More

  ಇಂದಿರಾ ಗಾಂಧಿ ಹೊಗಳುವುದರಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ, ಇತಿಹಾಸ ತಿಳಿಯದವರು ಹೇಳಿಕೆ ತಿರುಚಿದ್ದಾರೆ: ಸಂಜಯ್​ ರಾವತ್​

  ಮುಂಬೈ: ಅಂಡರ್​​ವರ್ಲ್ಡ್​ ಡಾನ್​ ಕರೀಮ್​ ಲಾಲ್​ರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ಮಾಡಿದ್ದರು ಎಂಬ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಶಿವಸೇನಾ ಸಂಸದ ಸಂಜಯ್​ ರಾವತ್​ ಸ್ಪಷ್ಟನೆ ನೀಡಿದ್ದು, ಇತಿಹಾಸ ತಿಳಿಯದವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಕಿಡಿಕಾರಿದ್ದಾರೆ.

  ಸಂಜಯ್ ರಾವತ್ ಟ್ವೀಟ್ ಮೂಲಕ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ಕರೀಮ್​ ಲಾಲ್​ ಪಠಾಣ್​ ಸಮುದಾಯದ ನಾಯಕರಾಗಿದ್ದರು. ಅವರು “ಪಖ್ತುನ್​-ಇ-ಹಿಂದ್​” ಹೆಸರಿನ ಸಂಘಟನೆಯ ನೇತೃತ್ವ ವಹಿಸಿದ್ದರು. ಈ ನಾಯಕತ್ವದ ಸಾಮರ್ಥ್ಯದಿಂದ ಕರೀಮ್​ ಲಾಲ್​ ಅನೇಕ ಪ್ರಮುಖ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಅವರಲ್ಲಿ ಇಂದಿರಾ ಗಾಂಧಿ ಅವರು ಕೂಡ ಒಬ್ಬರಾಗಿದ್ದರು. ಆದಾಗ್ಯ ಮುಂಬೈ ಇತಿಹಾಸದ ಬಗ್ಗೆ ತಿಳಿಯದವರೂ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

  ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು: ಸಂಜಯ್​ ರಾವತ್​

  ತಮ್ಮ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳುವುದರಲ್ಲಿ ನಾನೆಂದಿಗೂ ಹಿಂದೆ ಸರಿಯುವುದಿಲ್ಲ. ಅಚ್ಚರಿಯೆಂದರೆ ಇಂದಿರಾ ಗಾಂಧಿ ಇತಿಹಾಸ ತಿಳಿಯದವರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಮತ್ತು ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ರಾಜೀವ್​ ಸತವಾ ಹೆಸರನ್ನು ಟ್ವಿಟರ್​ನಲ್ಲಿ ಸಂಜಯ್​ ರಾವತ್​ ಟ್ಯಾಗ್​ ಮಾಡಿದ್ದಾರೆ.

  ಇದಕ್ಕೂ ಮುನ್ನ ಸಂಜಯ್​ ರಾವತ್​ ಹೇಳಿಕೆಯನ್ನು ಕಾಂಗ್ರೆಸ್​ ನಾಯಕರಾದ ಮಿಲಿಂದ್​ ದೇವುರಾ ಮತ್ತು ಸಂಜಯ್​ ನಿರುಪಮ ಟ್ವೀಟ್​ ಮೂಲಕವೇ ಖಂಡಿಸಿದ್ದರು. ತನ್ನ ಹೇಳಿಕೆಯನ್ನು ಹಿಂಪಡೆಯುವಂತೆ ರಾವತ್​ರನ್ನು ಆಗ್ರಹಿಸಿದ್ದರು. ಇಂದಿರಾ ಗಾಂಧಿ ಅವರು ನಿಜವಾದ ದೇಶಪ್ರೇಮಿಯಾಗಿದ್ದರು. ರಾಷ್ಟ್ರದ ರಕ್ಷಣೆ ದೃಷ್ಟಿಯಲ್ಲಿ ಅವರೆಂದಿಗೂ ರಾಜಿಯಾಗುತ್ತಿರಲಿಲ್ಲ ಎಂದು ದೇವುರಾ ತಿರುಗೇಟನ್ನು ನೀಡಿದ್ದಾರೆ.

  ಇದನ್ನೂ ಓದಿ: ಮುಂಬೈ ಅಂಡರ್​ವರ್ಲ್ಡ್​ನಿಂದ ಕಾಂಗ್ರೆಸ್​ ಫಂಡ್​ ಪಡೆಯುತಿತ್ತೇ?: ಸಂಜಯ್​ ರಾವತ್​ ಹೇಳಿಕೆಗೆ ಮಾಜಿ ಸಿಎಂ ಫಡ್ನವಿಸ್ ಪ್ರತಿಕ್ರಿಯೆ​

  ಬುಧವಾರ ಮರಾಠಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್​ ರಾವತ್​ ಮಾತನಾಡಿ, ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್​ವರ್ಲ್ಡ್​ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್​ ಹಾಜಿ ಮಸ್ತಾನ್​ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್​ ರಾವತ್​ ಬಿಚ್ಚಿಟ್ಟಿದ್ದರು. ಇದು ಎಲ್ಲೆ ತೀವ್ರ ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts