More

    ಉದ್ಘಾಟನೆಗೂ ಮುನ್ನ ಭೂತ ಬಂಗಲೆಯಾಗುತ್ತಿದೆ ನಾಡಕಚೇರಿ

    • ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    • ದಶಕಗಳ ಕಾಲ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸಿದ ನಾಡಕಚೇರಿಯೊಂದು ತನ್ನ ಸ್ವಂತ ಕಟ್ಟಡವಾಗಿ ಒಂದುವರೆ ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.
    • ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ನೂತನ ನಾಡ ಕಚೇರಿ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದರೂ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದ್ದು, ಭೂತ ಬಂಗಲೆಯಾಗಿ ಮಾರ್ಪಾಡಾಗಿದೆ.
    • ಕಚೇರಿ ಸುತ್ತಮುತ್ತಲೂ ಗಿಡ-ಗಂಟಿ ಬೆಳೆದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎನ್ನುವುದಕ್ಕೆ ಕಟ್ಟಡದಲ್ಲಿ ಬಿದ್ದಿರುವ ರಾಶಿ ಮದ್ಯದ ಬಾಟಲಿಗಳೇ ಸಾಕ್ಷಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊನೇ ಘಳಿಗೆಯಲ್ಲಿ ಉದ್ಘಾಟನೆ ಕೈ ಬಿಟ್ಟಿದ್ದರಿಂದ ಕಟ್ಟಡವು ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.

    ಎರಡು ಬಾರಿ ಉದ್ಘಾಟನೆ! ಶಿವಗಂಗೆ ರಸ್ತೆಯ ಸರ್ಕಾರಿ ಜಾಗದಲ್ಲಿ 18ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಅಂದಿನ ಶಾಸಕ ಡಾ.ಶ್ರೀ ನಿವಾಸಮೂರ್ತಿ ಉದ್ಘಾಟನೆ ಮಾಡಿದ್ದರು. ನಂತರ ರಾಜಕೀಯ ಬೆಳವಣಿಗೆಯಿಂದ ಸರ್ಕಾರ ಬದಲಾವಣೆ ಆಯಿತು, 2023ರ ಮಾರ್ಚ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರೂ ಉದ್ಘಾಟನೆ ಮಾಡಿದರೂ ಕಟ್ಟಡ ಮಾಡಿದ್ದರು. ಈಗ ಮತ್ತೊಮ್ಮೆ ಉದ್ಘಾಟನೆ ಭಾಗ್ಯ ತೆಗೆದುಕೊಳ್ಳುತ್ತದೆಯೋ ಅಥವಾ ನೇರ ಕಚೇರಿ ಆರಂಭವಾಗುತ್ತಿಯೋ ಎಂಬ ಕುತೂಹಲ ಮತ್ತು ಆಕ್ರೋಶ ಜನರಲ್ಲಿದೆ.

    ಸೌಲಭ್ಯಗಳೇ ಇಲ್ಲ ಸುಮಾರು 18 ಲಕ್ಷ ರೂ. ವೆಚ್ಚ ಮಾಡಿ ಕಟ್ಟಿದ ನೂತನ ಕಟ್ಟಡದಲ್ಲಿ ಸರಿಯಾದ ಶೌಚಗೃಹ, ಬಾಗಿಲು ಮಾಡಿಲ್ಲ. ಇದು ಕಾಟಾಚಾರದ ಕಾಮಗಾರಿ ಮಾಡಿ ಮುಗಿಸಿದ್ದು, ಒಂದು ವೇಳೆ ಕಚೇರಿ ಪ್ರಾರಂಭಿಸಿದರೂ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಭೂತ ಬಂಗಲೆಯಾದ ಕಟ್ಟಡವನ್ನು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು. ಇನ್ನೂ ಬಾಡಿಗೆ ಕಟ್ಟದಲ್ಲೇ ಕಾರ್ಯನಿರ್ವಹಿಸುವುದನ್ನು ಇಲ್ಲಿಗೆ ನಿಲ್ಲಿಸಬೇಕು ಎನ್ನಾತ್ತಾರೆ ಗ್ರಾಮದ ನಾಗರಿಕರು.

    ನಮ್ಮ ತೆರಿಗೆಯಿಂದ ಕಟ್ಟಿದ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ. ಕಟ್ಟಡಕ್ಕೆ ಸರಿಯಾದ ವಿದ್ಯುತ್ ಸಂಪರ್ಕ ನೀಡಿಲ್ಲ. ಬಾಗಿಲನ್ನೂ ಹಾಕುತ್ತಿಲ್ಲ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಮದ್ಯಪ್ರಿಯರಿಗೆ ಹಾಗೂ ಜೂಜುಕೋರಿಗೆ ಸರಿಯಾದ ಸ್ಥಳವನ್ನೇ ಸರ್ಕಾರ ಮಾಡಿಕೊಟ್ಟಂತಾಗಿದೆ.
    ಎಚ್.ಕೆ.ರವೀಶ, ಗ್ರಾಮಸ್ಥ

    ನಿರ್ಮಿತಿ ಕೇಂದ್ರದ ಕಾಮಾಗಾರಿ ಇನ್ನು ಸ್ವಲ್ಪ ದಿನದಲ್ಲಿ ಮುಗಿಯಲಿದ್ದು, ಆದಷ್ಟೂ ಬೇಗನೆ ಕಚೇರಿ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು.
    ಬಿ.ಸಿ.ಶಶಿಧರ್, ಉಪ ತಹಸೀಲ್ದಾರ್ ಸೋಂಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts