More

    ವಿಶೇಷ ವರದಿ | ಬೂಟು ಕಾಲಿನಿಂದ ಮಗುವಿಗೆ ಒದ್ದದ್ದು ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಣಾಧಿಕಾರಿಗೆ ದೂರು ನೀಡಿ ಎಂದ ದೈಹಿಕ ಶಿಕ್ಷಕ!

    ಕುಂದಾಪುರ: ಶಿಕ್ಷಕರನ್ನು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ. ಈಗಾಗಲೇ ಕ್ರೂರತನ ತೋರಿಸಿರುವ ಶಿಕ್ಷಕರ ಕಥೆಯನ್ನು ಕೇಳಿಸಿಕೊಂಡಿದ್ದರೂ ಈ ಕಥೆ ಮಾತ್ರ ವಿಚಿತ್ರ. ಒಂದು ಕಡೆಯಲ್ಲಿ ಶಿಕ್ಷೆಯ ರೂಪವಾಗಿ ಮಕ್ಕಳಿಗೆ ಹೊಡೆಯಬಾರದು ಎಂದು ಹೇಳುವ ಜನರಿದ್ದರೆ ಇನ್ನೊಂದು ಕಡೆ ಆಗಾಗ ಬೆತ್ತದ ರುಚಿ ಮುಟ್ಟಿಸಿದರೆ ಸರಿ ದಾರಿಯಲ್ಲಿ ಇರುತ್ತಾರೆ ಎನ್ನುವವರೂ ಇದ್ದಾರೆ. ಈ ಪ್ರಕರಣದಲ್ಲಿ ಪೋಷಕರು ಶಿಕ್ಷೆ ನೀಡಿದ್ದಕ್ಕೆ ಯಾವುದೇ ರೀತಿಯಲ್ಲೂ ಪ್ರಶ್ನಿಸಿಲ್ಲ. ಬದಲಾಗಿ ಶಿಕ್ಷೆಯ ಹೆಸರಲ್ಲಿ ತಮ್ಮ ಮಗುವಿಗೆ ಬೂಟು ಕಾಲಿನಿಂದ ಒದ್ದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೈಹಿಕ ಶಿಕ್ಷಕರ ಮೇಲೆ ಆರೋಪ ಹೊರಿಸಿದ್ದಾರೆ.

    ಈ ಘಟನೆ ನಡೆದದ್ದು ಕುಂದಾಪುರದ ಮೂಡ್ಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ದಯಾನಂದ ಬಳ್ಕೂರು, ಮಗುವಿಗೆ ಬೂಟು ಕಾಲಿನಲ್ಲಿ ತುಳಿದು ದೌರ್ಜನ್ಯ ಮಾಡಿರುವ ಬಗ್ಗೆ ಪೋಷಕರು ಆರೋಪಿಸಿದ್ದಾರೆ. ಪೋಷಕರು ಪ್ರಶ್ನೆ ಮಾಡಲು ಹೋದಾಗ ವಿಚಿತ್ರ ರೀತಿಯಲ್ಲಿ ಉತ್ತರಿಸಿ ಕಾನೂನಿನ ಭಯವೂ ಇಲ್ಲದವರಂತೆ ವರ್ತಿಸಿದ್ದಾರೆ. ಈ ರೀತಿಯ ವರ್ತನೆಯನ್ನು ತೋರಿಸುವ ವಿಡಿಯೋ ಹಾಗೂ ಆಡಿಯೋ ವಿಜಯವಾಣಿಗೆ ಲಭ್ಯವಾಗಿದೆ. ಅದಲ್ಲದೇ ಮಕ್ಕಳಿಗೆ ಅವರ ವಿರುದ್ಧ ಸಾಕ್ಷಿ ಹೇಳಿದರೆ ಕೋರ್ಟ್ ಗೆ ಬರಬೇಕು ಎಂದೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಏನು ಈ ಘಟನೆ? ಸಂಪೂರ್ಣ ವಿವರ ಇಲ್ಲಿದೆ:

    ಭಾರತಿ ಹಾಗೂ ಸತೀಶ ಸೈರಿಗಾರ ದಂಪತಿಯ ಮಗ ಮೂಡ್ಲಕಟ್ಟೆ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಮನೆಗೆ ಬಂದ ಮಗ, ಪಿಟಿ ತರಗತಿಯ ವೇಳೆ ದೈಹಿಕ ಶಿಕ್ಷಕರು ಆತನಿಗೆ ಬೂಟು ಕಾಲಿನಿಂದ ಒದ್ದಿರುವ ಬಗ್ಗೆ ತನ್ನ ಪೋಷಕರ ಬಳಿ ದೂರು ಹೇಳಿದ್ದಾನೆ.

    ಈ ಹಿನ್ನೆಲೆಯಲ್ಲಿ ಶಾಲೆಗೆ ಬಂದಿರುವ ಪೋಷಕರು ಪ್ರಾಂಶುಪಾಲರ ಬಳಿ ದೂರನ್ನು ನೀಡಿದ್ದಾರೆ. ಆಗ ದೈಹಿಕ ಶಿಕ್ಷಕರನ್ನೂ ವಿಚಾರಣೆಗೆ ಕರೆಯಲಾಗಿದೆ. ಈ ಸಂದರ್ಭ ಪೋಷಕರು ದೈಹಿಕ ಶಿಕ್ಷಕರು ಮಾತನಾಡಿರುವ ಆಡಿಯೋಗಳು ಹಾಗೂ ವಿಡಿಯೋ ಒಂದನ್ನು ಸೆರೆ ಹಿಡಿದಿದ್ದಾರೆ. ಈ ಆಡಿಯೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ಇದು ವಿಜಯವಾಣಿಗೆ ಲಭ್ಯವಾಗಿದೆ.

    ವಿಡಿಯೊದಲ್ಲಿ ಪೋಷಕರು ಒಂದೆ ಕಡೆಯಲ್ಲಿ ಪೋಷಕರು ಮಗುವಿಗೆ ಶಿಕ್ಷೆ ನೀಡಿದರೆ ತೊಂದರೆ ಇಲ್ಲ, ಬೂಟುಕಾಲಿನಲ್ಲಿ ಒದ್ದು ಬೋ… ಎಂದೆಲ್ಲಾ ಅವಾಚ್ಯವಾಗಿ ಬೈಯಬಾರದಿತ್ತು ಎಂದರೆ ಇನ್ನೊಂದು ಕಡೆ ದೈಹಿಕ ಶಿಕ್ಷಕ ಆ ಮಗು ತಪ್ಪು ಮಾಡಿದ್ದಕ್ಕೆ ನಾನು ಹೊಡೆದಿದ್ದೇನೆ, ಮುಂದೆಯೂ ಹೊಡೆಯುತ್ತೇನೆ ಎಂದಿದ್ದಾರೆ. ಅದಲ್ಲದೇ ಬೋ.. ಎಂದೆಲ್ಲಾ ಯಾಕೆ ಬೈದದ್ದು ಎಂದು ಪ್ರಶ್ನಿಸಿದಾಗ, ‘ಒಂದು ಕೆಲಸ ಮಾಡಿ, ನೀವು ಬಿಇಒ ಆಫೀಸಿಗೆ ಹೋಗಿ. ನಾನು ಸಸ್ಪೆಂಡ್ ಆಗಲೂ ತಯಾರಿದ್ದೇನೆ’ ಎಂದಿದ್ದಾರೆ.

    ಮಗುವಿನ ಪೋಷಕರು ತಕ್ಷಣವೇ ಪೋಷಕರ ಸಭೆಯನ್ನು ಕರೆಯುವಂತೆ ಪ್ರಾಂಶುಪಾಲರಿಗೆ ಒತ್ತಾಯಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಇದೇ ಮಾರ್ಚ್ 9ರಂದು ಲಿಖಿತ ದೂರನ್ನು ನೀಡಿದ್ದಾರೆ.

    ದೈಹಿಕ ಶಿಕ್ಷಕ ರ ವಿರುದ್ಧ ನೀಡಿದ ದೂರಿನ ಫೋಟೊ
    ದೈಹಿಕ ಶಿಕ್ಷಕ ರ ವಿರುದ್ಧ ನೀಡಿದ ದೂರಿನ ಫೋಟೊ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts