More

    ಒಂದು ಹನಿ ನೀರೂ ಚೆಲ್ಲಲಿಲ್ಲ! ಮೈಸೂರು-ಬೆಂಗ್ಳೂರು ರೈಲು ಮಾರ್ಗ ಚಮತ್ಕಾರ

    ಮೈಸೂರು: ರೈಲು ಅತ್ಯಂತ ವೇಗದಲ್ಲಿದ್ದರೂ ಕಂಪಾರ್ಟ್ ಮೆಂಟ್​ನ ಟೇಬಲ್ ಮೇಲಿಟ್ಟಿದ್ದ ಲೋಟದಿಂದ ಹನಿ ನೀರೂ ಹೊರಗೆ ಬೀಳದ ವಿಡಿಯೋ ಅನ್ನು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಹಂಚಿಕೊಂಡಿದ್ದಾರೆ.

    ಸೂರು- ಬೆಂಗಳೂರು ನಡುವಿನ ರೈಲ್ವೆ ಹಳಿಯ ನಿರ್ವಹಣೆ ಕಾರಣದಿಂದಾಗಿ, ಇಂತಹ ಕಾರ್ಯ ಸಾಧ್ಯವಾಗಿದೆ ಎಂದು ವಿಡಿಯೋ ಸಮೇತ ಟ್ವಿಟ್ಟರ್​ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಸಂಚಾರ ಎಷ್ಟು ಸಲೀಸಾಗಿದೆಯೆಂದರೆ, ರೈಲು ಅತಿ ವೇಗದಲ್ಲಿದ್ದರೂ ಲೋಟದಲ್ಲಿದ್ದ ನೀರಿನ ಒಂದು ಹನಿಯೂ ಹೊರಬಿದ್ದಿಲ್ಲ ಎಂದಿದ್ದಾರೆ.

    ಡಿಆರ್​ಎಂ ತಪಾಸಣೆ: 3-4 ತಿಂಗಳಿಂದ ಬೆಂಗಳೂರು ಮತ್ತು ಮೈಸೂರು ರೈಲ್ವೆ ಟ್ರ್ಯಾಕ್​ನಲ್ಲಿ ಸ್ವಲ್ಪ ನಿರ್ವಹಣೆ ಮಾಡಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಬಲ್ಲಾಸ್ಟ್ ಇನ್ಸರ್ಷನ್, ಹಳಿಗಳ ಟ್ಯಾಂಪಿಂಗ್ ಹಾಗೂ ಎಂಬಾರ್ಕ್​ವೆುಂಟ್ ಸದೃಢಗೊಳಿಸುವುದೂ ಸೇರಿ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಡಿಆರ್​ಎಂ ಅಶೋಕ್​ಕುಮಾರ್ ವರ್ವ ಗುರುವಾರ ಗೋಲ್​ಗುಂಬಜ್ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣದಿಂದ ಮೈಸೂರು ರೈಲ್ವೆ ನಿಲ್ದಾಣದವರೆಗೂ ಟ್ರ್ಯಾಕ್ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನಲ್ಲಿಯೇ ಒಂದು ಲೋಟದಲ್ಲಿ ನೀರು ತುಂಬಿ ರೈಲಿನ ಕೊನೇ ಬೋಗಿಯಲ್ಲಿ ಇಟ್ಟಿದ್ದರು. ರೈಲು ಗಂಟೆಗೆ 100 ಕಿ.ಮೀ. ವೇಗದಲ್ಲಿ ಮೈಸೂರು ತಲುಪಿದರೂ ಒಂದು ಹನಿ ನೀರೂ ಚೆಲ್ಲಿರಲಿಲ್ಲ. ಇದನ್ನು ವಿಡಿಯೋ ಮಾಡಿ, ರೈಲ್ವೆ ಸಚಿವರಿಗೆ ವರ್ವ ವರದಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts