More

    ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ: ಮುದ್ದಾದ ಮಕ್ಕಳನ್ನು ತಬ್ಬಲಿ ಮಾಡಿದ ಕ್ರೂರಿ ಕರೊನಾ

    ಮೈಸೂರು: ಮಹಾಮಾರಿ ಕರೊನಾ ವೈರಸ್​ ಮೃತ್ಯುಕೂಪಕ್ಕೆ ತಂದೆ-ತಾಯಿ ಬಲಿಯಾಗಿದ್ದು, ಮುದ್ದಾದ ಮಕ್ಕಳಿಬ್ಬರು ಅನಾಥವಾಗಿರುವ ಕರುಣಾಜನಕ ಘಟನೆ ಮೈಸೂರಿನಲ್ಲಿ ನಡೆದಿದೆ.

    ಕೇವಲ ಹತ್ತು ದಿನದ ಅಂತರದಲ್ಲಿ ಗಂಡ-ಹೆಂಡತಿ ಕರೊನಾಗೆ ಬಲಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಗುತ್ತಿಗೆ ನೌಕರ ಪ್ರಸನ್ನ ಹಾಗೂ ಹೆಂಡತಿ ಸುಷ್ಮಾರ ಸಾವು ಮಕ್ಕಳಿಬ್ಬರನ್ನು ತಬ್ಬಲಿಗಳನ್ನಾಗಿ ಮಾಡಿದೆ.

    ಪ್ರಸನ್ನರಿಗೆ ಕರೊನಾ ಸೋಂಕು ತಗುಲಿ ಮೈಸೂರಿನ ಗಂಗ್ರೋತ್ರಿ ಲೇಔಟ್‌ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಗಂಡನನ್ನು ನೋಡಿಕೊಳ್ಳುವಾಗ ಸುಷ್ಮಾರಿಗೂ ಸೋಂಕು ತಗುಲಿ ಮೇ 18ರಂದು ಮೊದಲು ಮೃತಪಟ್ಟಿದ್ದರು. ಇದಾದ ಹತ್ತು ದಿನಗಳ ಬಳಿಕ ಅಂದರೆ ಮೇ 28ರಂದು ತೀರ್ವ ಉಸಿರಾಟದ ತೊಂದರೆ ಉಂಟಾಗಿ ಆಸ್ಪತ್ರೆ ಸೇರಿದ ಪ್ರಸನ್ನ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ದಂಪತಿ ಸಾವಿನಿಂದ ಅವರ ಮಕ್ಕಳಾದ 18 ವರ್ಷದ ಹರ್ಷ ಹಾಗೂ 16 ವರ್ಷದ ನಯನ ತಬ್ಬಲಿಗಳಾಗಿದ್ದಾರೆ. ತಾಯಿಯ ತವರು ಮನೆಯಲ್ಲಿದ್ದ ಕಾರಣಕ್ಕೆ ಮಕ್ಕಳು ಕರೊನಾದಿಂದ ಪಾರಾಗಿದ್ದಾರೆ. ಸದ್ಯ ಹುಣಸೂರಿನ ತಾಯಿ ಮನೆಯಲ್ಲಿಯೇ ಮಕ್ಕಳು ಆಶ್ರಯ ಪಡೆದಿದ್ದಾರೆ. ಮಕ್ಕಳ ನೆರವಿಗೆ ಬರುವಂತೆ ಸಂಬಂಧಿಗಳು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿ ಸರಳ ವಿವಾಹ

    ಕರೊನಾದಿಂದ ತಾಯಿ ಮೃತಪಟ್ಟ ಸುದ್ದಿ ಕೇಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ!

    ಧೋನಿಯೊಂದಿಗಿನ ಬಾಂಧವ್ಯವನ್ನು ಎರಡೇ ಪದದಲ್ಲಿ ವಿವರಿಸಿದ ಕೊಹ್ಲಿಗೆ ನೆಟ್ಟಿಗರ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts