More

    ನಮ್ಮ ಮೆಟ್ರೋ ಇನ್ನು ದೇಶದಲ್ಲಿ ನಂ.2!

    ಬೆಂಗಳೂರು: ವೈಟ್.ಫೀಲ್ಡ್ ನಿಂದ ಕೃಷ್ಣರಾಜಪುರವರೆಗಿನ “ನಮ್ಮ ಮೆಟ್ರೋ” ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.

    ವೈಟ್.ಫೀಲ್ಡ್ ಮೆಟ್ರೋದಿಂದ ಕೃಷ್ಣರಾಜಪುರ ಮೆಟ್ರೋ ಮಾರ್ಗದವರೆಗಿನ 13.71 ಕಿ.ಮೀ ಉದ್ದವಿದ್ದು ಬೆಂಗಳೂರು ಮೆಟ್ರೋ ಹಂತ 2 ರ ರೀಚ್ -1 ವಿಸ್ತರಣಾ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಸುಮಾರು 4,250 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ  ಕೆ.ಆರ್.ಪುರಂ-ವೈಟ್.ಫೀಲ್ಡ್ ಮಾರ್ಗವು ಪ್ರಯಾಣದ ಸಮಯವನ್ನು 24 ನಿಮಿಷಗಳಿಗೆ ಇಳಿಸುವ ಗುರಿಯನ್ನು ಹೊಂದಿದೆ. 12 ನಿಲ್ದಾಣಗಳನ್ನು ಒಳಗೊಂಡಿರುವ ಈ ವಿಸ್ತರಣೆಯು ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದ ಐಟಿಪಿಎಲ್ ಕ್ಯಾಂಪದ್ ಗೆ ನೇರ ಪ್ರವೇಶವನ್ನು ನೀಡುತ್ತದೆ.

    ಅದಲ್ಲದೇ ನಮ್ಮ ಮೆಟ್ರೋ ದೆಹಲಿಯ ನಂತರ ಎರಡನೇ ಸ್ಥಾನ ಕೂಡ ಪಡೆದುಕೊಂಡಿದೆ. ದೇಶದಲ್ಲಿ ಅತೀ ದೊಡ್ಡ ಸಂಪರ್ಕ ಜಾಲ ಹೊಂದಿರುವ ಮೆಟ್ರೋ ದೆಹಲಿಯಲ್ಲಿದ್ದು ಎರಡನೇ ಸ್ಥಾನವನ್ನು ಹೈದರಾಬಾದ್ ಪಡೆದುಕೊಂಡಿತ್ತು. ಮೂರನೇ ಸ್ಥಾನದಲ್ಲಿ ಬೆಂಗಳೂರು ಇತ್ತು. ಇದೀಗ ಕೆಆರ್ ಪುರಂನಿಂದ ವೈಟ್.ಫೀಲ್ಡ್ ತನಕ ಹೊಸ ಲೈನ್ ಬಿಡುಡೆ ಆಗುತ್ತಿದ್ದುಅದರ ಉದ್ದ 13.71 ಕಿಮೀಗಳಷ್ಟಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಹೈದರಾಬಾದನ್ನು ಹಿಂದಿಕ್ಕಿ ಮೆಟ್ರೋ ವಿಚಾರದಲ್ಲಿ ನಂ.2 ಆಗಿ ಹೊರ ಹೊಮ್ಮಲಿದೆ.

    • ದೆಹಲಿ – 345 ಕಿ.ಮಿ
    • ನಮ್ಮ ಮೆಟ್ರೋ – 69.71ಕಿ.ಮಿ
    • ಹೈದರಾಬಾದ್- 69.1 ಕಿ.ಮಿ
    • ಚೆನ್ನೈ- 54.65 ಕಿ.ಮಿ
    • ಕೊಲ್ಕತ್ತಾ- 47 ಕಿ.ಮಿ

    ಸುಮಾರು 4,250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮೆಟ್ರೋ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಪ್ರಯಾಣಿಕರಿಗೆ ಸ್ವಚ್ಛ, ಸುರಕ್ಷಿತ, ತ್ವರಿತ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸಲಿದೆ. ಇದು ಸುಗಮ ಸಂಚಾರಕ್ಕೆ ಅನುವು ಮಾಡುವ ಜತೆಗೆ, ನಗರದ  ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts