More

    12 ಮಡದಿಯರು, 102 ಮಕ್ಕಳು, 568 ಮೊಮ್ಮಕ್ಕಳು ಇರುವ ಈತ ಇನ್ನು ಮಕ್ಕಳಿಗೆ ಜನ್ಮ ಕೊಡಲ್ಲ ಅಂತೆ..!

    ಉಗಾಂಡಾ: ಹಿಂದೆ ಪುರಾಣ ಕಾಲದ ಗಾಂಧಾರಿಗೆ 100 ಮಕ್ಕಳಾದದ್ದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಜನ್ಮ ಕೊಟ್ಟ ಪ್ರಕರಣದ ಕೊನೆ ನೆನಪು ಎಂದು ಕಾಣುತ್ತದೆ. ಇಲ್ಲೊಬ್ಬ ಭೂಪ 12 ಹೆಂಡತಿಯರ ಜೊತೆಗೆ 102 ಮಕ್ಕಳನ್ನು ಮಾಡಿಕೊಂಡಿದ್ದಾನೆ. ಆದರೆ ಈತ ಕಡೆಗೂ ಮಕ್ಕಳು ಸಾಕು ಎನ್ನುತ್ತಿದ್ದಾನೆ!

    67 ವರ್ಷದ ಮೂಸಾ ಹಸಹ್ಯಾ, ಜೀವನ ವೆಚ್ಚ ಹೆಚ್ಚುತ್ತಿರುವ ಕಾರಣ ಮಕ್ಕಳನ್ನು ಪಡೆಯಲು ನಿರಾಸಕ್ತಿ ತೋರಿಸುತ್ತಿದ್ದಾಂತೆ! ಬಹುಪತ್ನಿತ್ವವನ್ನು ಅನುಮತಿಸಲಾಗಿರುವ ಉಗಾಂಡಾದ ಲುಸಾಕಾದಿಂದ ಮೂಸಾ ಹಸಾಹ್ಯ ಈಗ ಮಗುವನ್ನು ಹೆರುವ ವಯಸ್ಸಿನ ತಮ್ಮ ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದ್ದಾನೆ. 67 ವರ್ಷದ ಈತ, ಸೀಮಿತ ಸಂಪನ್ಮೂಲಗಳ ಕಾರಣ ಇನ್ನು ಮುಂದೆ ಹುಟ್ಟುವ ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮೂಸಾ ಒಬ್ಬ ರೈತ. ತನ್ನ ಉತ್ಪತ್ತಿ ಇನ್ನು ಮುಂದೆ ಹೆಚ್ಚಾಗುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

    ಈತನ ಕುಟುಂಬ ಉಗಾಂಡಾದ ಲುಸಾಕಾದಲ್ಲಿ 12 ಬೆಡ್‌ರೂಮ್ ಇರುವ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದೆ. ಇದರಿಂದ ತನ್ನ ಹೆಂಡತಿಯರನ್ನು ಹಳ್ಳಿಯಲ್ಲಿನ ಇತರ ಪುರುಷರೊಂದಿಗೆ ಓಡಿಹೋಗುವುದನ್ನು ತಡೆಯಬಹುದು ಅಂತೆ! ಮೂಸಾ ತನ್ನ 102 ಮಕ್ಕಳನ್ನು ಪ್ರತ್ಯೇಕವಾಗಿ ಹೆಸರಿಸಿದರೂ ತನ್ನ 568 ಮೊಮ್ಮಕ್ಕಳನ್ನು ಗುರುತಿಸಲು ಹೆಣಗಾಡುತ್ತಾರನಂತೆ.

    ಈತ ಕೇವಲ 16 ವರ್ಷದವನಾಗಿದ್ದಾಗ, ಅಂದರೆ 1921ರಲ್ಲಿ ಅವರ ಪತ್ನಿ ಹನೀಫಾ ಜೊತೆಗೆ ಮೊದಲ ವಿವಾಹವಾದ. ಆ ಮದುವೆಯ ನಂತರ ಶಾಲೆಯನ್ನು ತೊರೆದು ಎರಡು ವರ್ಷಗಳಲ್ಲೇ ತನ್ನ ಮಗಳಿಗೆ ಜನ್ಮ ನೀಡಿದ್ದ. ಆ ಸಮಯದಲ್ಲಿ, ಮೂಸಾ ಉದ್ಯಮಿ ಮತ್ತು ಗ್ರಾಮದ ಅಧ್ಯಕ್ಷನಾಗಿ ಸಮುದಾಯದ ಗೌರವಾನ್ವಿತ ವ್ಯಕ್ತಿ ಆಗಿದ್ದನಂತೆ!

    ಈ ಮನೆಯಲ್ಲಿ ಎಲ್ಲರೂ ಕೃಷಿ ಕೆಲಸ ಮಾಡಲೇ ಬೇಕಂತೆ. ಫಲವತ್ತಾದ ಭೂಮಿಯಲ್ಲಿ ಎಲ್ಲರೂ ಕೆಲಸ ಮಾಡುತ್ತಾ ಕುಟುಂಬದ ನಿರ್ವಹಣೆಗೆ ಕೆಲಸ ಮಾಡಬೇಕು ಎಂದು ಮೂಸಾ ಹಸಹ್ಯಾ ಮಾಹಿತಿ ನೀಡಿದ್ದಾನೆ. (ಏಜೆನ್ಸೀಸ್​)

    ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts