More

    ಮಹಾಬಲೇಶ್ವರ, ಮುರ್ಡೇಶ್ವರ ದೇವರ ದರ್ಶನ ಪಡೆದ ಗವರ್ನರ್

    ಕಾರವಾರ/ಗೋಕರ್ಣ/ಭಟ್ಕಳ: ಇಲ್ಲಿನ ಕದಂಬ ನೌಕಾನೆಲೆಯ ನೌಕಾ ದಿನಾಚರಣೆ ಕಾರ್ಯಕ್ರಮಕ್ಕೆ ಬುಧವಾರ ಆಗಮಿಸಿದ ಗವರ್ನರ್‌ ಥಾವರಚಂದ್‌ ಗೆಹಲೋತ್‌ ಅವರು ಗುರುವಾರ ಜಿಲ್ಲೆಯ ವಿವಿಧ ದೇವರ ದರ್ಶನ ಪಡೆದರು.

    ಬುಧವಾರ ವಿಕ್ರಮಾದಿತ್ಯ ನೌಕೆಯ ಮೇಲೆ ಓಡಾಟ ನಡೆಸಿದ ನಂತರ ರಾಜ್ಯಪಾಲರು ಐತಿಹಾಸಿಕ ಅಂಜುದೀವ್‌ ದ್ವೀಪದಲ್ಲಿ 100 ಅಡಿ ಎತ್ತರದ ಧ್ವಜಾರೋಹಣ ಮಾಡಿದರು. ನಂತರ ನೌಕಾ ದಿನದ ಎಟ್‌ ಹೋಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಿಗೆ ನೌಕಾಸೇನೆಯ ಚೇತಕ್‌ ಹೆಲಿಕಾಫ್ಟರ್‌ ಮೂಲಕ ಗೌರವ ವಂದನೆ ಸ್ವೀಕರಿಸಲಾಯಿತು.

    ದೇವಸ್ಥಾನಗಳಿಗೆ ಭೇಟಿ

    ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ಮಂದಿರಕ್ಕೆ ಗುರುವಾರ ಭೇಟಿಯಿತ್ತ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಆತ್ಮಲಿಂಗಕ್ಕೆ ವೇದೋಕ್ತ ವಿಶೇಷ ಪೂಜಾರ್ಚನೆ ಕೈಗೊಂಡರು.ರಾಜ್ಯಪಾಲರನ್ನು ಮಂದಿರದ ವತಿಯಿಂದ ಮಂಗಳವಾದ್ಯದೊಂದಿಗೆ ಅರ್ಚಕರ ನೇತೃತ್ವದಲ್ಲಿ ಉಪಾಧಿವಂತ ವೈದಿಕರು ಪೂರ್ಣಕುಂಭವಿತ್ತು ಸ್ವಾಗತಿಸಿದರು.ತರುವಾಯ ಪ್ರಧಾನ ಅರ್ಚಕ ಅಮೃತೇಶ ಹಿರೇ ನೇತೃತ್ವದಲ್ಲಿ ಹಿರಿಯ ಉಪಾಧಿವಂತ ಮಹಾಬಲ ಉಪಾಧ್ಯ,ಸಾಂಬ ಭಟ್ಟ ಕ್ಷಡಕ್ಷರಿ,ಗಣಪತಿ ಉಪಾಧ್ಯ,ಪ್ರಶಾಂತ ಹಿರೇಗಂಗೆ ಮುಂತಾದವರು ಪೂಜೆ ನಿರ್ವಹಿಸಿದರು.ಇದಕ್ಕೂ ಮುನ್ನ ರಾಜ್ಯಪಾಲರು ಶ್ರೀಮಹಾಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು.ಶ್ರೀಪಾರ್ವತಿ ಮಂದಿರಕ್ಕೆ ಭೇಟಿಯಿತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದರು.ಮಂದಿರ ಮೇಲುಸ್ತುವಾರಿ ಪ್ರಮುಖರಾದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್,ಪೊಲೀಸ್ ವರಿಷ್ಠ ಎನ್.ವಿಷ್ಣುವರ್ಧನ,ಸಹಾಯಕ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್,ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಮುಂತಾದವರಿದ್ದರು.ಸ್ಥಳೀಯ ಪೊಲೀಸ್ ಇನಸ್ಪೆಕ್ಟರ್ ವಸಂತ ಆಚಾರ್ಯ ನೇತೃತ್ವದಲ್ಲಿ ಪಿಎಸ್‌ಐ ರವೀಂದ್ರ ಬಿರಾದರ್,ಪಿಎಸ್‌ಐ ಸುಧಾ ಅಘನಾಶಿನಿ,ಪಿಎಸ್‌ಐ ರಾಜು ಆಗೇರ ಮತ್ತು ಸಿಬ್ಬಂದಿ ಬಂದೋಬಸ್ತ್ ನೋಡಿಕೊಂಡರು.

    ಮುರ್ಡೇಶ್ವರದಲ್ಲಿ:

    ಮುರುಡೇಶ್ವರ ಸನ್ನಿಧಿಯಲ್ಲಿ ರಾಜ್ಯಪಾಲರು ಏಕಾದಶ ರುದ್ರ ಪೂಜೆ ನೆರವೇರಿಸಿದರು. ನಂತರ ಕೆಲ ಕಾಲ ದೇವಸ್ಥಾನದ ಒಳಗೆ ಕುಳಿತು ವಿಶ್ರಾಂತಿ ಪಡೆದರು. ನಂತರ ಗಣ್ಯರ ಭೇಟಿ ಪುಸ್ತಕಕ್ಕೆ ಸಹಿ ಹಾಕಿ, ದೇವಸ್ಥಾನದ ಪ್ರಸಾದ ಪಡೆದು ದೇವರ ಆಶೀರ್ವಾದ ಪಡೆದರು. ಬಳಿಕ ಆರ್.ಎನ್ ಶೆಟ್ಟಿ ಪುತ್ರ ಸತೀಶ ಶೆಟ್ಟಿ ಮುರುಡೇಶ್ವರರ ದೇವರ ಫೋಟೋ ಹಾಗೂ ಮುರುಡೇಶ್ವರದ ಪುಸ್ತಕವನ್ನು ರಾಜ್ಯಪಾಲರಿಗೆ ನೀಡಿ ಗೌರವಿಸಿದರು.

    ಬಳಿಕ ಬ್ರಹತ್ ಶಿವನಮೂರ್ತಿಯ ವೀಕ್ಷಣೆಗೆ ಕಾರಿನಲ್ಲಿ ತೆರಳಿದ ಅವರು ಅಲ್ಲಿಯು ಸಹ ಕೆಲ‌ಕಾಲ ಓಡಾಡಿ ಮುರುಡೇಶ್ವರ ರಮಣೀಯತೆ ಯನ್ನು ಸವಿದರು. ನಂತರ ಆರ್‌ಎನ್‌ಎಸ್‌ ಗೆಸ್ಟ್‌ ಹೌಸ್‌ನಲ್ಲಿ ಊಟ ಮುಗಿಸಿ ಅಲ್ಲಿಂದ ನೇರವಾಗಿ ಉಡುಪಿಗೆ ತೆರಳಿದರು.

    ಇದನ್ನೂ ಓದಿ: ಸರಗಳ್ಳರಿಬ್ಬರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts