More

    ನರೇಗಾದಡಿ ಸಸಿ ನೆಡುವ ಕಾಮಗಾರಿ ತನಿಖೆ ನಡೆಸಿ

    ದೇವದುರ್ಗ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯ ಸಸಿ ನೆಡುವ ಕಾಮಗಾರಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ವಿಶ್ವ ಬ್ಯಾಂಕ್ ತಂಡದಿಂದ ನೀರಿನ ಕಾಮಗಾರಿ ಪರಿಶೀಲನೆ

    ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಒತ್ತಾಯಿಸಿದರು.
    ಜಾಲಹಳ್ಳಿಯ ಸಿಐಟಿಯು ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ತಾಲೂಕಿನ 33ಗ್ರಾ.ಪಂಗಳಲ್ಲಿ ಅರಣ್ಯ ಬೆಳೆಸುವ ಉದ್ದೇಶದಿಂದ ಸಸಿ ನೆಡುವ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಹಣ ವ್ಯಯ ಮಾಡಿದರೂ ನೈಜ ಕೂಲಿಕಾರರಿಗೆ ಕೆಲಸ ನೀಡಿಲ್ಲ. ಅರಣ್ಯ ಇಲಾಖೆಗೆ ಪ್ರತಿಗ್ರಾಪಂಯಲ್ಲಿ 30ರಿಂದ 40 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಮಾಡಿಕೊಳ್ಳಲಾಗುತ್ತಿದೆ.

    ಆದರೆ, ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿಸಲಾಗಿದೆ ಎಂದು ದೂರಿದರು. ನರೇಗಾ ತಾಲೂಕು ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ.

    ಸಾಕ್ಷಿ ಸಮೇತ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಗಾಣಧಾಳ, ಪಲಕನಮರಡಿ, ಚಿಂಚೋಡಿ ಗ್ರಾಪಂ ವ್ಯಾಪ್ತಿಗಳಲ್ಲಿ ಕೆಲಸ ಮಾಡದ ಕಾರ್ಮಿಕರ ಪೋಟೋಗಳನ್ನು ನರೇಗಾ ತಂತ್ರಾಂಶದಲ್ಲಿ ಸೇರಿಸಿದ್ದಾರೆ. ಎನ್‌ಎಂಎಂಎಸ್ ಅಡಿ ಒಂದೇ ದಿನ ಎರಡು ಗ್ರಾಪಂಗಳಲ್ಲಿ ಮಾಡಿದ ಕಾಮಗಾರಿಗಳಿಗೆ ತಲಾ 10ಕೂಲಿಕಾರರ ಪೋಟೋ ಅಪ್ಲೋಡ್ ಮಾಡಿದ್ದಾರೆ.

    ಕಾಮಗಾರಿಗೆ 15 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೂಲಿಕಾರ್ಮಿಕರಿಗೆ ಕೂಲಿವೆಚ್ಚವಾಗಿ 10ಲಕ್ಷ ರೂ. ಪಾವತಿಸಲಾಗಿದೆ. ಉಳಿದ 5 ಲಕ್ಷ ರೂ. ಹಣವನ್ನು ಸಾಮಾಗ್ರಿ ವೆಚ್ಚ ಎಂದು ಎತ್ತುವಳಿ ಮಾಡಲಾಗುತ್ತಿದೆ ಎಂದರು. ಮುಖಂಡ ಗಿರಿಯಪ್ಪ ಪೂಜಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts