More

    ಇದು ಆಧುನಿಕ ರಾಮಾಚಾರಿಯ ಕಥೆ!

    ಕನ್ನಡ ಚಿತ್ರರಂಗದ ಎವರ್​ಗ್ರೀನ್​ ಸಿನಿಮಾಗಳ ಪೈಕಿ, ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ನಾಗರಹಾವು’ ಚಿತ್ರ ಸಹ ಒಂದು. ಈ ಚಿತ್ರದಲ್ಲಿ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದುಬಿಟ್ಟಿವೆ.

    ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ಚಿತ್ರರಂಗಕ್ಕೆ ಬಂದು 10 ವರ್ಷ ಆಯ್ತು …

    ಈಗ್ಯಾಕೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಪಾತ್ರಗಳ ಪ್ರಸ್ತಾಪ ಎಂದರೆ ಅದಕ್ಕೂ ಕಾರಣವಿದೆ. ‘ನಡುಗಲ್ಲು’ ಎಂಬ ಹೆಸರಿನ ಮಕ್ಕಳ ಚಿತ್ರವಾಗಿದ್ದು, ಅದರಲ್ಲೂ ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯನ್ನು ಹೋಲುವು ಗುರು-ಶಿಷ್ಯರ ಪಾತ್ರಗಳಿವೆ. ಆ ಗುರು-ಶಿಷ್ಯ ಹೆಜ್ಜೆಹೆಜ್ಜೆಗೂ ಹೇಗೆ ಸವಾಲುಗಳನ್ನು ಸ್ವೀಕರಿಸುತ್ತಾರೆ ಎಂಬ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ.

    ನಡುಗಲ್ಲು ಎಂಬ ಊರಿನ ಸರ್ಕಾರಿ ಶಾಲೆಯಲ್ಲಿ ಗುರು-ಶಿಷ್ಯನ ನಡುವೆ ನಡೆಯುವ ಘಟನೆಗಳು ಮತ್ತು ಸವಾಲುಗಳ ಸುತ್ತ ಈ ಚಿತ್ರ ಸುತ್ತುತ್ತದೆ, ಗುರು-ಶಿಷ್ಯನ ಈ ಸವಾಲ್​ನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಚಿತ್ರ ಕಥಾ ಸಾರಾಂಶ.

    ಈ ಹಿಂದೆ ಯೋಗಿ ಅಭಿನಯದ ‘ಬಂಗಾರಿ’, ‘ಬೆಟ್ಟದ ದಾರಿ’, ‘ಶಿವನಪಾದ’ ಮತ್ತು ತಮಿಳಿನ ‘ಕಾದಲ್ ಪೈತ್ಯಂ’ ‘ಶಿವನಪಾದ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಾ ಚಂದ್ರು ಈ ಚಿತ್ರವನ್ನು ನಿರ್ದೇಶಸಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಇನ್ನು ಪೂರ್ವಿಕಾಮೃತ ಕ್ರಿಯೇಷನ್ ಲಾಂಛನದಲ್ಲಿ ಹರಿಹರನ್ ಬಿ ಪಿ ಈ ಚಿತ್ರ ನಿರ್ಮಿಸಿದ್ದಾರೆ.

    ಇದನ್ನೂ ಓದಿ: ಓಟಿಟಿಯಲ್ಲಿ ಬಟರ್​ಫ್ಲೈ ಹಾರುತ್ತಾ?

    ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಒಟ್ಟು 24 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಚಿತ್ರೀಕರಣವಾಗಿದ್ದು, ಇದೀಗ ಪೋಸ್ಟ್​-ಪ್ರೊಡಕ್ಷನ್​ ಹಂತದಲ್ಲಿದೆ. ಮೇಷ್ಟ್ರು ಪಾತ್ರದಲ್ಲಿ ಬಲ ರಾಜವಾಡಿ, ಶಿಷ್ಯನಾಗಿ ನಿಶಾಂತ್ ಟಿ ರಾಠೋಠ್ ಕಾಣಿಸಿಕೊಂಡಿದ್ದಾರೆ. ಇನ್ನು ಮಂಜುಳಾ ರೆಡ್ಡಿ, ಹರಿಹರನ್, ಅಮೃತ, ಕಿಲ್ಲರ್ ವೆಂಕಟೇಶ್ ಹಾಗು ನೂರಕ್ಕೂ ಹೆಚ್ಚು ಮಕ್ಕಳು ಅಭಿನಯಿಸಿದ್ದಾರೆ. ಜಾನ್ ಛಾಯಾಗ್ರಹಣ ಮತ್ತು ಎ.ಟಿ. ರವೀಶ್​ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

    Video: ಕರೊನಾ ಬಗ್ಗೆ ರಮೇಶ್​ ಅರವಿಂದ್​ ಮೊದಲ ವಿಡಿಯೋ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts