More

    ನಲಿಕಲಿ ಮಕ್ಕಳ ಕಲಿಕೆಗೆ ಪ್ರೇರಕ

    ಅಳವಂಡಿ: ಮಕ್ಕಳು ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಒಲವು ಹೆಚ್ಚಿಸಲು ನಲಿಕಲಿ ಪ್ರೇರಕವಾಗಿದೆ. ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಓದಿನತ್ತ ಅಸಕ್ತಿ ಹೆಚ್ಚುತ್ತಿದೆ ಎಂದು ಸಿಆರ್‌ಪಿ ದೇವರಡ್ಡಿ ತಿಳಿಸಿದರು.

    ಇದನ್ನೂ ಓದಿ: ಬಂದಿದೆ ಬೇಸಿಗೆ ರಜೆ, ನಲಿಕಲಿಯೋಣ ಬಾರಾ..

    ಗ್ರಾಮದ ಕೇಂದ್ರೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಂಡಿ ವಲಯದ ಕವಲೂರು, ಅಳವಂಡಿ, ಬೆಟಗೇರಿ, ಹಿರೇಸಿಂದೋಗಿ ಕ್ಲಷ್ಟರ್‌ನ ನಲಿಕಲಿ ಶಿಕ್ಷಕರಿಗಾಗಿ ನಡೆದ ಸಮಾಲೋಚನೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

    ಸಮಾಲೋಚನಾ ಸಭೆಯಲ್ಲಿ ತರಬೇತಿ ಪಡೆದ ಶಿಕ್ಷಕರು ವಿಷಯವನ್ನು ತರಗತಿ ಕೊಣೆಯಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಇದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.

    ಅಜೀಂ ಪ್ರೇಮಜಿ ಫೌಂಡೇಶನ್ ಸಂಚಾಲಕ ಕೆ.ದೇವರಾಜ ಮಾತನಾಡಿ, ವಯೋಮಾನಕ್ಕೆ ತಕ್ಕಂತೆ ಮತ್ತು ಮಕ್ಕಳ ಆಸಕ್ತಿಗನುಗುಣವಾಗಿ ವಿಷಯಗಳನ್ನು ತರಗತಿ ಕೊಠಡಿಯಲ್ಲಿ ಬೋಧನೆ ಮಾಡಬೇಕು.

    ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ವಿವಿಧ ಚಟುವಟಿಕೆ ಮೂಲಕ ಪೂರಕ ವಾತವರಣ ಸೃಷ್ಟಿಸಬೇಕು. ನಲಿಕಲಿ ವಿಧಾನ ವಿಷಯ ಹಾಗೂ ವಸ್ತುವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

    ಸಂಪನ್ಮೂಲ ವ್ಯಕ್ತಿಗಳಾದ ಕೆ.ಚನ್ನಪ್ಪ, ಎಸ್.ನಾಗರಾಜ, ಗುರುಸ್ವಾಮಿ, ಶಂಕ್ರಮ್ಮ, ಶಿಕ್ಷಣ ಸಂಯೋಜಕ ಗವಿಸಿದ್ದೇಶ ಶೆಟ್ಟರ, ಸಿಆರ್‌ಪಿಗಳಾದ ವೀರೇಶ ಕೌಟಿ, ವಿಜಯಕುಮಾರ ಟಿಕಾರೆ, ಬಿ.ಬಸವರಾಜ, ಮುಖ್ಯ ಶಿಕ್ಷಕ ಮಾರುತಿ ಕಾತರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts