More

    ಅಲೆಮಾರಿ ಸಮುದಾಯದ ಜನರ ಪ್ರತಿಭಟನೆ

    ಕಿಕ್ಕೇರಿ: ಕೃಷ್ಣಾಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯದ ಜನರು ಕಿಕ್ಕೇರಿಯ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.


    ಬದುಕು ಕಟ್ಟಿಕೊಳ್ಳಲು ಆಗದೆ ಊರೂರು ಅಲೆದು ಮಾರಮ್ಮನ ಮೆರವಣಿಗೆ ಮಾಡಿಕೊಂಡು ಸಿಕ್ಕ ಪುಡಿಗಾಸಿನಲ್ಲಿ ಬದುಕುತ್ತಿದ್ದೇವೆ. ಬೆಳಗ್ಗೆ ಮನೆಬಿಟ್ಟರೆ ಊಟವಿಲ್ಲದೆ ಊರೂರು ತಿರುಗಿ ಕೂಲಿ ಇಲ್ಲದೆ ಸಿಕ್ಕ ದವಸ ಧಾನ್ಯ ಸಂಗ್ರಹಿಸಿ ರಾತ್ರಿ ಮನೆಗೆ ಸೇರುತ್ತೇವೆ. ಕುಟುಂಬದವರು ಮೃತಪಟ್ಟರೆ ಊಳಲು, ಸುಡಲು ಜಾಗವಿಲ್ಲದೆ ಪರದಾಡಬೇಕಿದೆ. ಶವಸಂಸ್ಕಾರ ಮಾಡಲು ಅವರಿವರನ್ನು ಕಾಡಿ ಬೇಡುವಂತಾಗಿದೆ. 1998ರಲ್ಲೇ ಲಿಂಗಾಪುರ ಗ್ರಾಮದ ಸರ್ವೇ ನಂ.70ರಲ್ಲಿ 2ಎಕರೆ ಸ್ಮಶಾನಕ್ಕೆ ಮಂಜೂರಾಗಿದೆ. ಆರ್‌ಟಿಸಿ ಇದೆ. ಗೋಮಾಳವನ್ನು ಬಲಾಢ್ಯರು ಅಧಿಕಾರಿಗಳೊಂದಿಗೆ ಸೇರಿಕೊಂಡು ಮಾಡಿಸಿಕೊಂಡಿರುವುದಲ್ಲದೆ, ಸ್ಮಶಾನ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದು, ಸ್ಮಶಾನ ಜಾಗಕ್ಕೆ ಹೋಗಲು ಒತ್ತುವರಿದಾರರು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
    ಸ್ಮಶಾನದ ಜಾಗವನ್ನು ಸರ್ವೇ ಮಾಡಿಸಿ ಅಂತ್ಯಕ್ರಿಯೆ ಮಾಡಲು ಜಾಗ ಬಿಡಿಸಿಕೊಡಿ. ಇಲ್ಲವಾದರೆ ಕುಟುಂಬದ ಸದಸ್ಯರು ಸತ್ತರೆ ಕಚೇರಿ ಬಳಿಗೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದರು.


    ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ ಅವರು ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ಸಮ್ಮುಖದಲ್ಲಿ ಮಾತನಾಡಿ, 2 ಎಕರೆ ಸ್ಮಶಾನ ಜಾಗವನ್ನು ಮೀಸಲಿಡಲಾಗಿದೆ. ತ್ವರಿತವಾಗಿ ಸರ್ವೇ ಮಾಡಿಸಲಾಗುವುದು. ಅತಿಕ್ರಮ ಪ್ರವೇಶಿಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


    ಸಿಂಧೋಳ್ ಜನಾಂಗದ ಮುಖಂಡ ಮಾರಪ್ಪ, ಸಿಳ್ಳೇಕ್ಯಾತ ಜನಾಂಗ ಅಧ್ಯಕ್ಷ ಶಂಕರ್, ರೈತ ಸಂಘದ ನಾರಾಯಣಸ್ವಾಮಿ, ರೈಸ್‌ಮಿಲ್ ರಾಜಣ್ಣ, ಗ್ರಾಪಂ ಸದಸ್ಯ ಗಿರೀಶ್, ಮುಖಂಡರಾದ ಹರೀಶ್, ಶಿವಪ್ಪ, ಕುಮಾರ್, ನರಸಿಂಹ, ಹನುಮಂತು, ರಾಜು, ರಂಗಮ್ಮ, ನಾಗಮ್ಮ, ಗೌರಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts