More

    Video: ಕರೊನಾ ಬಗ್ಗೆ ರಮೇಶ್​ ಅರವಿಂದ್​ ಮೊದಲ ವಿಡಿಯೋ ಬಿಡುಗಡೆ

    ಬಿ.ಬಿ.ಎಂ.ಪಿಯ ಕರೊನಾ ಜಾಗೃತಿ ಅಭಿಯಾನದ ರಾಯಭಾರಿಯಾಗಿ ನಟ-ನಿರ್ದೇಶಕ ರಮೇಶ್​ ಅರವಿಂದ್​ ಅವರು ಆಯ್ಕೆಯಾಗಿರುವುದು ಗೊತ್ತೇ ಇದೆ. ಈಗ ರಮೇಶ್​, ಕರೊನಾ ಕುರಿತಾಗಿ ರಮೇಶ್ ಜಾಗೃತಿ ಮೂಡಿಸುವ ಮೊದಲ ವಿಡಿಯೋ ಬುಧವಾರ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಓಟಿಟಿಯಲ್ಲಿ ಬಟರ್​ಫ್ಲೈ ಹಾರುತ್ತಾ?

    ಬುಧವಾರ ರಾತ್ರಿ 7 ಗಂಟೆಗೆ ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಎಂಟು ನಿಮಿಷ ಅವಧಿಯ ಈ ವಿಡಿಯೋದಲ್ಲಿ, ಕೋವಿಡ್​-19 ಎಂದರೆ ಏನು ಎಂಬಲ್ಲಿಂದ ಪ್ರಾರಂಭಿಸಿ, ಎಪಿಡೆಮಿಕ್​, ಪ್ಯಾಂಡಮಿಕ್​, ಔಟ್​ಬರ್ಸ್ಟ್, ಲಾಕ್​ಡೌನ್​, ಸೋಷಿಯಲ್​ ಡಿಸ್ಟನ್ಸ್​ ಮುಂತಾದ ಹಲವು ಪದಗಳನ್ನು ಬಹಳ ಸರಳವಾಗಿ ಕನ್ನಡದಲ್ಲಿ ಅರ್ಥ ಸಮೇತ ವಿವರಸಿದ್ದಾರೆ ರಮೇಶ್​.

    ‘ಕರೊನಾ ಬರುವ ಮುನ್ನ, ಮನುಷ್ಯನಿಗೆ ತಾನೆಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಮನಸ್ಥಿತಿ ಇತ್ತು. ಆದರೆ, ನೀನಂದುಕೊಂಡಿದ್ದು ತಪ್ಪು ಎನ್ನುವುದನ್ನು ಕರೊನಾ ಕಪಾಳಕ್ಕೆ ಹೊಡೆದು ಅರ್ಥ ಮಾಡಿಸಿತು. ನೀನು ಅಂದುಕೊಂಡಿರುವುದು ಜೀವನವನಲ್ಲ, ಏನು ನಡೆಯುತ್ತದೆಯೋ ಅದೇ ಜೀವನ ಎಂಬ ದೊಡ್ಡ ಪಾಠವನ್ನು ಹೇಳಿಕೊಟ್ಟಿದೆ. ನಾವು ಸದ್ಯಕ್ಕೆ ಲಾಕ್​ಡೌನ್​ನಿಂದ ಮುಕ್ತರಾಗಿದ್ದೇವೆಯೇ ಹೊರತು, ಕರೊನಾದಿಂದ ಮುಕ್ತವಾಗಿಲ್ಲ. ಹಾಗಾಗಿ ಕಡ್ಡಾಯವಾಗಿ ಮಾಸ್ಕ್​ ಧರಿಸುವುದರ ಜತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಈ ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಅಣ್ಣನ ಅಶೀರ್ವಾದ, ಮಾವನ ಸಹಕಾರದಿಂದ ಗುಣಮುಖ … ಧ್ರುವ ವರದಿ ನೆಗೆಟಿವ್​

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ರಮೇಶ್​ ಅರವಿಂದ್​, ‘ಇತ್ತೀಚೆಗೆ ಬಿಬಿಎಂಪಿಯ ಕಮಿಷನರ್​ ಅವರಿಂದ ಫೋನ್​ ಬಂತು. ಕರೊನಾ ಜಾಗೃತಿ ಮೂಡಿಸುವ ಸಲುವಾಗಿ, ಜನರಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸಬೇಕಾಗಿರುವುದರಿಂದ, ನೀವು ರಾಯಭಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಅದಕ್ಕೆ ಒಪ್ಪಿಕೊಂಡು, ಎರಡು ದಿನಗಳಲ್ಲಿ ಮೊದಲ ವಿಡಿಯೋ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ’ ಎಂದು ರಮೇಶ್​ ಹೇಳಿದ್ದಾರೆ.

     

     

    ರಕ್ಷಿತ್​ ಶೆಟ್ಟಿ ಚಿತ್ರರಂಗಕ್ಕೆ ಬಂದು 10 ವರ್ಷ ಆಯ್ತು …

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts