More

    ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆಗೆ ವಂಚಿಸಲು ಯತ್ನ: ಕ್ರೆಡಿಟ್​ ಕಾರ್ಡ್​ ಮಾಹಿತಿಗಾಗಿ ಮಹಿಳೆಯಿಂದ ಕರೆ

    ಬೆಂಗಳೂರು: ಲೋಕಾಯುಕ್ತ ಸಂಸ್ಥೆ ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆ ಅವರಿಗೆ ದೂರವಾಣಿ ಕರೆ ಮಾಡಿ ಕ್ರೆಡಿಟ್​ ಕಾರ್ಡ್​ ಮಾಹಿತಿ ಪಡೆದು ವಂಚನೆ ಮಾಡಲು ಸೈಬರ್​ ಕಳ್ಳರು ಯತ್ನಿಸಿದ್ದಾರೆ.

    ಈ ಕುರಿತು ನ್ಯಾ.ಸಂತೋಷ್​ ಹೆಗ್ಡೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಿಸಿ ಕೇಂದ್ರ ವಿಭಾಗ ಸಿಇಎನ್​ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಜೂನ್​ 14ರ ಸಂಜೆ 6 ಗಂಟೆಯಲ್ಲಿ ಸಂತೋಷ್​ ಹೆಗ್ಡೆ ಅವರ ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ಮಹಿಳೆ, ನಿಮ್ಮ ಕ್ರೆಡಿಟ್​ ಕಾರ್ಡ್​ಗೆ ರಿವಾರ್ಡ್​ ಪಾಯಿಂಟ್​ ಬಂದಿವೆ. ಅದರ ಅವಧಿ ಮುಕ್ತಾಯವಾಗುತ್ತಿವೆ ಎಂದು ಹೇಳಿದ್ದಾಳೆ. ಅನುಮಾನ ಬಂದು ಸಂತೋಷ್​ ಹೆಗ್ಡೆ ಅವರು ಕರೆ ಕಟ್​ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಕ್ಕೆ ಮೊಬೈಲ್​ಗೆ 2 ಒಟಿಪಿಗಳು ಬಂದಿವೆ. ಆಗ ಇದು ವಂಚಕರ ಕರೆ ಎಂಬುದು ಖಚಿತವಾಗಿದೆ. ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿಲ್ಲ.

    ಕರೆ ಮಾಡಿ ವಂಚನೆ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಸಂತೋಷ್​ ಹೆಗ್ಡೆ ಮನವಿ ಮಾಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮೊಬೈಲ್​ ನಂಬರ್​ ಆಧರಿಸಿ ವಂಚಕರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೇಶದ್ರೋಹ ಪ್ರಕರಣ: ಲಕ್ಷದ್ವೀಪ ನಟಿ ಆಯಿಷಾ ಸುಲ್ತಾನಗೆ ಬಿಗ್​ ರಿಲೀಫ್​!

    ಅಪ್ಪಿತಪ್ಪಿ ಗೂಗಲ್​ನಲ್ಲಿ ಈ ಪದಗಳನ್ನು ಸರ್ಚ್​ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!

    ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್​ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts