More

    ಆ ಪಂದ್ಯದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂದ ಫಾಫ್​ ಡು ಪ್ಲೆಸಿಸ್!

    ಜೊಹಾನ್ಸ್‌ಬರ್ಗ್: ಆ ಕ್ರಿಕೆಟ್ ಪಂದ್ಯವನ್ನು ಆಡಿದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆಯ ಕರೆಗಳು ಬಂದಿದ್ದವು ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್ ಬಹಿರಂಗಪಡಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಕ್ವಾರ್ಟರ್​ಫೈನಲ್ ಪಂದ್ಯದ ಬಗ್ಗೆ ಅವರು ಉಲ್ಲೇಖಿಸಿದ್ದು, ಆ ಪಂದ್ಯದಲ್ಲಿ ಪ್ಲೆಸಿಸ್ ವಿಕೆಟ್ ನಡುವಿನ ಓಟದಲ್ಲಿ ಮಾಡಿದ ಎಡವಟ್ಟಿನಿಂದ ಎಬಿ ಡಿವಿಲಿಯರ್ಸ್‌ ರನೌಟ್ ಆಗಿದ್ದರು.

    ಬಾಂಗ್ಲಾದೇಶದ ಮೀರ್ಪುರದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 222 ರನ್ ಸವಾಲು ಬೆನ್ನಟ್ಟಲು ಸಾಧ್ಯವಾಗದೆ 49 ರನ್‌ಗಳಿಂದ ಸೋಲು ಕಂಡು ವಿಶ್ವಕಪ್‌ನಿಂದ ಹೊರಬಿದ್ದಿತ್ತು. ‘ಆ ಪಂದ್ಯದ ಬಳಿಕ ನನಗೆ, ಪತ್ನಿಗೆ (ಇಮಾರಿ ವಿಸೆರ್) ಜೀವ ಬೆದರಿಕೆಗಳು ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲಿ ನಮಗೆ ಆಗ ಬರೀ ವೈಯಕ್ತಿಕ ಟೀಕೆಗಳೇ ಕಾಣಿಸುತ್ತಿದ್ದವು. ಕೆಲ ಹೊಲಸು ಸಂದೇಶಗಳು ಇದ್ದವು’ ಎಂದು ಪ್ಲೆಸಿಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: VIDEO | ಕ್ರಿಕೆಟಿಗ ರಾಬಿನ್ ಉತ್ತಪ್ಪ ಡಾನ್ಸ್ ವಿಡಿಯೋ ವೈರಲ್

    ಡೇನಿಯಲ್ ವೆಟ್ಟೋರಿ ನೇತೃತ್ವದ 221 ರನ್‌ಗಳಿಗೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 43.2 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್ ಆಗಿತ್ತು. ಅದು ಪ್ಲೆಸಿಸ್‌ಗೆ ವೃತ್ತಿಜೀವನದ ಕೇವಲ 10ನೇ ಏಕದಿನ ಪಂದ್ಯವಾಗಿತ್ತು. ಪ್ಲೆಸಿಸ್ 36 ರನ್ ಗಳಿಸಿ ಔಟಾಗಿದ್ದರು. ಈಗ ಅವರು ದಕ್ಷಿಣ ಆಫ್ರಿಕಾ ಪರ ಒಟ್ಟಾರೆ 143 ಏಕದಿನ, 69 ಟೆಸ್ಟ್, 50 ಏಕದಿನ ಪಂದ್ಯವಾಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಭಾಗವಾಗಿರುವ ಪ್ಲೆಸಿಸ್, ಇತ್ತೀಚೆಗೆ 7 ಪಂದ್ಯಗಳಲ್ಲಿ 320 ರನ್ ಗಳಿಸಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದರು.

    ಕನ್ನಡತಿ ವೇದಾ ಬಳಿಕ ಮತ್ತೋರ್ವ ಮಹಿಳಾ ಕ್ರಿಕೆಟರ್ ತಾಯಿ ಕರೊನಾಗೆ ಬಲಿ

    ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

    ಸುಶೀಲ್‌ಕುಮಾರ್ ಬಗ್ಗೆ ಸುಳಿವು ನೀಡಿ, 1 ಲಕ್ಷ ರೂ. ಬಹುಮಾನ ಗೆಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts