More

    ನಗರದ ರಸ್ತೆಗೆ ನಟಿ ಲೀಲಾವತಿ ಹೆಸರು: ಬಿಬಿಎಂಪಿ ಮುಖ್ಯ ಆಯುಕ್ತರ ಅಭಯ

    ಬೆಂಗಳೂರು: ಇತ್ತೀಚಿಗೆ ನಿಧನರಾದ ಹಿರಿಯ ನಟಿ ಲೀಲಾವತಿ ಅವರ ಹೆಸರನ್ನು ನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡುವಂತೆ ಕೋರಿ ಬಿಬಿಎಂಪಿ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘವು ಪಾಲಿಕೆ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ.

    ಈ ಸಂಬಂಧ ಸೋಮವಾರ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ನೇತೃತ್ವದ ನಿಯೋಗವು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿಪತ್ರ ಸಲ್ಲಿಸಿತು. ನೆಲಮಂಗಲ ಮಾರ್ಗವಾಗಿ ಯಶವಂತಪುರದ ವರೆಗಿನ ರಸ್ತೆಗೆ ಕಲಾವಿದೆ ಲೀಲಾವತಿ ಅವರ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿತು.

    ಮನವಿ ಸ್ವೀಕರಿಸಿ ಮಾತನಾಡಿದ ತುಷಾರ್ ಗಿರಿನಾಥ್, ನಟಿ ಲೀಲಾವತಿ ಅವರ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವೆ ಸೇವೆ, ಕಲಾವಿದೆಯ ಸಮಾಜಸೇವೆ ಬಗ್ಗೆ ಅರಿವು ಇದೆ. ಈ ಪ್ರಸ್ತಾಪವನ್ನು ಪಾಲಿಕೆ ಮಟ್ಟದಲ್ಲಿ ಚರ್ಚಿಸಿ ರಸ್ತೆಯೊಂದಕ್ಕೆ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಶಿಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts