More

    ಸತತ ಆರು ಸುತ್ತುಗಳ ಹಿನ್ನಡೆ ಬಳಿಕ ಮುನ್ನಡೆ ಸಾಧಿಸಿದ ಸಿಎಂ ಮಮತಾ ಬ್ಯಾನರ್ಜಿ

    ಕೋಲ್ಕತ: ಸತತ ಆರು ಸುತ್ತಗಳಲ್ಲಿ ಹಿನ್ನಡೆ ಅನುಭವಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊನೆಗೂ ನಂದಿಗ್ರಾಮ ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

    ಸದ್ಯದ ಮಾಹಿತಿಯ ಪ್ರಕಾರ ಮಮತಾ ಬ್ಯಾನರ್ಜಿ ಅವರು 1500 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಮೊದಲ ಆರು ಸುತ್ತು ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಮುನ್ನಡೆಯನ್ನು ಸಾಧಿಸಿದ್ದರು. ಟಿಎಂಸಿ ಮುನ್ನಡೆ ನಡುವೆಯೂ ವ್ಯಯಕ್ತಿಕ ಹಿನ್ನೆಡೆಯಿಂದ ಆತಂಕದಲ್ಲಿದ್ದ ಮಮತಾಗೆ ಸದ್ಯದ ಟ್ರೆಂಡ್​ ಕೊಂಚ ನಿರಾಳ ತಂದಿದೆ.

    ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 147 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಸದ್ಯ ಟಿಎಂಸಿ 205 ಮತ್ತು ಬಿಜೆಪಿ 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದುವರೆಗೂ ಅಸ್ತಿತ್ವವೇ ಇರದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಗಟ್ಟಿಯಾಗಿ ನಲೆಯೂರಿದ್ದು, ಟಿಎಂಸಿ ಟಕ್ಕರ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣಾ ಫಲಿತಾಂಶದ ಭಾರೀ ನಿರೀಕ್ಷೆ ಇದೆ. (ಏಜೆನ್ಸೀಸ್​)

    ಟಿಎಂಸಿಗೆ ಭರ್ಜರಿ ಮುನ್ನಡೆ: ಕಾರ್ಯಕರ್ತರ ಹರ್ಷೋದ್ಗಾರ- ದುಃಖದಲ್ಲಿ ಮಮತಾ ಬ್ಯಾನರ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts