ್‌ ತಲುಪಿತ್ತು. ಪಂಜಾಬ್ ಜೊತೆ ನಡೆದ ಫೈನಲ್ ಪಂದ್ಯದಲ್ಲಿ 1-2 ಅಂತರಗಳಿಂದ ಪರಾಭವಗೊಂಡು ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಯಿತು.

    ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರ‌ ತಂಡವನ್ನ ಪ್ರತಿನಿಧಿಸಿದ್ದರು.

    ಕಂಚು ಗೆದ್ದ ಜಂಟಿ ತಂಡ

    Bronze-medal

    ಬಾಲಕರು, ಬಾಲಕಿಯರು ಜಂಟಿಯಾಗಿರುವ ಮಿಕ್ಸಡ್ ಕೆಡೆಟ್ ವಿಭಾಗದ ಕರ್ನಾಕಟ ತಂಡವು ಮೊದಲು ತಮಿಳುನಾಡು ಜೊತೆ ಆಡಿದ ಪಂದ್ಯ ಡ್ರಾ ಆಯಿತು. ನಂತರ ಆಂದ್ರಪ್ರದೇಶ, ಕೇರಳ , ಎದುರು ಗೆದ್ದು ಸೆಮಿಫೈನಲ್‌ ತಲುಪಿತು. ಮತ್ತೆ ಎದುರಾದ ಕೇರಳ ಜೊತೆಗಿನ ಸೆಮಿಫೈನಲ್‌ ಪಂದ್ಯದಲ್ಲಿ ಪರಾಭವಗೊಂಡಿತ್ತು. ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂದ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕ ಗಳಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. 

    ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ರಾಜಗುರು ಶಿರಸಿ, ಸಾಕಿಬ್ ಕೈಗಾ, ಅಯ್ಯನ್ ಕೈಗಾ, ಶ್ರೀಶ ಶೇಷಗಿರಿ ಮೊಗೇರ ಕಾರವಾರ, ಐಶ್ವರ್ಯ ತುಮಕೂರು, ದಕ್ಷತ್ ತುಮಕೂರು ಕರ್ನಾಟಕ ತಂಡವನ್ನ ಪ್ರತಿನಿಧಿಸಿದ್ದರು

    .Bronze-medal

    ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವೂ ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂದ್ರಪ್ರದೇಶ ತಂಡವನ್ನ ಮಣಿಸಿತ್ತು. ನಂತರ ಚಂಡೀಗಢ ಜೊತೆಗೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋಲನ್ನಪ್ಪಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜೊತೆಗೆ ನಡೆದ ಹಣಾಹಣಿಯಲ್ಲಿ 3-1 ಅಂಕಗಳಿಂದ ಗೆಲುವು ಸಾಧಿಸಿ ಕಂಚಿನ ಪದಕ ಪಡೆಯಿತು.

    ಮಾನ್ಯತಾ ಶಿರಸಿ(ಕ್ಯಾಪ್ಟನ್), ಮಾನ್ಯ ಬಿ ಎಸ್ ಶಿರಸಿ, ಅಪೂರ್ವ ಕಾರವಾರ, ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಯಶಸ್ವಿನಿ ಬೆಂಗಳೂರು, ಚಿನ್ಮಯಿ ಬೆಂಗಳೂರು, ಆರ್ಯ ಮಂಜುನಾಥ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.  

    ಒಟ್ಟಾರೆ ಟೂರ್ನಿಯಲ್ಲಿ  ಕೈಗಾದ ಆದ್ಯಾ ನಾಯ್ಕ, ರಾಜಗುರು, ಭುವನೀತ, ಮಾನ್ಯತಾ, ಅಪೂರ್ವ ಕರ್ನಾಟಕ ತಂಡದ ಪರವಾಗಿ ಉತ್ತಮ ಆಟ ಪ್ರದರ್ಶಿಸಿದ್ದಾರೆ.

    ಇದನ್ನೂ ಓದಿ: ಮಹಾಬಲೇಶ್ವರ, ಮುರ್ಡೇಶ್ವರ ದೇವರ ದರ್ಶನ ಪಡೆದ ಗವರ್ನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts