More

    ಇನ್ಫೋಸಿಸ್​ ಕ್ಯಾಂಪಸ್​ಗೆ ಬೆಳಗ್ಗೆ 6.20ಕ್ಕೇ ಬರುತ್ತಿದ್ದ ನಾರಾಯಣ ಮೂರ್ತಿ..!

    ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಸಮಯ ನಿರ್ವಹಣೆಗೆ ನೀಡುವಷ್ಟು ಮೌಲ್ಯವನ್ನು ಬಹುಶಃ ಬೇರೆ ಯಾವ ವಿಷಯಕ್ಕೂ ನೀಡುವುದಿಲ್ಲ ಕಾಣುತ್ತದೆ. ಇತ್ತೀಚೆಗೆ ಸಂಣದರ್ಶನ ಒಂದರಲ್ಲಿ ಮಾತನಾಡಿದ ಇನ್ಫೀ ಮುಖ್ಯಸ್ಥ ನಾರಾಯಣ ಮೂರ್ತಿ, ಅವರು ಅನೇಕ ವರ್ಷಗಳ ಕಾಲ ಬೆಳಿಗ್ಗೆ 6:20ಕ್ಕೆ ಕಚೇರಿಗೆ ಬಂದು ರಾತ್ರಿ 8 ಅಥವಾ 9 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.

    76 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಇನ್ಫೋಸಿಸ್ ಬೆಳೆಸಲು ಕಳೆದ ಸಮಯ ಮತ್ತು ಇದರಿಂದ ಅವರ ಇಬ್ಬರು ಮಕ್ಕಳ ಜೊತೆ ಸಾಕಷ್ಟು ಸಮಯವನ್ನು ಕಳೆಯುವುದೇ ಹೇಗೆ ಕಷ್ಟವಾಯಿತು ಎಂಬುದನ್ನು ಚರ್ಚಿಸಿದ್ದರು.

    ನಾರಾಯಣ ಮೂರ್ತಿ ಬೆಳಿಗ್ಗೆ 7 ಗಂಟೆಗೆ ಇನ್ಫೋಸಿಸ್ ಕ್ಯಾಂಪಸ್‌ಗೆ ಆಗಮಿಸುತ್ತಿದ ಬಗ್ಗೆ ಸಂದರ್ಶಕರು ಪ್ರಸ್ತಾಪಿಸಿದಾಗ, ಅವರು “ಬೆಳಿಗ್ಗೆ 6:20” ಎಂದು ನಾರಾಯಣ ಮೂರ್ತಿ ಮೃದುವಾಗಿ ಹೇಳಿದರು. ಸಂದರ್ಶನದಲ್ಲಿ, ಮುಂಜಾನೆಯೇ ಇನ್ಫೋಸಿಸ್ ಕ್ಯಾಂಪಸ್‌ಗೆ ಆಗಮಿಸುವುದು 2011 ರಲ್ಲಿ ನಿವೃತ್ತಿಯಾಗುವವರೆಗೂ ಅವರು ನಿರ್ವಹಿಸಿದ ಅಭ್ಯಾಸವಾಗಿತ್ತು ಎಂದು ಅವರು ಹೇಳಿದ್ದಾರೆ.

    ಸಂದರ್ಶನದಲ್ಲಿ ಅವರು ಇನ್ಫೋಸಿಸ್ ಅನ್ನು ರಚಿಸಲು ತ್ಯಾಗದ ಮಹಹತ್ವವನ್ನು ಒಪ್ಪಿಕೊಂಡರು. ಅವರು ತಮ್ಮ ಇಬ್ಬರು ಮಕ್ಕಳಾದ ರೋಹನ್ ಮತ್ತು ಅಕ್ಷತಾ ಅವರೊಂದಿಗೆ ಸಮಯ ಕಳೆಯುವುದೇ ಅವರು ತ್ಯಜಿಸಬೇಕಾದ ಅತ್ಯಂತ ನಿರ್ಣಾಯಕ ವಿಷಯವಾಗಿತ್ತು ಎಂದರು.

    1981ರಲ್ಲಿ ನಾರಾಯಣ ಮೂರ್ತಿಯವರು ತಮ್ಮ ಪತ್ನಿಯಿಂದ 10,000 ರೂಪಾಯಿ ಸಾಲ ಪಡೆದು ಇನ್ಫೋಸಿಸ್ ಸ್ಥಾಪಿಸಿದರು. ಪ್ರಸ್ತುತ, ಸಾಫ್ಟ್‌ವೇರ್ ದೈತ್ಯ 3.35 ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದು ಮತ್ತು ಸುಮಾರು 80 ಬಿಲಿಯನ್ ಡಾಲರ್​ನಷ್ಟು ಒಟ್ಟು ಬೆಲೆ ಹೊಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts