More

    ಯುದ್ಧ ಪೀಡಿತ ಇಸ್ರೇಲ್​ನಲ್ಲಿ ಸಿಲುಕಿದ ಮೈಸೂರಿನ ಕುಟುಂಬ: ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

    ಮೈಸೂರು: ಯುದ್ಧ ಪೀಡಿತ ಇಸ್ರೇಲ್​ನಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ನಿವಾಸಿ ಕುಟುಂಬ ಸಮೇತ ಸಿಲುಕಿದ್ದು, ರಕ್ಷಣೆಗೆ ಮುಂದಾಗುವಂತೆ ಸರ್ಕಾರವನ್ನು ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ಚೇತನ್, ಪತ್ನಿ ಶಿಲ್ಪಾ ಹಾಗೂ ಎರಡು ವರ್ಷದ ಮಗು ಇಸ್ರೇಲ್​ನ ರಹೋತ್ನದಲ್ಲಿ ಸಿಲುಕಿದ್ದು, ಬಂಕರ್​ನಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿದುಬಂದಿದೆ. ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರ ಗಂಪು ಇಸ್ರೇಲ್​ ಮೇಲೆ ದಾಳಿ ಮಾಡಿದಾಗಿನಿಂದ ಇಸ್ರೇಲ್​-ಹಮಾಸ್​ ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೇ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆಕೊಂಡಿದ್ದಾರೆ. ಜೀವ ಕಳೆದುಕೊಂಡವರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ. ಇದೀಗ ಚೇತನ್​ ಕುಟುಂಬ ಸಹ ಆತಂಕಕ್ಕೀಡಾಗಿದೆ.

    ಕ್ಯಾನ್ಸರ್​​ ರೋಗದ ಕುರಿತು ಉನ್ನತ ಶಿಕ್ಷಣಕ್ಕಾಗಿ ಎರಡು ವರ್ಷದ ಹಿಂದೆ ಚೇತನ್ ಇಸ್ರೇಲ್​ಗೆ ತೆರಳಿದ್ದಾರೆ. ವೈಸ್ ಮ್ಯಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಮಾರ್ಚ್​ ತಿಂಗಳಲ್ಲಿ ಪತ್ನಿ ಮತ್ತು ಮಗುವನ್ನು ಕರೆಸಿಕೊಂಡಿದ್ದರು. ಇದೀಗ ಇಸ್ರೇಲ್​ನಲ್ಲಿ ಯುದ್ಧದ ಪರಿಸ್ಥಿತಿ ಆವರಿಸಿದ್ದು, ಇಡೀ ಕುಟುಂಬ ಆತಂಕದಲ್ಲಿದೆ.

    ವಿಡಿಯೋ ಕಾಲ್ ಮೂಲಕ ಚೇತನ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆತಂಕದಲ್ಲಿ ಸಮಯ ಕಳೆಯುತ್ತಿರುವುದಾಗಿ ಮತ್ತು ಆದಷ್ಟು ಬೇಗ ತಮ್ಮನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಚೇತನ್​ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ. ಯಾರೂ ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಚೇತನ್​ ಕುಟುಂಬಸ್ಥರು ಬೇಸರ ಹೊರಹಾಕಿದ್ದಾರೆ.

    ಕಳೆದ ಶನಿವಾರ (ಅ.7) ಮುಂಜಾನೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್​ ಹಮಾಸ್​ ಉಗ್ರರ ನಡುವೆ ಶುರುವಾದ ಯುದ್ಧದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 3000 ಗಡಿಯನ್ನು ದಾಟಿದೆ. ಯುದ್ಧ ಮುಂದುವರಿದಿದ್ದು, ಜನರು ಆತಂಕದಲ್ಲಿ ಸಮಯ ಕಳೆಯಬೇಕಾದ ಸ್ಥಿತಿಯು ಹಾಗೇ ಉಳಿದಿದೆ. ಹಮಾಸ್​ ಉಗ್ರರಿಂದ ಗಾಜಾಪಟ್ಟಿಯ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್​ ತಿಳಿಸಿದೆ.

    ಇದನ್ನೂ ಓದಿ: ವೈರಲ್ ಆಯ್ತು ಮಾಜಿ ಶಾಸಕ ದಿವಂಗತ ಭೀಮಾ ಮಾಂಡವಿ ಪುತ್ರಿ ವಿಡಿಯೋ; ಟಿಕೆಟ್ ಸಿಗದಿದ್ದಕ್ಕೆ ಅತೃಪ್ತಿ ಬಯಲು

    ಹಮಾಸ್ ಕೇಂದ್ರದ ತವರಾಗಿರುವ ಗಾಜಾ ಪಟ್ಟಣದ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ಭಾರಿ ಬಾಂಬ್ ದಾಳಿ ನಡೆಸಿವೆ. ಇಸ್ರೇಲ್​ನ ವೈಮಾನಿಕ ಬಾಂಬ್ ದಾಳಿಗಳಿಂದ ನಲುಗಿರುವ ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯರು ಪ್ರಾಣ ಉಳಿಸಿಕೊಳ್ಳಲು ಒಂದರಿಂದ ಇನ್ನೊಂದು ಪ್ರದೇಶಕ್ಕೆ ಓಡಾಡುತ್ತಿದ್ದಾರೆ. ಆದರೆ, ಎಲ್ಲಿ ಹೋದರೂ ಅವರಿಗೆ ಸುರಕ್ಷತೆ ಎಂಬುದು ಮರೀಚಿಕೆ ಯಾಗಿದೆ. ಅಂದಾಜು 1,80,000 ಪ್ಯಾಲೆಸ್ತೀನಿಯರು ವಿಶ್ವ ಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

    ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
    ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

    ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)

    ಹಮಾಸ್​ ಉಗ್ರರಿಂದ ಗಾಜಾ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದ ಇಸ್ರೇಲ್​: 3000 ದಾಟಿದ ಸಾವಿನ ಸಂಖ್ಯೆ

    ಇಸ್ರೇಲ್​-ಹಮಾಸ್​ ಯುದ್ಧ: ನಿಜವಾಗುತ್ತಾ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾರ ಭವಿಷ್ಯವಾಣಿ?

    ಇಸ್ರೇಲ್​​​​​ನಲ್ಲಿ ನಾಲ್ಕು ಹಗಲು, ಮೂರು ರಾತ್ರಿ…ಅಮೆರಿಕದಿಂದ ಬಂದ 18 ವರ್ಷದ ನಟಾಲಿ, ಮತ್ತವರ ತಾಯಿ ಜುಡಿತ್ ಎಲ್ಲಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts