More

    ನಾಗಸುಬ್ರಹ್ಮಣ್ಯಸ್ವಾಮಿ ಆರಾಧಿಸಿದರೆ ಇಷ್ಟಾರ್ಥ ಈಡೇರಿಕೆ

    ಕಂಪ್ಲಿ: ನಾಗದೋಷ ನಿವಾರಣೆಗಾಗಿ ಇಲ್ಲಿನ ಕಲ್ಯಾಣಚೌಕಿಮಠ ಆವರಣದಲ್ಲಿ ಭಾನುವಾರ ನಾಗಸುಬ್ರಹ್ಮಣ್ಯಸ್ವಾಮಿ ಶಿಲಾಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.

    ಇದನ್ನೂ ಓದಿ: ಮಂಡ್ಯ ನಗರದಲ್ಲಿ ಬಾಲಸುಬ್ರಹ್ಮಣ್ಯಸ್ವಾಮಿ ಪೂಜೆ: ಸಾವಿರಾರೂ ಜನರಿಗೆ ಅನ್ನದಾಸೋಹ

    ಹರಗಿನದೋಣಿಯ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ನಾಗಸುಬ್ರಹ್ಮಣ್ಯಸ್ವಾಮಿಯನ್ನು ಶ್ರದ್ಧೆ-ಭಕ್ತಿ, ನಂಬಿಕೆಗಳಿಂದ ಆರಾಧಿಸಿದಲ್ಲಿ ಹರಕೆ ಹೊತ್ತವರ ಇಷ್ಟಾರ್ಥಗಳು ಈಡೇರುತ್ತವೆ. ಆಧುನಿಕ ಭರಾಟೆಯಲ್ಲಿ ಯಾರೂ ಅಧ್ಯಾತ್ಮ, ಧಾರ್ಮಿಕ ಆಚರಣೆಗಳಿಂದ ದೂರವಾಗಬಾರದು ಎಂದರು.

    ಕಲ್ಯಾಣಿಚೌಕಿಮಠದ ಬಸವರಾಜ ಶಾಸ್ತ್ರಿ ಮಾತನಾಡಿ, ನಾಗಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ವಿವಾಹ ಯೋಗ, ಸಂತಾನ ಪ್ರಾಪ್ತಿ, ಮನಃಶಾಂತಿ ದೊರಕುತ್ತದೆ. ಸರ್ಪಹತ್ಯೆಯಿಂದಾದ ದೋಷ, ಕಾಳಸರ್ಪ, ನಾಗದೋಷ ಸಂಬಂಧಿತ ನಿವಾರಣಾರ್ಥ ಪೂಜೆಗಳೊಂದಿಗೆ ಸರ್ಪ ಸಂಸ್ಕಾರ, ಆಶ್ಲೇಷಬಲಿ, ನಾನಾ ಪೂಜಾವಿಧಿಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಉದ್ದೇಶಿಸಿದೆ ಎಂದರು.

    ಶ್ರೀಶೈಲ ವೀರಶೈವ ಗುರುಕುಲದ ವಿದ್ಯಾರ್ಥಿವೃಂದದ ಪೌರೋಹಿತ್ಯದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಹೊಸಪೇಟೆಯ ಸಿದ್ಧಲಿಂಗಯ್ಯ ತಾತ, ಘನಮಠದಯ್ಯ ಹಿರೇಮಠ, ಗಂಗಾವತಿಯ ಗುಂಜಳ್ಳಿ ವಿನಯಕುಮಾರ್,

    ಇಂಗಳದ ಬಸವರಾಜ, ಎಸ್.ಡಿ.ಬಸವರಾಜ, ಮುತ್ತಯ್ಯ ಬೆನಕನಾಳಮಠ, ಎಲಿಗಾರ ವೆಂಕಟರೆಡ್ಡಿ, ಡಿ.ಮಂಜುನಾಥ, ಗೌಳೇರು ಶೇಖರಪ್ಪ, ಗಂಗಾವತಿಯ ಸಿಂಗನಾಳ ಕುಮಾರೆಪ್ಪ, ಶಾನವಾಸಪುರದ ಕುಮಾರಗೌಡ್ರು, ಯಲ್ಲಾಲಿಂಗ ಚವ್ಹಾಣ್, ಹೊಸಪೇಟೆ ವೀರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts