More

    ಸಿದ್ದು ಬಣಕ್ಕೆ ಡಿಕೆಶಿ ಬಣ ಟಕ್ಕರ್: ರಾಜ್ಯ ಯುವ ಕಾಂಗ್ರೆಸ್‌ಗೆ ಜನವರಿಯಿಂದ ನಲಪಾಡ್ ಅಧ್ಯಕ್ಷ!

    ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಜನವರಿಯಿಂದ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರು 2022ರ ಜನವರಿ 31ರವರೆಗೆ ಮುಂದುವರಿಯಲಿದ್ದು, ಬಳಿಕ ನಲಪಾಡ್‌ಗೆ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ತಿಳಿಸಿದ್ದಾರೆ.

    ರಕ್ಷಾ ರಾಮಯ್ಯ ಪರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ ಕೆಲಸ ಮಾಡಿದ್ದರೆ, ನಲಪಾಡ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಟ್ಟಿಯಾಗಿ ನಿಂತಿದ್ದರು. ಶ್ರೀನಿವಾಸ್ ನಿರ್ಧಾರದಿಂದಾಗಿ ಸದ್ಯಕ್ಕೆ ಡಿ.ಕೆ. ಶಿವಕುಮಾರ್ ಬಣ ಮೇಲುಗೈ ಸಾಧಿಸಿದಂತಾಗಿದೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    2021 ಜನವರಿ ಎರಡನೇ ವಾರ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ರಕ್ಷಾ ರಾಮಯ್ಯ, ಮೊಹಮದ್ ನಲಪಾಡ್, ಎಚ್.ಎಸ್. ಮಂಜುನಾಥ್ ಸ್ಪರ್ಧಾ ಕಣದಲ್ಲಿದ್ದ ಪ್ರಮುಖರಾಗಿದ್ದರು. ಮತ ಎಣಿಕೆಗೆ ಮುನ್ನ ಚುನಾವಣೆ ನಿರ್ವಹಣಾ ಸಮಿತಿಯು ಆಯ್ಕೆಯ ತೀರ್ಮಾನ ತನ್ನ ವಿವೇಚನೆ ಎಂದಿತ್ತು. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಮೊಹಮದ್ ನಲಪಾಡ್‌ಗೆ ಹೆಚ್ಚಿನ ಮತ ಬಂದಿದ್ದು, ಆತನ ಆಯ್ಕೆ ಸೂಕ್ತವಲ್ಲ ಎಂದು ಆಯ್ಕೆ ಸಮಿತಿ ನಿರ್ಧರಿಸಿತಲ್ಲದೇ, ಎರಡನೇ ಸ್ಥಾನದಲ್ಲಿದ್ದ ರಕ್ಷಾ ರಾಮಯ್ಯರನ್ನು ಅಧ್ಯಕ್ಷರೆಂದು ಘೋಷಿಸಿತ್ತು.

    ಇದನ್ನೂ ಓದಿ: ನಾನು ಮುಂದಿನ ಸಿಎಂ ಆಗ್ಬೇಕು, ಸಾಧ್ಯವಾದ್ರೆ ಪ್ರಧಾನಿನೂ ಆಗ್ಬೇಕು: ಸಚಿವ ಉಮೇಶ್​ ಕತ್ತಿ

    ಆದರೆ, ನಲಪಾಡ್ ಮಾತ್ರ ತನಗೆ ಅನ್ಯಾಯವಾಗಿದೆ ಎಂದು ದೆಹಲಿ ಮಟ್ಟದಲ್ಲಿ ದನಿ ಎತ್ತಿದ್ದರು. ನನಗೇ ಹೆಚ್ಚು ಮತ ಬಂದಿದ್ದು, ಅಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಪಟ್ಟುಹಿಡಿದರು. ಕಳೆದ ಆರು ತಿಂಗಳಿಂದಲೂ ಪಕ್ಷದಲ್ಲಿ ಈ ಕುರಿತು ಆಂತರಿಕ ಘರ್ಷಣೆ ನಡೆದೇ ಇತ್ತು. ಅಂತಿಮವಾಗಿ ಹೈಕಮಾಂಡ್ ಗಮನಹರಿಸಿದೆ. ವಿಷಯ ಹೀಗೆ ಬಿಡುವುದು ಸರಿಯಲ್ಲ, ಒಂದು ಸಂಧಾನ ಸೂತ್ರ ಮಾಡಿಕೊಳ್ಳುವುದು ಒಳಿತೆಂದು ಹಿರಿಯ ನಾಯಕರೆಲ್ಲ ತೀರ್ಮಾನಕ್ಕೆ ಬಂದ ನಂತರ ರಕ್ಷಾ ರಾಮಯ್ಯ ಅವರ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ನಲಪಾಡ್‌ಗೆ ಅವಕಾಶ ನೀಡಲು ನಿರ್ಧರಿಸಲಾಯಿತು.

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts