More

    ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ಸಮಂತಾ ಮಾಜಿ ಪತಿ ನಾಗಚೈತನ್ಯ… ವಿಡಿಯೋ ವೈರಲ್!

    ಹೈದರಾಬಾದ್: ದಿನಾಂಕ 2 ಅಕ್ಟೋಬರ್ 2021 ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ಅಭಿಮಾನಿಗಳಿಗೆ ಕರಾಳ ದಿನವೆಂದೇ ಹೇಳಬೇಕು. ಹೌದು, ಟಾಲಿವುಡ್​ನ ಈ ತುಂಬಾ ಕ್ಯೂಟ್ ಜೋಡಿ ಅಂದು ತಮ್ಮ ವಿಚ್ಛೇದನವನ್ನು ಖಚಿತ ಪಡಿಸಿದರು. ನಂತರ, ವಿಚ್ಛೇದನ ಪಡೆದ ಈ ದಂಪತಿಗಳ ಬಗ್ಗೆ ಹೆಚ್ಚು ಮಾತಾಡದ ನೆಟ್ಟಿಗರು ಕೇವಲ ನಟಿ ಸಮಂತಾ ಅವರದ್ದೇ ತಪ್ಪು ಎಂಬಂತೆ ಸುದ್ದಿಗಳನ್ನು ಹಬ್ಬಿಸಿ ಅವರ ಬಗ್ಗೆ ಹೆಚ್ಚು ಚರ್ಚಿಸ ತೊಡಗಿದರು. ಇದರಿಂದ, ನಟಿ ಸಮಂತಾ ಕಳೆದ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ಸೌತ್​ನ ಖ್ಯಾತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ಆದರೆ, 2022ರಲ್ಲಿ ಈಗ ನಟ ನಾಗಚೈತನ್ಯ ಅವರು ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.
    ಹೌದು, ಸಾಮಾಜಿಕ ಜಾಲತಾಣದಲ್ಲಿ ಸದ್ಯ ನಾಗಚೈತನ್ಯ ಅವರದ್ದೇ ಸದ್ದು ಮತ್ತು ಸುದ್ದಿ. ಯಾಕೆ ಅಂತೀರಾ?. ಕೆಲವು ದಿನಗಳ ಹಿಂದೆ ನಾಗಚೈತನ್ಯ ಮತ್ತು ನಟಿ ಸಾಯಿ ಪಲ್ಲವಿ ನಡುವೆ ಲವ್ವಿಡವ್ವಿ ಎಂಬ ಸುದ್ದಿಗಳು ಹಬ್ಬಿದವು. ಅದಕ್ಕೆ ಕಾರಣ, ‘ಲವ್ ಸ್ಟೋರಿಎಂಬ ಸಿನಿಮಾ ಆಗಿತ್ತು. ಆದರೀಗ, ನಾಗಚೈತನ್ಯ ಮತ್ತು ನಟಿ ದಕ್ಷ ನಗರ್ಕರ್ ನಡುವೆ ಲವ್ವಿಡವ್ವಿ, ಡೇಟಿಂಗ್ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಜ.14 ರಂದು ಬಿಡುಗಡೆಯಾಗಲಿರುವ ಬಂಗಾರ್​ರಾಜು‘ ಚಿತ್ರ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಾಗಚೈತನ್ಯ ಅವರ ಜೊತೆ ನಟಿ ದಕ್ಷ ನಗರ್ಕರ್ ತೆರೆ ಮೇಲೆ ಮಿಂಚಲಿದ್ದಾರೆ. ಜೊತೆಗೆ, ಈ ಸಿನಿಮಾದ ಮೂಲಕ ನಟ ನಾಗಚೈತನ್ಯ ತಮ್ಮ ತಂದೆ ನಾಗಾರ್ಜುನ ಜತೆ ಮತ್ತೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಇದೇ ಸಿನಿಮಾದ ನಂತರ ಇವರಿಬ್ಬರೂ ಡೇಟಿಂಗ್ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ

    ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ಸಮಂತಾ ಮಾಜಿ ಪತಿ ನಾಗಚೈತನ್ಯ... ವಿಡಿಯೋ ವೈರಲ್!

    ಇನ್ನು, ಈ ಗಾಳಿ ಸುದ್ದಿಗಳಿಗೆ ಪುರಾವೆ ಎಂಬಂತೆ ನಾಗಚೈತನ್ಯ, ದಕ್ಷ ಅವರ ಒಂದು ವಿಡಿಯೋ ನೆಟ್ಟಿಗರಿಗೆ ಸಿಕ್ಕಿದೆ. ಅಂದಹಾಗೆ, ಈ ವಿಡಿಯೋ ಬಂಗಾರ್​ರಾಜುಸಿನಿಮಾ ಪ್ರಚಾರದ ವೇದಿಕೆ ಮೇಲೆ ಸೆರೆಹಿಡಿದಿರುವುದು. ನಾಗಚೈತನ್ಯ ಮತ್ತು ದಕ್ಷ ವೇದಿಕೆಯ ಮೇಲೆ ಪ್ರಚಾರಕ್ಕೆಂದು ಹತ್ತಿದರೂ, ಅವರಿಬ್ಬರ ಹಾವ-ಭಾವವೇ ಸಿನಿಮಾಗಿಂತ ಹೆಚ್ಚು ನೆಟ್ಟಿಗರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲೆ ಇದ್ದಷ್ಟು ಸಮಯ ಪೂರ್ತಿ ನಾಗಚೈತನ್ಯ, ದಕ್ಷ ಅವರು ಒಬ್ಬರನ್ನು ಮತ್ತೊಬ್ಬರು ಗಮನಿಸುತ್ತಲೇ, ನೋಡುತ್ತಲೇ ಇದ್ದರು. ಜೊತೆಗೆ, ಒಂದು ಸಮಯದಲ್ಲಿ ನಟಿ ದಕ್ಷ, ನಾಗಚೈತನ್ಯ ಅವರನ್ನು ಕಂಡು ಸ್ಮೈಲ್ ಮಾಡುತ್ತಾರೆ. ನಟಿಯ ಆ ಸುಂದರ ನಗುವನ್ನು ಕಂಡ ನಾಗಚೈತನ್ಯ ನಾಚಿ ನೀರಾಗುತ್ತಾರೆ. ಅಷ್ಟೇ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ನಿದ್ದೆ ಗೆಡಿಸಿದೆ ಎನ್ನಬಹುದು.
    ಕೆಲವರು, ನಟ ನಾಗಚೈತನ್ಯ ಎಲ್ಲಾ ಗಂಡಸರಂತೆಯೇ ಎಂದು ಕಾಮೆಂಟ್ ಮಾಡಿದರೆ, ಉಳಿದವರು ನಟಿ ಸಮಂತಾರನ್ನು ನೆನಪಿಸಿಕೊಂಡಿದ್ದಾರೆ. ವಿಚ್ಛೇದನವಾದ ಕೇವಲ 3 ತಿಂಗಳಿಗೆ ಹೊಸ ಲವ್ ಸ್ಟೋರಿ ಆರಂಭಿಸಿದ ನಾಗಚೈತನ್ಯ ಎಂದು ಹಲವರು ನಟನಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನುಳಿದ ನಟನ ಅಭಿಮಾನಿಗಳಂತು ‘ಸುಂದರವಾದ ಟಾಲಿವುಡ್​ನ ಹೊಸ ಜೋಡಿ’ ಎಂದು ಹಾಡಿ ಹೊಗಳುತ್ತಿದ್ದಾರೆ. ಅದೇನೇ ಇರಲಿ, ಸದ್ಯ ಈ ವಿಡಿಯೋ ಟಾಲಿವುಡ್​ನ ಹಾಟ್ ಟಾಪಿಕ್ ಎಂದೇ ಹೇಳಬೇಕು. 26 ವರ್ಷದ ನಟಿ ದಕ್ಷ ನಗರ್ಕರ್ ಮೂರಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ಕಾಣಸಿಕೊಂಡಿದ್ದು, ಇವರು ನಾಗಾರ್ಜುನ ಪುತ್ರ ನಟ ನಾಗಚೈತನ್ಯ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಗಳು ನಿಜವೇ ಎಂದು ತಿಳಿಯಲು ಈಗ ಅಭಿಮಾನಿಗಳು ಕಾದು ಕುಳಿತಿದ್ದಾರೆ.  

    ರಶ್ಮಿಕಾಗೆ ವಿಜಯ್ ಮೇಲೆ ಏಷ್ಟು ಪ್ರೀತಿ ಗೊತ್ತಾ? ಗೋವಾ ವಿಡಿಯೋಸ್ ವೈರಲ್…

    ಹಾಲಿವುಡ್, ಬಾಲಿವುಡ್​ ಅನ್ನು ಹಿಂದಿಕ್ಕಿದ ‘ಪುಷ್ಪ’ ಸಿನಿಮಾ, 25ನೇ ದಿನಕ್ಕೆ ಒಟ್ಟು ಏಷ್ಟು ಕೋಟಿ ಗಳಿಸಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts